ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ರಕ್ಷಾರಾಮಯ್ಯ ಈ ಬಾರೀ ಗೆಲ್ಲುವುದು ಅಷ್ಟೇ ಸತ್ಯ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು. ಗುರುವಾರ ನಗರದ ಮೂರ್ತಿ ನರ್ಸಿಂಗ್ ಹೋಮ್ ಬಳಿಯಿಂದ ಅಂಬೇಡ್ಕರ್ ವೃತ್ತದ ವರೆಗೂ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾರಾಮಯ್ಯ ಪರ ರೋಡ್ ಶೋ ನಡೆಸಿ ನಂತರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.ರಕ್ಷಾರಾಮಯ್ಯ ನೂರಕ್ಕೆ ನೂರು ಗೆಲ್ಲುತ್ತಾರೆ: ನಿಮ್ಮ ಉತ್ಸಾಹ ನೋಡಿದರೆ ನೂರಕ್ಕೆ ನೂರು ರಕ್ಷಾರಾಮಯ್ಯ ಗೆಲ್ಲುತ್ತಾರೆ. ರಕ್ಷಾರಾಮಯ್ಯ ಅವರನ್ನು ನೀವೆಲ್ಲಾ ಗೆಲ್ಲಿಸುತ್ತೀರಾ ಎಂದು ನಂಬಿಕೆ ಇದೆ. ಎನ್‌ಡಿಎ ಅಭ್ಯರ್ಥಿ ಸೋತರೆ ಮಾತ್ರ ಈ ಕ್ಷೇತ್ರ ಉಳಿಯುತ್ತೆ.
ಬಿಜೆಪಿ ಸೋಲುವುದು ಗ್ಯಾರಂಟಿದೇಶದಲ್ಲಿ 10 ವರ್ಷಗಳಿಂದ ಇರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸೋಲುವುದು ಗ್ಯಾರಂಟಿ ಎಂದು ಗೋತ್ತಾಗಿದೆ. ಅದರ ಪ್ರಕಾರನೇ 200 ನಿಂದ 220 ಸ್ಥಾನ ಪಡೆದು ಸೋತು. ಕಾಂಗ್ರೆಸ್ ಗೆದ್ದೆ ಗೆಲ್ಲುತ್ತೆ ಎಂಬ ವಿಶ್ವಾಸ ಇದೆ. ಇದಕ್ಕೆ ಕಾರಣ ಮೋದಿ 10 ವರ್ಷ ಪ್ರಧಾನಿಯಾಗಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲಾ ಸುಳ್ಳು ಹೇಳಿದ್ದಾರೆ. 2014 ರಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರಿಗೆ 15 ಲಕ್ಷ ಕೊಡುತ್ತೇನೆಂದು ಹೇಳಿದರು. 10 ವರ್ಷ ವಾಯ್ತು ಯಾರ ಅಕೌಂಟ್ ಗೂ ಹಣ ಬಂದಿಲ್ಲಾ. ಇದುವರೆಗೂ ಸ್ವಾಮಿನಾಥನ್ ವರದಿಯ ಎಂಎಸ್ ಪಿ ಕಾಯ್ದೆ ಮಾಡಲಿಲ್ಲಾ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದರು.ಗ್ಯಾರಂಟಿಯಿಂದ ಹಲವರಿಗೆ ಉಪಯೋಗವಾಗಿದೆ: ಆಹಾರ ಪದಾರ್ಥಗಳು ಸೇರಿದಂತೆ ಹಲವು ಬೆಲೆಗಳು ಜಾಸ್ತಿಯಾಗಿವೆ. ಅದಕ್ಕಾಗಿ ನಾನು ಮತ್ತು ಡಿ.ಕೆ.ಶಿವಕುಮಾರ್ 5 ಗ್ಯಾರಂಟಿ ಗಳನ್ನು ಕೊಟ್ಟಿದ್ದೇವೆ. ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಎಲ್ಲಾ ಗ್ಯಾರಂಟಿಯನ್ನು ಈಡೇರಿಸಿದ್ದೇವೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಗೃಹ ಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಬಹಳಷ್ಟು ಜನ ಟಿವಿ ಪ್ರಿಡ್ಜ್, ವಾಷಿಂಗ್ ಮಿಷಿನ್, ವಿದ್ಯಾರ್ಥಿಗೆ ಸಹಾಯವಾಗಿದೆ. ಶಕ್ತಿ ಯೋಜನೆಯಲ್ಲಿ ಇದುವರೆಗೂ 1.91 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ನಮ್ಮ ಸರ್ಕಾರ ರಾಜ್ಯದಲ್ಲಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುತ್ತಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತೀ ಅರ್ಹ ಕುಟುಂಬದ ಮಹಿಳೆಯರ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರು. ಜಮೆ ಆಗುತ್ತದೆ. ರಾಜ್ಯ ಸರ್ಕಾರ ಕೊಡುವ ಪ್ರತಿ ತಿಂಗಳ 2 ಸಾವಿರ ರು.ಕೂಡ ಇದಕ್ಕೆ ಸೇರಿ ವರ್ಷಕ್ಕೆ ಒಂದು ಲಕ್ಷದ 24 ಸಾವಿರ ರೂಪಾಯಿ ಪ್ರತೀ ಕುಟುಂಬಗಳ ಖಾತೆಗೆ ಬರುತ್ತದೆ ಎಂದು ಘೋಷಿಸಿದರು. ಇದರ ಜತೆಗೆ ಇಡೀ ದೇಶದ ಅಷ್ಟೂ ರೈತರ ಸಾಲ ಮನ್ನಾ ಮಾಡಲಾಗುವುದು. ನೂರಕ್ಕೆ ನೂರು ಈ ಬಾರಿ ರಕ್ಷಾ ರಾಮಯ್ಯ ಗೆಲ್ಲುತ್ತಾರೆ. ಇವರಿಗೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಆಶೀರ್ವಾದ ಇರಲಿ ಎಂದು ಕೋರಿದರು.
ಈ ವೇಳೆ ಸಚಿವ ಎಂ.ಸಿ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ವಿಪ ಸದಸ್ಯ ನಸೀರ್ ಅಹಮದ್, ಎಂ.ಆರ್.ಸೀತಾರಾಮ್, ಅಭ್ಯರ್ಥಿ ಎಂ.ಎಸ್.ರಕ್ಷಾರಾಮಯ್ಯ. ಮಾಜಿ ಶಾಸಕ ವಿ.ಮುನಿಯಪ್ಪ, ಕೆ.ಪಿ.ಬಚ್ಚೇಗೌಡ, ಎಸ್.ಎಂ.ಮುನಿಯಪ್ಪ,ಎನ್.ಸಂಪೆಂಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಹಾಗೂ ಹಲವು ಮುಖಂಡರಿದ್ದರು.