ಮೈಸೂರಿನ ಕಾವೇರಿ ಹೃದಯ ಮತ್ತು ಬಹು ವಿಶೇಷತೆ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆಯ ಅನುಭವಿ ವೈದ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು,

ಕನ್ನಡಪ್ರಭ ವಾರ್ತೆ ಮೈಸೂರುನಗರದ ಕಾವೇರಿ ನರ್ಸಿಂಗ್ ಕಾಲೇಜು, ನರ್ಸಿಂಗ್ ಸ್ಕೂಲ್ ಹಾಗೂ ಸೇಂಟ್ ಅಲೋನ್ಸಾ ನರ್ಸಿಂಗ್ ಕಾಲೇಜಿನ ಜಂಟಿ ಆಶ್ರಯದಲ್ಲಿ ತುರ್ತು ಪ್ರಸೂತಿ ಆರೈಕೆ: ಮೌಲ್ಯಮಾಪನದಿಂದ ಜೀವ ರಕ್ಷಕ ಚಿಕಿತ್ಸೆಯವರೆಗೆ ಎಂಬ ವಿಷಯ ಕುರಿತು ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು.ಕಾವೇರಿ ಸಮೂಹ ವಿದ್ಯಾಸಂಸ್ಥೆಯ ''''''''ಅಡ್ವಾನ್ಸ್ ಲ್ಯಾಬ್'''''''' ನಲ್ಲಿ ನಡೆದ ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಸಿಮ್ಯುಲೇಶನ್- ಆಧಾರಿತ ಪ್ರಾಯೋಗಿಕ ವೈದ್ಯಕೀಯ ತರಬೇತಿ ಪಡೆಯಲು ಉತ್ತಮ ವೇದಿಕೆ ಒದಗಿಸಿಕೊಟ್ಟಿತು.ಈ ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷ ಡಾ.ಜಿ.ಆರ್. ಚಂದ್ರಶೇಖರ್ ಮತ್ತು ಎಂಡಿ ಡಾ. ಸರಳಾ ಚಂದ್ರಶೇಖರ್ ಅವರ ಮಾರ್ಗದರ್ಶನ ಹಾಗೂ ಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಯಿತು.ಕಾರ್ಯಾಗಾರವನ್ನು ಕಾವೇರಿ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ.ಎನ್. ರಾಜ್‌ ಕಣ್ಣನ್ ಹಾಗೂ ಸೇಂಟ್ ಅಲೋನ್ಸಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಎಸ್‌. ದೀಪ್ತಿ ಸಂಯೋಜಿಸಿದ್ದರು.ಕಾರ್ಯಾಗಾರದಲ್ಲಿ ಮೈಸೂರಿನ ಕಾವೇರಿ ಹೃದಯ ಮತ್ತು ಬಹು ವಿಶೇಷತೆ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆಯ ಅನುಭವಿ ವೈದ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು, ತುರ್ತು ಪ್ರಸೂತಿ ಮೌಲ್ಯಮಾಪನ, ಅದಕ್ಕೆ ಸಂಬಂಧಿಸಿದ ತೊಡಕು ಹಾಗೂ ಜೀವ ರಕ್ಷಕ ಚಿಕಿತ್ಸಾ ಕ್ರಮಗಳ ಕುರಿತು ಪ್ರಾಯೋಗಿಕ ಜ್ಞಾನ ಮತ್ತು ಅನುಭವ ಹಂಚಿಕೊಂಡರು.