ರೈತ ಸಂಘಕ್ಕೆ ಸೇರುವವರಿಗೆ ಬದ್ಧತೆ ಬೇಕು: ದಿನೇಶ್‌ ಶಿರವಾಳ

| Published : Feb 08 2024, 01:34 AM IST

ರೈತ ಸಂಘಕ್ಕೆ ಸೇರುವವರಿಗೆ ಬದ್ಧತೆ ಬೇಕು: ದಿನೇಶ್‌ ಶಿರವಾಳ
Share this Article
  • FB
  • TW
  • Linkdin
  • Email

ಸಾರಾಂಶ

ಮಾರ್ಚ್ 1ರಂದು ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದು 50 ವರ್ಷ ಕಳೆಯುತ್ತಿರುವ ಹಿನ್ನೆಲೆ ರೈತ ಸಂಘದ ವತಿಯಿಂದ ಬೃಹತ್ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತ ಸಂಘದ ಗಣಪತಿಯಪ್ಪ ಬಣ ಜಿಲ್ಲೆಯಲ್ಲಿ ಸದೃಢವಾಗಿ ಬೆಳೆಯುತ್ತಿದೆ. ಬೇರೆ ಬೇರೆ ಹೋರಾಟದ ಮೂಲಕ ರೈತರ ಧ್ವನಿಯಾಗಿ ಸಂಘ ಕೆಲಸ ಮಾಡುತ್ತಿರುವುದು ಎಲ್ಲರ ಮೆಚ್ಚುಗೆ ಪಡೆದಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಸಾಗರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸಾಗರ: ಮಾರ್ಚ್ 1ರಂದು ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದು 50 ವರ್ಷ ಕಳೆಯುತ್ತಿರುವ ಹಿನ್ನೆಲೆ ರೈತ ಸಂಘದ ವತಿಯಿಂದ ಬೃಹತ್ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತ ಸಂಘದ (ಡಾ. ಎಚ್.ಗಣಪತಿಯಪ್ಪ ಬಣ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತ ಸಂಘದ ಗಣಪತಿಯಪ್ಪ ಬಣ ಜಿಲ್ಲೆಯಲ್ಲಿ ಸದೃಢವಾಗಿ ಬೆಳೆಯುತ್ತಿದೆ. ಬೇರೆ ಬೇರೆ ಹೋರಾಟದ ಮೂಲಕ ರೈತರ ಧ್ವನಿಯಾಗಿ ಸಂಘ ಕೆಲಸ ಮಾಡುತ್ತಿರುವುದು ಎಲ್ಲರ ಮೆಚ್ಚುಗೆ ಪಡೆದಿದೆ ಎಂದರು.

ರೈತ ಸಂಘಕ್ಕೆ ಸೇರ್ಪಡೆಗೊಳ್ಳುವವರು ಬದ್ಧತೆಯಿಂದ ಕೆಲಸ ಮಾಡಬೇಕು. ರೈತ ಸಮೂಹಕ್ಕೆ ಯಾವುದೇ ರೀತಿಯ ಅನ್ಯಾಯವಾದರೂ ರೈತ ಸಂಘ ಪ್ರತಿಭಟನೆ ಮಾಡುವ ಮೂಲಕ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತದೆ. ದೊಡ್ಡ ಮಟ್ಟದಲ್ಲಿ ರೈತ ಸಂಘಕ್ಕೆ ಜನ ಸೇರ್ಪಡೆ ಆಗುತ್ತಿರುವುದು ಆಶಾದಾಯಕ ಸಂಗತಿ ಎಂದು ಹೇಳಿದರು.

ಸಂಘಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಿಸಿಲ್ ಸೋಮಣ್ಣ ಮಾತನಾಡಿ, ರೈತ ಸಂಘದ ಗಣಪತಿಯಪ್ಪ ಬಣ ಅತ್ಯುತ್ಸಾಹದಿಂದ ರೈತಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಆಕರ್ಷಿತನಾಗಿ ಸಂಘಕ್ಕೆ ಸೇರುತ್ತಿದ್ದೇನೆ. ನಮ್ಮ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಭೂಮಿ ಮತ್ತು ರೈತರ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದರು. ಇದು ನನಗೆ ರೈತ ಸಂಘಕ್ಕೆ ಸೇರಲು ಪ್ರೇರಣೆಯಾಗಿದೆ ಎಂದರು.

ರೈತ ಸಂಘದ ಪ್ರಮುಖರಾದ ಡಾ.ರಾಮಚಂದ್ರಪ್ಪ ಮನೆಘಟ್ಟ, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಭದ್ರೇಶ್ ಬಾಳಗೋಡು, ಕುಮಾರ್ ಗೌಡ ಇನ್ನಿತರರು ಹಾಜರಿದ್ದರು.

- - -

-6ಕೆ.ಎಸ್.ಎ.ಜಿ.1:

ಸಾಗರದಲ್ಲಿ ರೈತ ಸಂಘಕ್ಕೆ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ ನಡೆಯಿತು.