ಸಂವಿಧಾನ ಗೌರವಿಸುವವರಿಗೆ ಸಮುದಾಯದಲ್ಲಿ ಗೌರವ ಸಿಗುತ್ತದೆ-ಅನಿತಾ ಡಿಸೋಜಾ

| Published : Nov 25 2024, 01:01 AM IST

ಸಾರಾಂಶ

ಸಂವಿಧಾನವನ್ನು ಯಾರು ಗೌರವಿಸುತ್ತಾರೋ ಅಂತವರಿಗೆ ಸಮುದಾಯದಲ್ಲಿ ಗೌರವ ಸಿಕ್ಕೆ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮಕ್ಕಳು ಚಿಕ್ಕವರಿದ್ದಾಗಿಂದ್ದಲೇ ಸಂವಿಧಾನದ ಮಹತ್ವ, ಸಂವಿಧಾನದ ಮೌಲ್ಯಗಳು, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿ ಹೇಳುವ ಕೆಲಸವನ್ನು ನಾವು ನೀವು ಮಾಡಬೇಕಾಗಿದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್‌ ಅನಿತಾ ಡಿಸೋಜಾ ಹೇಳಿದರು.

ಹಾನಗಲ್ಲ: ಸಂವಿಧಾನವನ್ನು ಯಾರು ಗೌರವಿಸುತ್ತಾರೋ ಅಂತವರಿಗೆ ಸಮುದಾಯದಲ್ಲಿ ಗೌರವ ಸಿಕ್ಕೆ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮಕ್ಕಳು ಚಿಕ್ಕವರಿದ್ದಾಗಿಂದ್ದಲೇ ಸಂವಿಧಾನದ ಮಹತ್ವ, ಸಂವಿಧಾನದ ಮೌಲ್ಯಗಳು, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿ ಹೇಳುವ ಕೆಲಸವನ್ನು ನಾವು ನೀವು ಮಾಡಬೇಕಾಗಿದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್‌ ಅನಿತಾ ಡಿಸೋಜಾ ಹೇಳಿದರು.

ಸ್ಥಳೀಯ ರೋಶನಿ ಸಮಾಜ ಸೇವಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂಬೇಡ್ಕರ್‌ ಸರಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ಸಮರ್ಪಣಾ ದಿನಾಚರಣೆಯ ಪ್ರಯುಕ್ತ ಸಂವಿಧಾನದ ಮಹತ್ವ ಮತ್ತು ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನ ೨೬ ವಸತಿ ನಿಲಯದ ೨೩೦೦ ಹೆಚ್ಚು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಜೊತೆ ಸಂವಿಧಾನ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಅಂಬೇಡ್ಕರ್‌ ಅವರು ಸತತ ಪರಿಶ್ರಮದ ಫಲವಾಗಿ ಇಂದು ಉತ್ತಮ ಗೌರವಯುತ ಜೀವನ ನಡೆಸಲು ಸಾಧ್ಯವಾಗಿದೆ. ಆದ್ದರಿಂದ ಇದನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸಿ ಹೇಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.ನಿವೃತ್ತ ಪಶು ವೈದ್ಯ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡ ಡಾ.ಎನ್.ಎಫ್. ಕಮ್ಮಾರ ಮಾತನಾಡಿ, ಸಂವಿಧಾನ ಎಂಬುದು ಅಂಬೇಡ್ಕರ್ ನಮಗೆ ನೀಡಿದ ದೊಡ್ಡ ಕೊಡುಗೆಯಾಗಿದೆ. ನಾವೆಲ್ಲರೂ ಸಂವಿಧಾನದ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕಾಗುತ್ತದೆ ಮತ್ತು ಗೌರವಿಸಬೇಕಾಗುತ್ತದೆ. ಇಂದು ನಮಗೆ ಸಮಾನ ಅವಕಾಶಗಳು ದೊರೆಯುತ್ತಿವೆ ಎಂದರೆ ಅದಕ್ಕೆ ಮುಖ್ಯ ಕಾರಣ ಸಂವಿಧಾನ ಆಗಿದೆ. ಈ ಸಂವಿಧಾನ ಇಲ್ಲದಿದ್ದರೆ ನಾವು ನೀವುಗಳು ಬದುಕು ಕಟ್ಟಿಕೊಳ್ಳಲು ಪರದಾಡಬೇಕಿತ್ತು. ಆದ್ದರಿಂದ ಸಂವಿಧಾನ ನಮಗೆ ಕೊಟ್ಟ ಅವಕಾಶಗಳು, ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ನಡೆಯುವುದು ಮುಖ್ಯವಾಗಿದೆ ಎಂದು ಹೇಳಿದರು.ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಲ್ಲವಿ ಸುನಿಲ್ ಕಾಟ್ನಳ್ಳಿ, ದ್ವಿತೀಯ ಬಹುಮಾನ ರಾಜೇಶ್ವರಿ ರಾಜಪ್ಪ ಕಿಳ್ಳಿತ್ಯಾತರ, ತೃತೀಯ ಬಹುಮಾನ ಚೇತನಾ ಓಣಿಕೇರಿ ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿ/ವಿದ್ಯಾರ್ಥಿನಿಯರಲ್ಲಿ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಿಸಿದ್ದಾರೆ.ಕಾರ್ಯಕ್ರಮದಲ್ಲಿ ವಸತಿ ನಿಲಯದ ಮೇಲ್ವಿಚಾರಕಿ ನಾಗರತ್ನಾ ಕೊಂಗಿ, ಸಂಸ್ಥೆಯ ಸಿಬ್ಬಂದಿ ಡಿಗ್ಗಪ್ಪ ಲಮಾಣಿ ಹಾಗೂ ವಸತಿ ನಿಲಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.