ಸಾರಾಂಶ
ತಾಲೂಕಿನಾದ್ಯಂತ 13 ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ, ಬಾಗಿಲು ಬಂದ್ ಮಾಡಿಸಿದ್ದೇವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಹೇಮಾವತಿ ತಿಳಿಸಿದರು. ಸೋಂಪುರ ಹೋಬಳಿಯಲ್ಲಿ 5 ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ನೋಟೀಸ್ ನೀಡಿ ಬೀಗ ಜಡಿದು, ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಪರವನಾಗಿ ಇಲ್ಲದೆ ಅನಧಿಕೃತವಾಗಿ ಕೆ.ಪಿ.ಎಂ.ಇ (ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಬಲೀಶ್‌ಮೆಂಟ್ ಆಕ್ಟ್) 2009 ಪ್ರಕಾರ ನಮೂದಿಸಿದೇ, ನೋಟೀಸ್ ನೀಡಿದರೂ ಸ್ಪಂದಿಸದ ಕ್ಲಿನಿಕ್‌ಗಳಾದ, ದಾಬಸ್ ಪೇಟೆ ಪಟ್ಟಣದ ಮೂಲವ್ಯಾಧಿ ಚಿಕಿತ್ಸಾಲಯ, ಪೆಮ್ಮನಹಳ್ಳಿಯ ಶ್ರೀ ತಿರುಮಲ ಕ್ಲಿನಿಕ್, ನಿಡವಂದದ ಸಿದ್ದಗಂಗಾ, ಶ್ರೀ ಮಾರುತಿ, ಶ್ರೀ ನಂದಿ ಹಾಗೂ ನರಸೀಪುರದ ಮಾರುತಿ ಕ್ಲಿನಿಕ್‌ಗಳನ್ನು ಸೀಜ್ ಮಾಡಿ ನಂತರ ನೋಟೀಸ್‌ನ್ನು ಕ್ಲಿನಿಕ್ ಗಳ ಮುಂಭಾಗಕ್ಕೆ ಅಂಟಿಸಿದ್ದೇವೆ ಎಂದರು.
ತಾಲೂಕಿನಾದ್ಯಂತ 13 ಕ್ಲಿನಿಕ್ ಗಳ ಬಾಗಿಲು ಬಂದ್ । ಸೋಂಪುರ ಹೋಬಳಿಯ 5 ಕ್ಲಿನಿಕ್ ಗಳಿಗೆ ನೋಟಿಸ್ ಜಾರಿ
ಕನ್ನಡ ಪ್ರಭ ವಾರ್ತೆ ದಾಬಸ್ಪೇಟೆತಾಲೂಕಿನಾದ್ಯಂತ 13 ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ, ಬಾಗಿಲು ಬಂದ್ ಮಾಡಿಸಿದ್ದೇವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಹೇಮಾವತಿ ತಿಳಿಸಿದರು.
ಸೋಂಪುರ ಹೋಬಳಿಯಲ್ಲಿ 5 ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ನೋಟೀಸ್ ನೀಡಿ ಬೀಗ ಜಡಿದು, ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಪರವನಾಗಿ ಇಲ್ಲದೆ ಅನಧಿಕೃತವಾಗಿ ಕೆ.ಪಿ.ಎಂ.ಇ (ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಬಲೀಶ್‌ಮೆಂಟ್ ಆಕ್ಟ್) 2009 ಪ್ರಕಾರ ನಮೂದಿಸಿದೇ, ನೋಟೀಸ್ ನೀಡಿದರೂ ಸ್ಪಂದಿಸದ ಕ್ಲಿನಿಕ್‌ಗಳಾದ, ದಾಬಸ್ ಪೇಟೆ ಪಟ್ಟಣದ ಮೂಲವ್ಯಾಧಿ ಚಿಕಿತ್ಸಾಲಯ, ಪೆಮ್ಮನಹಳ್ಳಿಯ ಶ್ರೀ ತಿರುಮಲ ಕ್ಲಿನಿಕ್, ನಿಡವಂದದ ಸಿದ್ದಗಂಗಾ, ಶ್ರೀ ಮಾರುತಿ, ಶ್ರೀ ನಂದಿ ಹಾಗೂ ನರಸೀಪುರದ ಮಾರುತಿ ಕ್ಲಿನಿಕ್‌ಗಳನ್ನು ಸೀಜ್ ಮಾಡಿ ನಂತರ ನೋಟೀಸ್‌ನ್ನು ಕ್ಲಿನಿಕ್ ಗಳ ಮುಂಭಾಗಕ್ಕೆ ಅಂಟಿಸಿದ್ದೇವೆ ಎಂದರು.ಮಧ್ಯವರ್ತಿಗಳು ಬೇಡ:
ಅಕ್ಟ್ ಗೆ ಒಳಪಡದವರು ವಿದ್ಯಾರ್ಹತೆ ಸರಿಯಾಗಿ ಇಲ್ಲದಿರುವುದು, ಅನ್ ಲೈನ್ ಪ್ರಕ್ರಿಯೆ ತಿಳಿಯದೇ ಮಧ್ಯವರ್ತಿಗಳು ಮೊರೆಹೋಗುವುದಕ್ಕಿಂತ, ನೇರವಾಗಿ ಆರೋಗ್ಯ ಇಲಾಖೆ ಸಂಪರ್ಕ ಮಾಡಿದರೆ ಸೂಕ್ತ ಸಲಹೆ ನೀಡುತ್ತೇವೆ, ಡಿ.ಎಚ್.ಓ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ದಾಳಿ ನಡೆದಿದೆ ಎಂದರು.ಪೊಲೀಸರಿಗೆ ದೂರು ನೀಡುತ್ತೇನೆ:
ಟಿ.ಎಚ್.ಓ ಹೆಸರು ಬಳಸಿ, ಕ್ಲಿನಿಕ್‌ಗಳ ಮೇಲೆ ಕೆಲ ವ್ಯಕ್ತಿಗಳು ಮತ್ತು ಸಂಘಟನೆಯವರು ನಕಲಿ ದಾಳಿ ನಡೆದಿರುವ ಬಗ್ಗೆ ಮಾಹಿತಿಲ್ಲ, ಒಂದು ವೇಳೆ ಹಣಕ್ಕಾಗಿ ನಕಲಿ ದಾಳಿ ಬಗ್ಗೆ ಸಾಕ್ಷ್ಯ ಮತ್ತು ದಾಖಲೆ ಸಿಕ್ಕಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುತ್ತೇನೆ ಮತ್ತು ಪೊಲೀಸರಿಗೆ ದೂರು ನೀಡುತ್ತೇನೆ ಎಂದರು.ಭ್ರೂಣ ಹತ್ಯೆ ಬಗ್ಗೆ ಮಾಹಿತಿ ನೀಡಿ:
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಸೋಂಪುರ ಹೋಬಳಿಯಲ್ಲಿ ಭ್ರೂಣ ಹತ್ಯೆ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಇಂದು ರಾಜ್ಯಾದ್ಯಾಂತ ಭ್ರೂಣ ಹತ್ಯೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಹೋಬಳಿಯಲ್ಲಿ ಯಾವುದಾದರೂ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರೆ ಮುಲಾಜಿಲ್ಲದೆ ಕ್ರಮ ವಹಿಸಿ ಆಸ್ಪತ್ರೆಯ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.ಆರೊಗ್ಯ ನಿರೀಕ್ಷಣಾಧಿಕಾರಿ ನಾಗೇಶ್, ಸಿಬ್ಬಂದಿ ಮಂಜುನಾಥ್, ನಾಗರ್ಜುನ್, ಚಾಲಕ ಗಿರೀಶ್, ಪೊಲೀಸ್ ಪೇದೆ ಪೀರ್ ಸಾಬ್ ಇನ್ನಿತರರಿದ್ದರು.
---ಸೋಂಪುರ ಹೋಬಳಿಯ ನಿಡವಂದ ಗ್ರಾಮದಲ್ಲಿ ಅನಧಿಕೃತ ಕ್ಲಿನಿಕ್ ಗಳ ಮೇಲೆ ತಾಲೂಕು ವೈದ್ಯಾಧಿಕಾರಿ ಡಾ.ಹೇಮಾವತಿ ಮತ್ತು ಸಿಬ್ಬಂದಿ ದಾಳಿ ನಡೆಸಿದರು.