ಯಾವ ಒಬ್ಬ ವ್ಯಕ್ತಿಯು ತನ್ನ ದೈಹಿಕ, ಮಾನಸಿಕ, ಸಾಮಾಜಿಕ, ಬೌದ್ಧಿಕ, ಆರ್ಥಿಕ ಮತ್ತು ತನ್ನ ಕೌಟುಂಬಿಕ ಶಕ್ತಿಯ ಮತ್ತು ದೌರ್ಬಲ್ಯಗಳ ಅರಿವನ್ನು ಹೊಂದಿರುತ್ತಾನೋ ಆ ವ್ಯಕ್ತಿ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧನೆಗಳನ್ನು ಮಾಡುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಹೊಂದಿರುತ್ತಾನೆ ಎಂದು ಏಷಿಯಾ ನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅಶೋಕಕುಮಾರ ಜಾಧವ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಯಾವ ಒಬ್ಬ ವ್ಯಕ್ತಿಯು ತನ್ನ ದೈಹಿಕ, ಮಾನಸಿಕ, ಸಾಮಾಜಿಕ, ಬೌದ್ಧಿಕ, ಆರ್ಥಿಕ ಮತ್ತು ತನ್ನ ಕೌಟುಂಬಿಕ ಶಕ್ತಿಯ ಮತ್ತು ದೌರ್ಬಲ್ಯಗಳ ಅರಿವನ್ನು ಹೊಂದಿರುತ್ತಾನೋ ಆ ವ್ಯಕ್ತಿ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧನೆಗಳನ್ನು ಮಾಡುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಹೊಂದಿರುತ್ತಾನೆ ಎಂದು ಏಷಿಯಾ ನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅಶೋಕಕುಮಾರ ಜಾಧವ ಹೇಳಿದರು.ತಾಲೂಕಿನ ಯಲ್ಲಟ್ಟಿಯ ಕೊಣ್ಣೂರ ಶಿಕ್ಷಣ ಸಂಸ್ಥೆಯ ಕೊಣ್ಣೂರ ಆಂಗ್ಲ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟದ ಮಾತನಾಡಿದ ಅವರು, ವಿದ್ಯಾರ್ಥಿಗಳು ಈಗಲೇ ತನ್ನ ಭವಿಷ್ಯದ ಬಗ್ಗೆ ಸ್ಪಷ್ಟವಾದ ನಿಲುವನ್ನು ತಾಳಬೇಕು ಮತ್ತು ತಾನು ಕಾಣುವ ಕನಸಿನ ಬಗ್ಗೆ ಸಂಪೂರ್ಣ ಅರಿತು ಅದನ್ನು ಸಾಧಿಸುವ ಹುಚ್ಚುತನ ಹೊಂದಿರಬೇಕು ಎಂದು ತಿಳಿಸಿದರು.ಕೆನಡಾದ ಆರ್ಟಿಫಿಶಿಯಲ್ ಇಂಜನಿಯರ್ ಅಭಿಷೇಕ ಗೊಡ್ಡಾಳೆ ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು. ಶಿಕ್ಷಕರಿಗೆ ಮತ್ತು ಪಾಲಕರಿಗೆ ಪ್ರೀತಿ ಗೌರವ ತೊರಿಸಬೇಕು ಮತ್ತು ತನ್ನ ಗುರಿ ಮುಟ್ಟುವವರೆಗೆ ಸತತ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.ಕೊಣ್ಣೂರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಿಖೀಲ ಕೊಣ್ಣೂರ ಅಧ್ಯಕ್ಷೀಯ ಭಾಷಣ ಮಾಡಿ, ಮುಂದಿನ ದಿನಗಳಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತಾರಾಷ್ಷ್ರೀಯ ಮಟ್ಟಕ್ಕೆ ಸಾಧನೆ ಮಾಡಲು ಸಂಸ್ಥೆ ಯಾವತ್ತೂ ಶಿಕ್ಷಕರ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತ ಬೆನ್ನೆಲುಬಾಗಿರುತ್ತದೆ ಎಂದು ತಿಳಿಸಿ ತಮ್ಮ ಶಾಲೆಯ ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು.ಮುಖ್ಯಗುರು ಈರಣ್ಣ ಯಾದವಾಡ ಮಾತನಾಡಿದರು. ಸಂಸ್ಥೆಯ ಪದಾಧಿಕಾರಿಗಳಾದ ದಾನೇಶ ಕೊಣ್ಣೂರ, ಉಪಮುಖ್ಯ ಗುರು ಸಿದ್ದು ಬಳಗಲಿ, ಫೀರೊಜ್ ಆಸಂಗಿ ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅದ್ಭುತವಾಗಿ ಸಾಂಸ್ಕೃತಿಕ ಮತ್ತು ಮನರಂಜನೆಯ ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಸಂವಿಧಾನ ದಿನಾಚರಣೆಯ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರು ಹಾಗೂ ಸ್ಕೌಟ್ಸ್ & ಗೈಡ್ ಸಂಚಾಲಕರಾದ ದುಂಡಯ್ಯ ಮಠದ, ಮಹಾಂತೇಶ ಹುನ್ನೂರ, ಭವ್ಯ ನೇಸೂರು ಇವರುಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶೈಲಾ ಪೋತೆ ಸ್ವಾಗತಿಸಿದರು. ಲಕ್ಷ್ಮೀ ದೇಸಾಯಿ ನಿರೂಪಿಸಿದರು. ಶಿಲ್ಪಾ ಬೆಳಖಿಂಡಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.ಗುರಿ ಸಾಧನೆಗಾಗಿ ಕೇವಲ ಕನಸುಗಳನ್ನು ಕಾಣದೇ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಕಾಣುವ ಕನಸಿಗೆ ಶಿಕ್ಷಕರು ಮತ್ತು ಪಾಲಕರು ಕಣ್ಣಾಗಿ ಅವರಿಗೆ ಪ್ರೇರಣೆಯ ಜೊತೆ ಸೂಕ್ತ ಮಾರ್ಗದರ್ಶನ ನೀಡಬೇಕು. ಯಾವ ಮಕ್ಕಳಲ್ಲಿ ಯಾವ ಯಾವ ಪ್ರತಿಭೆ ಮತ್ತು ಕೌಶಲ್ಯ ಇರುತ್ತೆ ಅದನ್ನು ಶಿಕ್ಷಕರು ಗುರುತಿಸಬೇಕು.
-ಡಾ.ಅಶೋಕಕುಮಾರ ಜಾಧವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕರು.