ಎಸ್‌ಬಿಆರ್ ಕಾಲೇಜಲ್ಲಿ ಸಾವಿರಾರು ಮಕ್ಕಳಿಂದ ಯೋಗ ಪ್ರದರ್ಶನ

| Published : Jun 24 2024, 01:33 AM IST

ಸಾರಾಂಶ

ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ, ಚಿ. ದೊಡ್ಡಪ್ಪ ಅಪ್ಪ ಆಶೀರ್ವಾದದೊಂದಿಗೆ ಕಾರ್ಯದರ್ಶಿ ಬಸವರಾಜ ದೇಶಮುಖ ಸಸಿಗೆ ನೀರೆರೆಯುವ ಮೂಲಕ ಚಾಲನೆ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಶರಣಬಸವೇಶ್ವರ ವಸತಿ ಕಾಲೇಜು ಎಸ್‌ಬಿಆರ್‌ ಅಂಗಳದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನದಂಗವಾಗಿ ಎಸ್‍ಬಿಆರ್ ಪಿಯು ಕಾಲೇಜು, ಎಸ್‍ಬಿಆರ್ ಪಬ್ಲಿಕ್ ಶಾಲೆ ಹಾಗೂ ಅಪ್ಪಾ ಪಬ್ಲಿಕ್ ಶಾಲೆಯ ಸಾವಿರಾರು ಮಕ್ಕಳು ಏಕಕಾಲಕ್ಕೆ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಯೋಗ ಸಾಧಕರು ಬಿಳಿ ವಸ್ತ್ರಗಳನ್ನು ಧರಿಸಿ, ವಿವಿಧ ಯೋಗಾಸನ, ಪ್ರಾಣಾಯಾಮಗಳನ್ನು ಮಾಡಿ ಗಮನ ಸೆಳೆದರು.

ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ, ಚಿ. ದೊಡ್ಡಪ್ಪ ಅಪ್ಪ ಆಶೀರ್ವಾದದೊಂದಿಗೆ ಕಾರ್ಯದರ್ಶಿ ಬಸವರಾಜ ದೇಶಮುಖ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ರಾಜಯೋಗಿನಿ ಬಿ.ಕೆ ವಿಜಯ ಬೆಹನ್, ಶಿವಾನಂದ ಸಾಲಿಮಠ, ಮಹೇಶ್ವರಿ ಎಸ್. ಅಪ್ಪ, ಶಾರಧಾ ರಾಂಪೂರೆ, ಮಂಜುಳಾ ತಡಬಿಡಿಮಠ, ಶಿವಶರಣಪ್ಪ ಸೇರಿ, ಸುಭಾಶ್ ಚಂದ್ರ ಇದ್ದರು.

ರಾಜಯೋಗಿನಿ ಬಿ.ಕೆ ವಿಜಯ ಮಾತನಾಡುತ್ತಾ, ಇಂದಿನ ಒತ್ತಡದ ಯುಗದಲ್ಲಿ ದೇಹಕ್ಕೆ ಹಾಗೂ ಮನಸ್ಸಿಗೆ ನೆಮ್ಮದಿ, ವಿಶ್ರಾಂತಿ ನೀಡುವ ಕೆಲಸ ಆಗಬೇಕಾಗಿದೆ. ಇದಕ್ಕೆ ಯೋಗ ತುಂಬಾ ಉಪಯುಕ್ತವಾಗಿದೆ ಎಂದರು.

ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಯೋಗದಿಂದ ಏಕಾಗ್ರತೆ ಹೆಚ್ಚುತ್ತದೆ. ಯೋಗ ಮತ್ತು ಧ್ಯಾನ ಮಾಡಿದರೆ ನೀವು ಕಂಡ ಕನಸು ನನಸಾಗುತ್ತದೆ ಎಂದರು.

ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ ಎಲ್ಲರಿಗೂ ಅರ್ಧ ಚಕ್ರಾಸನ, ತಾಡಾಸನ, ತ್ರಿಕೋನಾಸನ, ಭುಜಂಗಾಸನ, ವೀರಭದ್ರಾಸನ, ಪಾವನ ಮುಕ್ತಾಸನ, ಗರುಡಾಸನ, ಧನುರಾಸನ, ಚಕ್ರಾಸನ, ನೌಕಾಸನ, ಶವಾಸನ, ಮಕರಾಸನ ಮುಂತಾದ ಯೋಗಾಸನ, ಪ್ರಾಣಾಯಾಮ ಹೇಳಿಕೊಟ್ಟರು.

ಎಸ್‍ಬಿಆರ್ ಪ್ರಾಚಾರ್ಯ ಎನ್.ಎಸ್. ದೇವರಕಲ್ ಉಸ್ತುವಾರಿಯಲ್ಲಿನ ಯೋಗ ದಿನದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.