ಸಾರಾಂಶ
ಕೊಲ್ಹಾರ: ತಾಲೂಕಿನ ನಾಗರದಿನ್ನಿಯಲ್ಲಿ ಸಿಸಿ ಟಿವಿಯಲ್ಲಿ ಚಿರತೆ ಹಾಗೂ ಚಿರತೆ ಮರಿಗಳು ಕಾಣಿಸಿಕೊಂಡಿವೆ ಎಂಬ ವದಂತಿ ಹಿನ್ನೆಲೆಯಲ್ಲಿ ಅರಣ್ಯಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ, ಕ್ಯಾಮೆರಾದಲ್ಲಿ ಕಂಡಿದ್ದು ಬೆಕ್ಕಿನ ಮರಿಗಳಾಗಿವೆ ಎಂಬುದು ದೃಢಪಟ್ಟಿದೆ.

ನಾಗರದಿನ್ನಿಯಲ್ಲಿ ಸೋಮವಾರ ಸಂಜೆ ಚಿರತೆ ಹಾಗೂ ಚಿರತೆ ಮರಿಗಳು ಕಂಡಿವೆ ಎಂಬ ವದಂತಿ ಬಳಿಕ ಮಟ್ಟಿಹಾಳದಲ್ಲಿ ಚಿರತೆ ಹಾಗೂ ಚಿರತೆ ಮರಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ ಎಂದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಬಳಿಕ ಅರಣ್ಯಾಧಿಕಾರಿ ಬಿ.ಐ.ಬಿರಾದಾರ ಅವರು ಸಿಸಿ ಟಿವಿ ದೃಶ್ಯವನ್ನು ಪರಿಶೀಲನೆ ಮಾಡಿ ನೋಡಿದಾಗ ಅದರಲ್ಲಿ ಬೆಕ್ಕು ಹಾಗೂ ಬೆಕ್ಕಿನ ಮರಿಗಳಿರುವುದು ಕಂಡು ಬಂದಿದೆ. ನಂತರ ನಾಗರದಿನ್ನಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರೋಣ ಕ್ಯಾಮೆರಾ ಮೂಲಕ ತಪಾಸಣೆ ಮಾಡಲಾಯಿತು. ಅಲ್ಲಿಯೂ ಚಿರತೆಯ ಯಾವ ಚಲನವಲನ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ಜನರು ನಿರ್ಭಯದಿಂದ ಇರುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಬಸವರಾಜ ಕೊಣ್ಣೂರ, ತಹಸೀಲ್ದಾರ್ ಎಸ್.ಎಸ್.ನಾಯಕಲ್ ಮಠ ಇದ್ದರು.