ಆರೋಗ್ಯಕ್ಕೆ ಮಾರಕವಾಗಿದೆ ಈ ರಸ್ತೆಬದಿಯ ಟ್ಯಾಟೂ

| Published : Mar 26 2024, 01:01 AM IST

ಆರೋಗ್ಯಕ್ಕೆ ಮಾರಕವಾಗಿದೆ ಈ ರಸ್ತೆಬದಿಯ ಟ್ಯಾಟೂ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ದಿನ ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾದ ಸಣ್ಣ ವಿಷಯದ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳಬೇಕಾದ್ದು, ತಾಲೂಕು ಆರೋಗ್ಯಾಧಿಕಾರಿಯ ಆಧ್ಯ ಕರ್ತವ್ಯವಾಗಿದೆ. ಪಟ್ಟಣದಲ್ಲಿ ಯಾವುದೇ ಮುಂಜಾಗ್ರತೆ ಕ್ರಮಗಳಿಲ್ಲದೇ ರಸ್ತೆಬದಿ ಸಾವಿರಾರು ಯುವಕರಿಗೆ ಟ್ಯಾಟೂ ಹಾಕಿದ್ದಾರೆ.

ಲಕ್ಷ್ಮೀನರಸಿಂಹ ರಥೋತ್ಸವ ದಿನ ಹಚ್ಚೆ ಹಾಕಿಸಿದ ಸಾವಿರಾರು ಯುವಕರು । ಹಚ್ಚೆಗೆ ಒಂದೇ ಸೂಚಿ ಬಳಕೆ । ರೋಧ್ಹರಡುವ ಸಾಧ್ಯತೆಎಚ್.ವಿ.ರವಿಕುಮಾರ್

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ದೇಶದಲ್ಲಿ ಬೇಜವಾಬ್ದಾರಿ ವರ್ತನೆಯಿಂದ ಏಡ್ಸ್ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ ಎಂಬ ಅಂಶ ಎಲ್ಲರಿಗೂ ತಿಳಿದಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದ ವರ್ತನೆಯೂ ಈ ರೀತಿಯ ಕಾಯಿಲೆಗಳ ಏರಿಕೆಗೆ ಪ್ರಮುಖ ಕಾರಣವಾಗಿದೆ. ಗೋಬಿಮಂಚೂರಿಗೆ ಬಳಸುವ ಬಣ್ಣದಿಂದ ಕ್ಯಾನ್ಸರ್ ಹರಡುತ್ತದೆ ಎಂದು ನಿಷೇಧಿಸುವುದಾರೆ, ರಸ್ತೆಬದಿ ಟ್ಯಾಟೂ ಹಾಕುವುದನ್ನು ಮುಖ್ಯವಾಗಿ ನಿಷೇಧಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ದಿನ ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾದ ಸಣ್ಣ ವಿಷಯದ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳಬೇಕಾದ್ದು, ತಾಲೂಕು ಆರೋಗ್ಯಾಧಿಕಾರಿಯ ಆಧ್ಯ ಕರ್ತವ್ಯವಾಗಿದೆ. ಪಟ್ಟಣದಲ್ಲಿ ಯಾವುದೇ ಮುಂಜಾಗ್ರತೆ ಕ್ರಮಗಳಿಲ್ಲದೇ ರಸ್ತೆಬದಿ ಸಾವಿರಾರು ಯುವಕರಿಗೆ ಟ್ಯಾಟೂ ಹಾಕಿದ್ದಾರೆ. ಈ ವಿಷಯದಲ್ಲಿ ಕಣ್ಣು ಮುಚ್ಚಿ ಕುಳಿತ ತಾಲೂಕು ಆರೋಗ್ಯಾಧಿಕಾರಿಗೆ ಜವಾಬ್ದಾರಿ ಇಲ್ಲವೇ? ಎಂದು ಅನೇಕರು ಪ್ರಶ್ನಿಸಿದ್ದಾರೆ.

ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಭಾನುವಾರ ನಡೆದಿದೆ. ಜತೆಗೆ ಹಲವಾರು ಬಗೆಯ ಅಂಗಡಿ, ಮುಂಗಟ್ಟುಗಳು, ಆಟಿಕೆ ಸಾಮಾನುಗಳು ಹಾಗೂ ಟ್ಯಾಟೂ ಹಾಕುವ ೨೦ಕ್ಕೂ ಹೆಚ್ಚು ಯುವಕರ ತಂಡ ಆಗಮಿಸಿದೆ. ಈ ಯುವಕರು ಭಾನುವಾರ ಜಾತ್ರೆಯ ದಿನ ಸಾವಿರಾರು ಯುವಕರು, ಯುವತಿಯರು, ಪ್ರೇಮಿಗಳು ಹಾಗೂ ಪುಟ್ಟ ಮಕ್ಕಳಿಗೆ ಟ್ಯಾಟೂ ಹಾಕಿದ್ದಾರೆ, ಆದರೆ ಇವರು ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೇ ಟ್ಯಾಟೂ ಹಾಕಿದ್ದಾರೆ. ಕೇಳಿದವರಿಗೆ ಮಾತ್ರ ಸೂಜಿ ಬದಲಿಸುವ ಇವರು, ಟ್ಯಾಟೂ ಹಾಕಲು ಎಲ್ಲರಿಗೂ ಒಂದೇ ಡಬ್ಬಿಯ ದ್ರಾವಣಕ್ಕೆ ಸೂಜಿಯನ್ನು ಮುಳುಗಿಸಿ ಹಚ್ಚೆ ಹಾಕಿದ್ದಾರೆ. ರೋಗ ಹರಡಲು ಈ ಒಂದು ಕಾರ್ಯ ಸಾಕಲ್ಲವೆ?.

ತಾಲೂಕು ಆರೋಗ್ಯಧಿಕಾರಿ ಡಾ. ರಾಜೇಶ್ ಅವರನ್ನು ಸೋಮವಾರ ಈ ಬಗ್ಗೆ ಪ್ರಶ್ನಿಸಿದಾಗ ಪರಿಶೀಲನೆ ನಡೆಸುತ್ತೇನೆ ಎಂದು ಉತ್ತರಿಸಿದ್ದಾರೆ. ಆದರೆ ಭಾನುವಾರ ಟ್ಯಾಟೂ ಹಾಕಿಸಿಕೊಂಡ ಸಾರ್ವಜನಿಕರು ಕಾಯಿಲೆಗೆ ತುತ್ತಾದರೇ ಯಾರು ಹೊಣೆ ಎಂಬ ಪ್ರಶ್ನೆ ಮೂಡಿದೆ.

ಸೋಮವಾರ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಮತಾಜ್ ಉನ್ನೀಸ ಆಗಮಿಸಿ, ಅಗತ್ಯ ಕ್ರಮಕೈಗಳ್ಳದೇ ಪರವಾನಗಿ ಪಡೆದಿರುವ ಬಗ್ಗೆ ಪ್ರಶ್ನಿಸಿ, ಮೊಬೈಲ್ ಕೈಯಲ್ಲಿ ಹಿಡಿದು ಗಹನ ಚರ್ಚೆಯಲ್ಲಿ ತೊಡಗಿರುವಂತೆ ಮಾತನಾಡುತ್ತಿದ್ದರು, ಆದರೆ ಟ್ಯಾಟೂ ಹಾಕುತ್ತಿದ್ದ ಯುವಕರು ಈ ಒಂದು ಗುಂಪಿನಲ್ಲಿ ತಮ್ಮ ಪದಾರ್ಥದೊಂದಿಗೆ ಕಾಲ್ಕಿತ್ತರು. ನಂತರ ಇಬ್ಬರು ಯುವಕರ ಆಧಾರ್ ಕಾರ್ಡ್ ಪಡೆದಿರುವ ಬಗ್ಗೆ ತಾಲೂಕು ಆರೋಗ್ಯ ಅಧಿಕಾರಿ ತಿಳಿಸಿದರು, ಜಾತ್ರಾ ಮಹೋತ್ಸವದಲ್ಲಿ ಟ್ಯಾಟೂ ಹಾಕಿಸಿಕೊಂಡ ಸಾರ್ವಜನಿಕರಿಗೆ ಯಾವುದೇ ರೀತಿಯ ಕಾಯಿಲೆ ಅಥವಾ ಅನಾಹುತ ನಡೆದಿದ್ದಲ್ಲಿ ತಾಲೂ ಆರೋಗ್ಯಾಧಿಕಾರಿ ಸಂಪೂರ್ಣ ಜವಾಬ್ದಾರಾರು ಜತೆಗೆ ಹಣ ಉಳಿಸುವ ಸಲುವಾಗಿ ಯಾವುದೇ ಮುಂಜಾಗ್ರತೆ ಕ್ರಮ ಕೈಗಳ್ಳದೇ ಟ್ಯಾಟೂ ಹಾಕಿಸಿಕೊಳ್ಳುವ ಯುವ ಜನತೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.ಹೊಳೆನರಸೀಪುರ ಪಟ್ಟಣದಲ್ಲಿ ರಸ್ತೆ ಬದಿ ಕುಳಿತು ಎದೆಯ ಮೇಲೆ ಟ್ಯಾಟು ಹಾಕಿಸಿಕೊಳ್ಳುತ್ತಿರುವ ಯುವತಿ.