ದೇಗುಲಗಳಲ್ಲಿ ಮದುವೆ ಆಗುವವರು ಪುಣ್ಯವಂತರು

| Published : Sep 04 2024, 01:52 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಳಕಲ್ಲ ದೇವಸ್ಥಾನಗಳಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗುವವರು ಪುಣ್ಯವಂತರು. ಕಾರಣ ಅವರ ಮದುವೆ ಸ್ವರ್ಗದಲ್ಲಿ ಆದಂತೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ದೇವಸ್ಥಾನಗಳಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗುವವರು ಪುಣ್ಯವಂತರು. ಕಾರಣ ಅವರ ಮದುವೆ ಸ್ವರ್ಗದಲ್ಲಿ ಆದಂತೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಅಭಿಪ್ರಾಯಪಟ್ಟರು.

ಇಳಕಲ್ಲನ ಲಿಂ.ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆಯಲ್ಲಿ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ನಡೆದ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಹಲವಾರು ದಶಕಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಇಲ್ಲಿ ಮಾಡಲಾಗುತ್ತಿದೆ. ಇಲ್ಲಿ ಮದುವೆಯಾದವರು ಸರಳ ಸುಂದರ ಜೀವನ ನಡೆಸಿ ಇತರರಿಗೆ ಮಾದರಿಯಾಗಿರಬೇಕು. ಮತ್ತು ಎಲ್ಲರೂ ಸರ್ಕಾರದ ನಿಯಮವನ್ನು ಪಾಲನೆ ಮಾಡಿ ಕುಟುಂಬ ಕಲ್ಯಾಣ ಯೋಜನೆಯಾಗಿರುವ ನಿಯಮ ಗಂಡಾಗಲಿ, ಹೆಣ್ಣಾಗಲಿ ಎರಡೆ ಮಕ್ಕಳನ್ನು ಪಡೆಯಬೇಕು. ಈ ಮೂಲಕ ಸುಖ ಸಂಸಾರ ನಡೆಸಿ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಗುರುಮಹಾಂತ ಶ್ರೀಗಳು ಮಾತನಾಡಿ, ಜೀವನದಲ್ಲಿ ಆದರ್ಶ ಜೀವನ ಅತಿ ಅವಶ್ಯವಾಗಿದ್ದು, ಇದರಲ್ಲಿ ಗಂಡ ಮತ್ತು ಹೆಂಡತಿ ಅರಿತು ಬಾಳಿದರೆ ಅದುವೇ ಸ್ವರ್ಗ. ಇದು ಸಂಸಾರದ ಸುಖಕ್ಕೆ ಕಾರಣವಾಗಲಿದೆ. ಶ್ರೀಗಳ ಸಮ್ಮುಖದಲ್ಲಿ ಮದುವೆಯಾಗುತ್ತಿರುವವರು ಆದರ್ಶ ದಂಪತಿಗಳಾಗಿ ಎಂದು ಬದುಕಿ ಎಂದು ಹಾರೈಸಿದರು.

ಮುರ್ತುಜಾ ಖಾದರಿ ದರ್ಗಾದ ಮೌಲ್ವಿಗಳು, ಶಿರೂರಿನ ಡಾ.ಬಸವಲಿಂಗ ಶ್ರೀಗಳು, ಸಿದ್ದಯ್ಯನಕೋಟೆಯ ವಿಜಯ ಮಹಾಂತ ಶ್ರೀಗಳು, ಲಿಂಗಸೂರಿನ ಮಹಾಂತ ಶ್ರೀಗಳು, ಇಳಕಲ್ಲನ ರಾಜೇಂದ್ರ ಗುರುಗಳು, ಹರನಾಳ ಸಂಗನಬಸವ ಶ್ರೀಗಳು, ಬೆಳ್ಳೇರಿ ಬಸವಾನಂದ ಶ್ರೀಗಳು, ಹಿರಿಯರಾದ ಜಿ.ಪಿ.ಪಾಟೀಲ, ಮಹಾಂತಗೌಡ ಪಾಟೀಲ, ಶಿವರುದ್ರಪ್ಪ ಗೊಂಗಡಶೆಟ್ಟಿ, ಮಾಯವ್ವ ಗಾಜಿ, ಸಂಗಣ್ಣ ಕಂಪ್ಲಿ ಹಾಗು ಇತರರು ಉಪಸ್ಥಿತರಿದ್ದರು. ಮಲ್ಲಯ್ಯ ಗಣಾಚಾರಿ ಮದುವೆ ಕಾರ್ಯಕ್ರಮ ನಡೆಸಿದರೆ. ಪ್ರವೀಣ ಮುದಗಲ್ಲ ನಿರೂಪಿಸಿದರು.