ಈ ವರ್ಷ ವಿಶೇಷ ಎನ್ನುವಂತೆ ಜಿಲೇಬಿ, ಮೈಸೂರು ಪಾಕ, ಮಿರ್ಚಿ ಭಜಿ, ಕೆಂಪು ಚಟ್ನಿ, ರೊಟ್ಟಿ, ಶೇಂಗಾ ಹೊಳಿಗೆ, ಉಪ್ಪಿನಕಾಯಿ ಹೀಗೆ ನಾನಾ ಭೋಜನಗಳ ಮೇನು ಇರುತ್ತಿತ್ತು

ಕೊಪ್ಪಳ: ಗವಿಸಿದ್ಧೇಶ್ವರ ಮಹಾದಾಸೋಹಕ್ಕೆ ಭಕ್ತರು ಒಂದಿಲ್ಲ ಒಂದು ಹೊಸ ಖಾದ್ಯ, ಅಡುಗೆ ಮಾಡುವ ಮೂಲಕ ವಿಭಿನ್ನತೆ ಸೇವೆ ಸಲ್ಲಿಸುತ್ತಿದ್ದಾರೆ. ಮಹಾದಾಸೋಹದ ರುಚಿ ಒಂದಿಲ್ಲ ಒಂದು ಖಾದ್ಯ ಪ್ರತಿ ವರ್ಷ ಹೆಚ್ಚಿಸುತ್ತಾ ಬಂದಿದೆ. ಈ ವರ್ಷ ಮಹಾದಾಸೋಹದ ಪ್ರಸಾದದ ರುಚಿ ಹಪ್ಪಳ ಹೆಚ್ಚಿಸಿದೆ.

ಈ ವರ್ಷ ವಿಶೇಷ ಎನ್ನುವಂತೆ ಜಿಲೇಬಿ, ಮೈಸೂರು ಪಾಕ, ಮಿರ್ಚಿ ಭಜಿ, ಕೆಂಪು ಚಟ್ನಿ, ರೊಟ್ಟಿ, ಶೇಂಗಾ ಹೊಳಿಗೆ, ಉಪ್ಪಿನಕಾಯಿ ಹೀಗೆ ನಾನಾ ಭೋಜನಗಳ ಮೇನು ಇರುತ್ತಿತ್ತು. ಇವೆಲ್ಲ ಭೋಜನಕ್ಕೂ ರುಚಿ ಹೆಚ್ಚಿಸುವ ಹಪ್ಪಳದ ಸಪ್ಪಳ ಈ ಸಲ ದಾಸೋಹದಲ್ಲಾಗಿದೆ.100 ಕಿಮೀ ದೂರದ ಬಳ್ಳಾರಿ ಜಿಲ್ಲೆಯ ಸಿರಿಗೇರಿಯಿಂದ ಆಗಮಿಸಿದ ಸಿರಿಗೇರಿ ಗ್ರಾಮಸ್ಥರು ಕೊಪ್ಪಳ ನಗರದ ಗವಿಮಠಕ್ಕೆ ಬಂದು ಜಾತ್ರೆಯಲ್ಲಿ ಹಪ್ಪಳ ಕರೆದು ಈ ವರ್ಷದ ಜಾತ್ರೆಯಲ್ಲಿ ಭಕ್ತರಿಗೆ ಉಣಬಡಿಸಿದ್ದಾರೆ.

೫೦ಜನ ಬಾಣಸಿಗರಿಂದ ಹಪ್ಪಳದ ತಯಾರಿಕೆ: 50 ಜನ ಬಾಣಸಿಗರಿಂದ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಮೂರನೇ ದಿನವಾದ ಬುಧವಾರ ವಿಶೇಷ ಖಾದ್ಯ ಹಪ್ಪಳ ತಯಾರಿಸಿ ವಿತರಿಸಲಾಯಿತು.

ಕಳೆದ ೮ ವರ್ಷಗಳಿಂದ ಜಾತ್ರೆಗೆ ಮಿರ್ಚಿ, ಜಿಲೇಬಿ ತಯಾರಿಕೆಯ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿರಿಗೇರೆಯ ಗವಿಶ್ರೀ ಸ್ನೇಹ ಗೆಳೆಯರ ಬಳಗ ಹಾಗೂ ಉದಯ ಗ್ರೂಪ್ ಗೆಳೆಯರ ಬಳಗ ಹಾಗೂ ಸಿದ್ರಾಂಪುರ,ಹಾವಿನಾಳ,ಸಿರಿಗೇರಿ,ದಾಸಾಪುರ, ಕೊಂಚಗೇರಿ, ಮುತ್ತಟ್ ನೂರು, ಗುಂಡಿಗನೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಈ ವರ್ಷ ಹಪ್ಪಳ ವಿತರಣಾ ಸೇವೆ ಜರುಗಿತು.

ಐದು ಲಕ್ಷ ಹಪ್ಪಳ: ಹಪ್ಪಳ ತಯಾರಿಕೆಗೆ ೧೪ ಡಬ್ಬಿ ಎಣ್ಣೆ, ಹಪ್ಪಳ ತಯಾರಿಕೆಗೆ ೫೦ ಜನ ಬಾಣಸಿಗರು ಹಾಗೂ ಅವರಿಗೆ ೨೦ಜನ ಸಹಾಯ ಮಾಡುವುದರ ಮೂಲಕ ಹಪ್ಪಳ ತಯಾರಿಕೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಒಟ್ಟು ೫ ಲಕ್ಷ ಹಪ್ಪಳ ತಯಾರಿಸುವುದರ ಮೂಲಕ ಜಾತ್ರೆಗೆ ಬಂದ ಭಕ್ತಾಧಿಗಳಿಗೆ ವಿತರಿಸಲಾಯಿತು. ಹಪ್ಪಳ ಸವೆದ ಭಕ್ತರು ಕೆಲಹೊತ್ತು ಚಾಕಚಕಿತರಾಗಿ ಈ ವರ್ಷ ಹಪ್ಪಳ ಸಹ ಮಾಡಿದ್ದಾರೆ. ನೋಡು ಎಂದು ಬಣ್ಣಿಸಿದರು.

ಜಾತ್ರೆಯ ಮಹಾದಾಸೋಹಕ್ಕೆ ಹಪ್ಪಳ ತಯಾರಿಸಿ ವಿತರಿಸಲಾಗಿದೆ. ಸುಮಾರು ಐದು ಲಕ್ಷ ಹಪ್ಪಳ ತಯಾರಿ ಮಾಡಲಾಗಿದೆ. ಅಜ್ಜನ ಸೇವೆಗೆ ನಾವುಗಳು ಪ್ರತಿ ವರ್ಷ ಬರುತ್ತಿದ್ದು, ಜಾತ್ರೆಯ ಮೂರನೇ ದಿನ ಬುಧವಾರ ಹಪ್ಪಳ ತಯಾರಿಸಲಾಗಿದೆ. ಸುಮಾರು ಐದು ಲಕ್ಷ ಹಪ್ಪಳ ತಯಾರು ಮಾಡಲಾಗಿದೆ ಎಂದು ಬಳ್ಳಾರಿ ಜಿಲ್ಲೆಯ ಸಿರಿಗೇರಿ ಗ್ರಾಮದ ಗವಿಶ್ರೀ ಸ್ನೇಹ ಬಳಗದವರು ತಿಳಿಸಿದ್ದಾರೆ.