ಸಾರಾಂಶ
ಕನ್ನಡ ಭಾಷೆಯನ್ನು ಕಬ್ಬಿಣದ ಕಡಲೆ ಎನ್ನುತ್ತಾರೆ. ಎಂತಹ ಸುಂದರ ಭಾಷೆ ನಮ್ಮದು. ಕನ್ನಡ ಭಾಷೆಗೆ ಮಾತ್ರ ಪೇಟೆ ಇರುವುದು ಕನ್ನಡಕ್ಕೆ ಮಾತ್ರ. ಏಕೆಂದರೆ ಕನ್ನಡದಲ್ಲಿ ಏನು ಮಾತನಾಡುತ್ತೀವೋ ಅದನ್ನು ಬರೆಯುತ್ತೇವೆ, ಏನು ಬರೆಯುತ್ತೇವೋ ಅದನ್ನು ಮಾತನಾಡುತ್ತೇವೆ ಅಂತಹ ಭಾಷೆ ನಮ್ಮದು.
ಕನ್ನಡಪ್ರಭ ವಾರ್ತೆ ಸರಗೂರು
ಭಾರತದ ಗಡಿ ಪ್ರದೇಶಗಳಲ್ಲಿ ನಮ್ಮ ಯೋಧರು ದೇಶವನ್ನು ಕಾಯುವಂತೆ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನು ಕಾಯುತ್ತಿರುವವರೇ ನಮ್ಮ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು ಎಂದು ಕವಾಯತ್ರಿ ಡಾ.ಟಿ.ಸಿ. ಪೂರ್ಣಿಮ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜನೆ ಮಾಡಿದ ಸರಗೂರು ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಗೂರು ಇತ್ತೀಚೆಗಷ್ಟೇ ತಾಲೂಕಾಗಿ ರೂಪುಗೊಂಡಿದೆ. ಇಂತಹ ಗಡಿ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡದ ಬಾವುಟವನ್ನು ಮುಗಿಲೇತ್ತರಕ್ಕೆ ಏರಿಸಿರಿರುವುದು ಐತಿಹಾಸಿಕ ಕ್ಷಣವಾಗಿದ್ದು, ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನಗೆ ಹೆಮ್ಮೆ ಇದೆ.ಸರಗೂರು ಕನ್ನಡ ಭಾಗದ ಅತೀ ಪ್ರಾಚೀನ ಪ್ರದೇಶಗಳಲ್ಲಿ ಒಂದು. ಪೊನ್ನಾಡು ಅಂದರೆ ಹೊನ್ನಿನ ನಾಡು ಎಂಬುದು ಇದರ ಮೂಲ ಹೆಸರು. ಇಲ್ಲಿ ಚಿನ್ನ ಮತ್ತು ಪಚ್ಚೆ ಹೇರಳವಾಗಿತ್ತು. ಅಂದಿನ ಕಾಲದಲ್ಲಿಯೇ ಇಲ್ಲಿಂದ ದಕ್ಷಿಣ ಆಫ್ರಿಕಾದ ಜತೆ ವ್ಯವಹಾರ ಸಂಬಂಧ ಇತ್ತು ಎಂಬುದು ಇಲ್ಲಿನ ಇತಿಹಾಸ. ಇಂತಹ ಐತಿಹಾಸಿಕ ಪ್ರದೇಶದಲ್ಲಿ ಕನ್ನಡ ಬಾವುಟ ಹಾರಿಸಿರುವುದು ಹೆಮ್ಮೆ ಪಡುವ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಇಂತಹ ಪ್ರಾಚೀನ ಪ್ರದೇಶದ ಬಗ್ಗೆ ಅಧ್ಯಯನ ಮಾಡಲು ಕನ್ನಡದಲ್ಲಿ ಪೂರಕ ದಾಖಲೆಗಳಿಲ್ಲ ಎಂಬುದು ಬೇಸರದ ಸಂಗತಿ. ಆದರೆ ಈ ಪ್ರದೇಶದ ಇತಿಹಾಸದ ಕುರಿತು ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಾಕಷ್ಟು ಪೂರಕ ದಾಖಲೆಗಳಿದ್ದು, ಅವುಗಳನ್ನು ನಾನು ಅಧ್ಯಯನ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಸಂಶೋಧನೆಯಾಗಬೇಕು. ಇಲ್ಲಿಗೆ ಬಂದ ಬಳಿಕ ನನ್ನ ತಿಳಿವಳಿಕೆ ಹೆಚ್ಚಾಗಿದೆ. ನಮ್ಮ ಭಾಷೆಯನ್ನು ಜನತೆ ಹೇಗೆ ಕಪಾಡಿಕೊಳ್ಳುತ್ತಿದ್ದಾರೆ, ಗ್ರಾಮೀಣ ಬದುಕು ಏನನ್ನು ಉಳಿಸಿಕೊಟ್ಟಿದೆ ಎಂಬುದು ನನಗೆ ತಿಳಿಯಿತು ಎಂದರು.ಇದೇ ವೇಳೆ ಶಿಕ್ಷಕ ಬಸಾಪುರ ಶಿವಕುಮಾರ್ ಅವರು ರಚಿಸಿರುವ ಅಪೂರ್ವ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.
ದಡದಹಳ್ಳಿಯ ಗುರುಮಲ್ಲೇಶ್ವರ ದಾಸೋಹ ಮಠದ ಷಡಕ್ಷರ ಸ್ವಾಮೀಜಿ, ಶಾಸಕ ಅನಿಲ್ಚಿಕ್ಕಮಾದು, ಸಂಸದ ಸುನಿಲ್ ಬೋಸ್, ಎಚ್.ಡಿ. ಕೋಟೆ ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ. ನರಸಿಂಹ ಮೂರ್ತಿ, ಮಾಜಿ ಸಚಿವ ಎಂ. ಶಿವಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸರಗೂರು ತಾಲೂಕು ಅಧ್ಯಕ್ಷ ಎಂ. ಕೆಂಡಗಣ್ಣಸ್ವಾಮಿ, ಮೈಸೂರು ನಗರಾಧ್ಯಕ್ಷ ಕೆ. ಶಿವರಾಂ, ನಿಕಟಪೂರ್ವ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮಹಿಳಾ ಘಟಕ ಅಧ್ಯಕ್ಷೆ ರತ್ನ ಹಾಲಪ್ಪಗೌಡ, ಪಪಂ ಅಧ್ಯಕ್ಷರಾದ ರಾಧಿಕ ಶ್ರೀನಾಥ್, ಉಪಾಧ್ಯಕ್ಷರಾದ ಶಿವಕುಮಾರ್, ರಾಜ್ಯ ರೈತ ಸಂಘದ ರಾಜ್ಯಧ್ಯಕ್ಷ ಬಡಗಲಪುರ ನಾಗೇಂದ್ರ, ಸರ್ವೆ ರಾಜಣ್ಣ ಟ್ರಸ್ಟ್ ಅಧ್ಯಕ್ಷ ಎಸ್.ವಿ. ವೆಂಕಟೇಶ್, ಜಿಪಂ ಮಾಜಿ ಸದ್ಯಸರಾದ ಪಿ. ರವಿ, ಭಾಗ್ಯಲಕ್ಷ್ಮೀ ನಿಂಗರಾಜು, ವೆಂಕಟಸ್ವಾಮಿ, ತಹಸೀಲ್ದಾರ್ ಮೋಹನಕುಮಾರಿ, ಶ್ರೀನಿವಾಸ್, ಮೈಮುಲ್ ನಿರ್ದೇಶಕ ಕೆ. ಈರೇಗೌಡ, ಮಮತ ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್, ಡಿವೈಎಸ್ಪಿ ಡಿ.ಜೆ.ರಾಜಣ್ಣ, ಬಿಇಒ ಚಂದ್ರಕಾಂತ್, ಮರಿದೇವಯ್ಯ, ಚಂದ್ರಕಲಾ ರಾಜಣ್ಣ, ಡಿವೈಎಸ್ಪಿ ಗೋಪಾಲಕೃಷ್ಣ, ವರ್ತಕ ಮಂಡಳಿ ಅಧ್ಯಕ್ಷ ಪ್ರಸಾದ್, ಹಿರಿಯ ವಕೀಲ ನಾರಾಯಣಗೌಡ, ಡಿ.ಆರ್.ಮಹೇಶ್, ಗ್ರಾಮೀಣ ಮಹೇಶ್, ಉಮಾ ರಾಮಚಂದ್ರ, ಶಂಭುಲಿಂಗನಾಯಕ, ಕ್ಯಾತನಹಳ್ಳಿ ನಾಗರಾಜು, ಎಸ್. ಚಿಕ್ಕಮಾದು ಬಳಗದ ಅಧ್ಯಕ್ಷ ರಾಜನಾಯಕ, ತಾಪಂ ಮಾಜಿ ಅಧ್ಯಕ್ಷ ಹನು, ಗಿರೀಶ್, ವಿದ್ಯಾಸಾಗರ್, ಭೀಮರಾಜು, ವೀರಭದ್ರಪ್ಪ, ನೀ. ಗಿರೀಗೌಡ, ಕನ್ನಡ ಪ್ರಮೋದ್, ನರಸಿಂಹ, ನಾಗಣ್ಣ, ಮುಳ್ಳೂರು ಗುರುಪ್ರಸಾದ್, ವರ್ತಕರ ಸಂಘ ಅಧ್ಯಕ್ಷ ಎಸ್.ಪಿ. ಪ್ರಕಾಶ್, ದಸಂಸದ ರಾಜಣ್ಣ ಇಟ್ನ, ನಿಂಗರಾಜು, ಅಶೋಕ್, ಸಿಪಿಐ ಲಕ್ಷ್ಮೀಕಾಂತ್, ವಿವಿಧ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪಪಂ ಸದಸ್ಯರು, ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.