ಸಾರಾಂಶ
- ಹೊನ್ನಾಳಿಯಲ್ಲಿ ಪ್ರಜಾ ಪರಿವರ್ತನ ವೇದಿಕೆ ರಾಜ್ಯಾಧ್ಯಕ್ಷ ಎ.ಡಿ.ಈಶ್ವರಪ್ಪ ಮಾಹಿತಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕರ್ನಾಟಕ ಬೌದ್ಧ ಧರ್ಮ ಸಮಿತಿಗಳ ಒಕ್ಕೂಟ ವತಿಯಿಂದ ನ.23ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆ ರೋಟರಿ ಬಾಲ ಭವನದಲ್ಲಿ ಬೌದ್ಧ ಧರ್ಮ ಕುರಿತು ಚಿಂತನ -ಮಂಥನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಜಾ ಪರಿವರ್ತನ ವೇದಿಕೆ ರಾಜ್ಯಾಧ್ಯಕ್ಷ ಎ.ಡಿ.ಈಶ್ವರಪ್ಪ ಹೇಳಿದರು.ಪಟ್ಟಣದ ಬಾಲರಾಜ್ ಘಾಟ್ ಸಮೀಪದ ಅಂಬೇಡ್ಕರ್ ಭವನದಲ್ಲಿ ನಡೆದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಬೌದ್ಧ ಧರ್ಮಗಳ ಸಮಿತಿಗಳು ಇದೀಗ ರಾಜ್ಯ ಬೌದ್ಧ ಧರ್ಮ ಒಕ್ಕೂಟ ರಚಿಸಿಕೊಂಡಿವೆ. ಬೌದ್ಧ ಧರ್ಮ ಕುರಿತು ವಿಶೇಷ ಉಪನ್ಯಾಸ, ಚಿಂತನ -ಮಂಥನ ಉಪಯುಕ್ತ ಸಂವಾದ ಕಾರ್ಯಕ್ರಮಗಳನ್ನು ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ನಡೆಸಲಾಗಿದೆ ಎಂದರು.
ಇದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿ ಇಂತಹ ಸಭೆ ನಡೆಸಲು ಮುಂದಾಗಿದ್ದು, ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಬುಧವಾರ ದಾವಣಗೆರೆ ಪ್ರವಾಸಿ ಮಂದಿರದಲ್ಲಿ ಹಾಗೂ ಭಾನುವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಭೆಗಳ ನಡೆಸಲಾಗಿದೆ ಎಂದರು.ಒಕ್ಕೂಟದ ಗೌರವ ಅಧ್ಯಕ್ಷ ಬಿ. ಗೋಪಾಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿಲಿದೆ. ಕಾರ್ಯಾಧ್ಯಕ್ಷ ಮಹದೇವಪ್ಪ, ಕಾರ್ಯದರ್ಶಿ ಎಚ್.ರಾಚಪ್ಪ, ಶ್ರೀಕಾಂತ್ ಆಲಂಗೂರು, ಖಜಾಂಚಿ ಲಕ್ಷ್ಮಣ್ ಸೇರಿದಂತೆ ಇನ್ನಿತರೆ ಸಮಿತಿಯಲ್ಲಿದ್ದು, ಬೌದ್ಧ ಧರ್ಮದ ಅನುಯಾಯಿಗಳು, ಅಭಿಮಾನಿಗಳು, ಅಂಬೇಡ್ಕರ್ ಅಬಿಮಾನಿಗಳು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ. ಸಭೆಗೆ ಪಕ್ಷಾತೀತ- ಜಾತ್ಯತೀತವಾಗಿ ಪಾಲ್ಗೊಳ್ಳಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಜಾ ಪರಿವರ್ತನ ವೇದಿಕೆ ಜಿಲ್ಲಾಧ್ಯಕ್ಷ ಅರೆಕೆರೆ ಕೃಷ್ಣಪ್ಪ, ಹೊನ್ನಾಳಿ ತಾಲೂಕು ಅಧ್ಯಕ್ಷ ಕೆ.ಒ. ಹನುಮಂತಪ್ಪ, ಕಾರ್ಯದರ್ಶಿ ಲೋಕೇಶ್, ಸಾಸ್ವೇಹಳ್ಳಿ ಹೋಬಳಿ ಅಧ್ಯಕ್ಷ ಶಿವಮೂರ್ತಿ ಇತರರು ಇದ್ದರು.- - -
-20ಎಚ್.ಎಲ್.ಐ20.ಜೆಪಿಜಿ:ಜಿಲ್ಲೆಯಲ್ಲಿ ನ.23ರಂದು ಬೌದ್ಧಧರ್ಮ ಚಿಂತನ-ಮಂಥನ ಕಾರ್ಯಕ್ರಮ ಕುರಿತು ಹೊನ್ನಾಳಿಯ ಅಂಬೇಡ್ಕರ್ ಭವನದಲ್ಲಿ ಗುರುವಾರ ಪ್ರಜಾ ಪರಿವರ್ತನ ವೇದಿಕೆಯ ಎ.ಡಿ.ಈಶ್ವರಪ್ಪ ಇತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))