ಸಾರಾಂಶ
ನಿಟ್ಟೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ತೋಕೂರಿನ ಮೂಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿಶ್ವ ಧ್ಯಾನ ದಿನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಯೋಗ ಮತ್ತು ಧ್ಯಾನ ಗಾಡಿಯ ಎರಡು ಚಕ್ರಗಳಾಗಿದ್ದು, ವಿದ್ಯಾರ್ಥಿಗಳು ಯೋಗದೊಂದಿಗೆ ಧ್ಯಾನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಶೈಕ್ಷಣಿಕವಾಗಿ ಬಹಳಷ್ಟು ಸಾಧನೆಗಳನ್ನು ಮಾಡಬಹುದೆಂದು ನಿವೃತ್ತ ಪ್ರಾಂಶುಪಾಲ ಯಶವಂತ ಎನ್. ಸಾಲ್ಯಾನ್ ಹೇಳಿದರು.ನಿಟ್ಟೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ತೋಕೂರಿನ ಮೂಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾದ ವಿಶ್ವ ಧ್ಯಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಹಾಗೂ ಪತಂಜಲಿ ಯೋಗ ಸಮಿತಿ ಮಂಗಳೂರಿನ ಅಧ್ಯಕ್ಷ ರಾಘವೇಂದ್ರ ರಾವ್, ವಿಶ್ವ ಧ್ಯಾನ ದಿನದ ಮಹತ್ವವನ್ನು ನೀಡಿ ವಿದ್ಯಾರ್ಥಿಗಳಿಗೆ ಯೋಗ ಮತ್ತು ಧ್ಯಾನ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಹರಿ ಎಚ್. ವಹಿಸಿದ್ದರು. ಸಂಸ್ಥೆಯ ತರಬೇತಿ ಅಧಿಕಾರಿ ರಾಘವೇಂದ್ರ ಅಡಿಗ ಎನ್.ಎಲ್. ಮತ್ತಿತರರಿದ್ದರು.
ವಿದ್ಯಾರ್ಥಿ, ಆರ್.ಎ.ಸಿ.ಟಿ. ವೃತ್ತಿಯ ಅಮ್ಮನ್ ಸ್ವಾಗತಿಸಿದರು. ಶರತ್ ವಂದಿಸಿದರು. ತೀರ್ಥನ್ ನಿರೂಪಿಸಿದರು.