ತೋಳೂರು ಶೆಟ್ಟಳ್ಳಿ ವ್ಯಾಪ್ತಿ ಕುಡಿಯುವ ನೀರಿಗೆ ಹಾಹಾಕಾರ: ಗ್ರಾಮಸ್ಥರ ಆಕ್ರೋಶ

| Published : May 21 2025, 12:04 AM IST

ತೋಳೂರು ಶೆಟ್ಟಳ್ಳಿ ವ್ಯಾಪ್ತಿ ಕುಡಿಯುವ ನೀರಿಗೆ ಹಾಹಾಕಾರ: ಗ್ರಾಮಸ್ಥರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಇನಕನಹಳ್ಳಿ ಗ್ರಾಮದ ನೇತಾಜಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು ಸ್ಥಳೀಯ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಇನಕನಹಳ್ಳಿ ಗ್ರಾಮದ ನೇತಾಜಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಸ್ಥಳೀಯ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಕಳೆದ 25 ದಿನಗಳಿಂದ ನೀರಿಗೆ ಸಮಸ್ಯೆಯಾಗಿದ್ದು, ಗ್ರಾಮಸ್ಥರೆ ಸ್ವತಃ ಖಾಸಗಿ ವಾಹನಗಳಲ್ಲಿ ದಿನಕ್ಕೆ ಐದುನೂರು ರುಪಾಯಿ ವ್ಯಯಿಸಿ ಕುಡಿಯುವ ನೀರು ತಂದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕೂಲಿ ಕಾರ್ಮಿಕರೇ ವಾಸಿಸುತ್ತಿದ್ದು, ಅಧಿಕಾರಿಗಳು ರಸ್ತೆ ಕಾಮಗಾರಿಯ ನೆಪ ಹೇಳಿ, ನೀರಿನ ಸರಬರಾಜಿಗೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ದೂರಿದರು. ಸೋಮವಾರ ಕೊಡಗು ಜಿಲ್ಲಾ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ನೇತೃತ್ವದಲ್ಲಿ, ತಾಲೂಕು ಪಂಚಾಯಿತಿ ಮುಖ್ಯಾಧಿಕಾರಿ ಪರಮೇಶಕುಮಾರ್ ಅವರಿಗೆ ಸಮಸ್ಯೆಯನ್ನು ಗಮನಕ್ಕೆ ತಂದು, ಕೂಡಲೇ ಬಗೆಹರಿಸುವಂತೆ ಮನವಿ ಸಲ್ಲಿಸಿದರು. ತಪ್ಪಿದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಮನವಿ ಸಲ್ಲಿಸುವ ಸಂದರ್ಭ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ರೋಹಿತ್ ಗೌಡ, ಉಪಾಧ್ಯಕ್ಷ ಶಿವು, ನಗರಘಟಕದ ಅದ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರವೀಶ್ ಕಲ್ಕಚಿದೂರು, ಪ್ರಮುಖರಾದ ಹಿನಕನಹಳ್ಳಿ ಶಿವಪ್ಪ, ಸೀಮಂತ್, ಮನೋಹರ, ಪುನೀತ್, ಹರೀಶ್ ಇದ್ದರು.