ಸಾರಾಂಶ
ಖಾಸಗಿ ಲೇವಾದೇವಿದಾರರ ಕಿರುಕುಳಕ್ಕೆ ಸಂಬಂಧಿಸಿದಂತೆ ಹಲವರು ಗ್ರಾಮ ತೊರೆದಿರುವ ತಾಲೂಕಿನ ರಾಚಪ್ಪಾಜಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇತರೆ ಅಧಿಕಾರಿಗಳ ಜೊತೆಗೂಡಿ ಜನಸಂಪರ್ಕ ಸಭೆ ನಡೆಸಿ ಲೇವಾದೇವಿದಾರರರು ಕಿರುಕುಳ ನೀಡಿದರೆ ತಕ್ಷಣ ಠಾಣೆಗೆ ದೂರು ನೀಡಿದರೆ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡುವ ಮೂಲಕ ಗ್ರಾಮಸ್ಥರಲ್ಲಿ ಧೈರ್ಯ ತುಂಬಿದರು.
ಕೊಳ್ಳೇಗಾಲ: ಖಾಸಗಿ ಲೇವಾದೇವಿದಾರರ ಕಿರುಕುಳಕ್ಕೆ ಸಂಬಂಧಿಸಿದಂತೆ ಹಲವರು ಗ್ರಾಮ ತೊರೆದಿರುವ ತಾಲೂಕಿನ ರಾಚಪ್ಪಾಜಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇತರೆ ಅಧಿಕಾರಿಗಳ ಜೊತೆಗೂಡಿ ಜನಸಂಪರ್ಕ ಸಭೆ ನಡೆಸಿ ಲೇವಾದೇವಿದಾರರರು ಕಿರುಕುಳ ನೀಡಿದರೆ ತಕ್ಷಣ ಠಾಣೆಗೆ ದೂರು ನೀಡಿದರೆ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡುವ ಮೂಲಕ ಗ್ರಾಮಸ್ಥರಲ್ಲಿ ಧೈರ್ಯ ತುಂಬಿದರು.
ಸಭೆಯಲ್ಲಿ ಗ್ರಾಮದ ನಾಗರಾಜು, ಮಾದೇವಿ, ಮಾದೇಶ, ಜಯಣ್ಣ, ಶಿವಣ್ಣ ಸೇರಿದಂತೆ 12ಕ್ಕೂ ಅಧಿಕ ಕುಟುಂಬ ಸದಸ್ಯರು ಗ್ರಾಮ ತೊರೆದಿರುವ ಕುರಿತು ಎಸ್ಪಿ ಡಾ. ಕವಿತಾ ಮಾಹಿತಿ ಪಡೆದರು. ಗ್ರಾಮದ ಮುಖಂಡರು ಮಾತನಾಡಿ, ಲೇವಾದೇವಿಯವರು ನಾವು ಊಟ ಮಾಡಲು ಬಿಡುವುದಿಲ್ಲ. ಇವರ ಕಿರುಕುಳದಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೂ ಹಿನ್ನೆಡೆಯಾಗಿದೆ. ಕೆಲವು ಸಂಸ್ಥೆಗಳು ಸಾಲ ಕಟ್ಟದಿದ್ದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂಬ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.ಎಸ್ಪಿ ಕವಿತಾ ಮಾತನಾಡಿ, ಸಾಲಕ್ಕೆ ಹೆದರಿ ಊರು ತೊರೆದ ಕ್ರಮ ಸರಿಯಲ್ಲ. ತಕ್ಷಣ ಎಲ್ಲರೂ ಗ್ರಾಮಕ್ಕೆ ವಾಪಸ್ ಬನ್ನಿ ಫೈನಾನ್ಸ್ ಕಂಪನಿಯವರು ನಿಮಗೆ ಕಿರುಕುಳ ನೀಡಿದರೆ ತಕ್ಷಣ ನಮ್ಮ ಗಮನಕ್ಕೆ ತನ್ನಿ, ಇಲಾಖೆ ನಿಮ್ಮೊಂದಿಗಿದೆ. ಮುಲಾಜಿಲ್ಲದೆ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದರು.ಡಿವೈಎಸ್ಪಿ ಧಮೇಂದ್ರ, ವೃತ್ತ ನಿರೀಕ್ಷಕ ಶಿವಮಾದಯ್ಯ, ಪಿಎಸ್‌ಐ ಸುಪ್ರೀತ್ ಇದ್ದರು.