ಸಾರಾಂಶ
ಮುಂಡರಗಿ: ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಬೇಕಾದರೆ ಮೊದಲು ಹಳ್ಳಿಗಳು ಅಭಿವೃದ್ಧಿ ಹೊಂದಬೇಕು. ಪಟ್ಟಣದಲ್ಲಿರುವವರು ಹಳ್ಳಿಗಳ ಕಡೆಗೆ ಮುಖ ಮಾಡಿದರೆ ಹಳ್ಳಿಗಳು ಸಂಪೂರ್ಣ ಅಭಿವೃದ್ಧಿಹೊಂದಲು ಸಾಧ್ಯವಾಗುತ್ತದೆ ಎಂದು ಗದಗ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ನಾಡಗೌಡ್ರ ಹೇಳಿದರು. ಅವರು ಗುರುವಾರ ಪಟ್ಟಣದ ಶ್ರೀ ಜ.ಅ.ವಿದ್ಯಾ ಸಮಿತಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಸ್ತುತ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ದೇಶದ ಎಲ್ಲ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಬರುವ 2047 ಕ್ಕೆ ಭಾರತ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗುವ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಜ. ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಸಾನಿಧ್ಯ ವಹಿಸಿ ಮಾತನಾಡಿ, ಶ್ರೀಮಠದಿಂದ ಅನೇಕ ವಿಶ್ವವಿದ್ಯಾಲಯದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಇಡಲಾಗಿದೆ. ಅದರಂತೆ ಗದಗ ಗ್ರಾಮೀಣ ವಿಶ್ವವಿದ್ಯಾಲಯದಲ್ಲಿಯೂ ಸಹ ಇಡಲಾಗಿದೆ. ಸಮಿತಿಯ ಶಾಲಾ-ಕಾಲೇಜುಗಳಲ್ಲಿ ಅನೇಕ ಹುದ್ದೆಗಳು ನಿವೃತ್ತಿಯಿಂದ ಖಾಲಿ ಇವೆ. ಇವುಗಳನ್ನು ತುಂಬಿಕೊಳ್ಳಲು ಸರ್ಕಾರ ತೀವ್ರವಾಗಿ ಅನುಮತಿ ನೀಡಬೇಕು. ಸಮಿತಿಯಿಂದ ಗೌರವ ಶಿಕ್ಷಕರಿಗೆ ಸಂಬಳ ಕೊಡುವುದು ಕಷ್ಟವಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಶಶಿಕಲಾ ಹಂಚಿನಾಳ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಸ್ಥಾನಿಕ ಮೇಲ್ವಿಚಾರಣಾ ಕಮೀಟಿಯ ಕಾರ್ಯಾಧ್ಯಕ್ಷ ಪ್ರೊ.ಸಿ.ಎಸ್.ಅರಸನಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಥಾನಿಕ ಕಮಿಟಿಯ ಉಪಕಾರ್ಯಾಧ್ಯಕ್ಷ ವಿ.ಸಿ. ಹಂಪಿಮಠ, ಸದಸ್ಯರಾದ ಅಜ್ಜಪ್ಪ ಲಿಂಬಿಕಾಯಿ, ನಾಗೇಶ ಹುಬ್ಬಳ್ಳಿ, ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ, ಆರ್.ಬಿ.ಡಂಬಳಮಠ, ಎಂ.ಜಿ.ಗಚ್ಚಣ್ಣವರ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಭೂಮಿಕಾ, ಎಸ್.ಕೆ.ಹೊಳೆಯಣ್ಣವರ, ಎ.ಕೆ. ಮತ್ತೂರಮಠ, ಶ್ವೇತಾ ಬೆಲ್ಲದ, ರೇಖಾ ಗಳಗನಾಥ, ಕೆ.ಎ.ಬೇಲೇರಿ, ಗೀತಾ ಬಿ.ಯು. ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಡಾ.ಎಂ.ವಿ.ಕುಲಕರ್ಣಿ ಸ್ವಾಗತಿಸಿ, ರಾಜಶೇಖರ ಹುಲ್ಯಾಳ ನಿರೂಪಿಸಿ, ಶ್ರೀಕಾಂತ ಎಂ.ಎಲ್. ವಂದಿಸಿದರು.;Resize=(128,128))
;Resize=(128,128))
;Resize=(128,128))