ದೊಡ್ಡಬಳ್ಳಾಪುರ: ಬೆಳಗಿನ ಚುಮುಚುಮು ಚಳಿ, ತುಂತುರು ಮಳೆಯನ್ನೂ ಲೆಕ್ಕಿಸದೆ ಭೋಗನಂದೀಶ್ವರನ ಸನ್ನಿಧಿಯಿಂದ ಭಗವಂತನ ನಾಮ ಸಂಕೀತ೯ನೆ ಆರಂಭವಾಗಿತ್ತು. ಭಕ್ತಿಗಾನ ಸುಧೆ ಹರಿಸುತ್ತಾ ಮುಕ್ತಿಗಾಗಿ ಪ್ರಾಥಿ೯ಸುತ್ತಾ, ಪ್ರಕೖತಿಯ ಆರಾಧನೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡ ಸಾವಿರಾರು ಜನ ತಂಡೋಪತಂಡವಾಗಿ ನಂದಿ ಬೆಟ್ಟವೂ ಸೇರಿದಂತೆ ಪಂಚಗಿರಿಗಳ ಪ್ರದಕ್ಷಿಣೆ ಮಾಡಿದರು. ಆಹ್ಲಾದಕರ ವಾತಾವರಣ ಈ ಬಾರಿ ಪ್ರದಕ್ಷಿಣಾಕಾರರಿಗೆ ವಿಶೇಷವಾಗಿತ್ತು.
ದೊಡ್ಡಬಳ್ಳಾಪುರದ ನಂದಿಗಿರಿ ಪ್ರದಕ್ಷಿಣಾ ಸೇವಾ ಸಮಿತಿ ನೇತೖತ್ವದಲ್ಲಿ ಪ್ರತಿವಷ೯ ಆಷಾಢ ಮಾಸದ 3ನೇ ಸೋಮವಾರ ಈ ಪಾರಂಪರಿಕ ಆಚರಣೆ ಗಿರಿ ಪ್ರದಕ್ಷಿಣೆ ಯಶಸ್ವಿಯಾಗಿ ನೆರವೇರಿತು. ದೊಡ್ಡಬಳ್ಳಾಪುರದ ದೇವಾಂಗ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಈ ಧಾಮಿ೯ಕ ಕಾರ‍್ಯಕ್ರಮದಲ್ಲಿ ನೆರೆಯ ಚಿಕ್ಕಬಳ್ಳಾಪುರ, ದೇವನಹಳ್ಳಿ, ಬೆಂಗಳೂರು, ದೂರದ ಅನೇಕ ಊರುಗಳಿಂದ ಬರುವ ಭಕ್ತಾದಿಗಳು ಭಾಗವಹಿಸಿದ್ದರು.ಬೆಳಗ್ಗೆ 6.30ಕ್ಕೆ ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯದಿಂದ ಹೊರಟ ಗಿರಿಪ್ರದಕ್ಷಿಣಾ ಭಜನಾ ಉತ್ಸವ ಅಂಗಟ್ಟ, ಕುಡುಮ ಕ್ರಾಸ್, ಕಾರಹಳ್ಳಿ ಕ್ರಾಸ್, ನಂದಿ ಬೆಟ್ಟದ ಕ್ರಾಸ್, ಆಚಾರ‍್ಲಹಳ್ಳಿ, ಹೆಗ್ಗಡಿಹಳ್ಳಿ ಮೊಡಕು ಹೊಸಹಳ್ಳಿ, ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ ಮೂಲಕ ಭೋಗ ನಂದೀಶ್ವರ ದೇವಾಲಯಕ್ಕೆ ಮರಳಿತು. ಸುಮಾರು 15 ಕಿ.ಮೀ ವ್ಯಾಪ್ತಿಯ ಪಂಚಗಿರಿಗಳನ್ನು ಸಾವಿರಾರು ಭಕ್ತರು ಪ್ರದಕ್ಷಿಣೆ ಮಾಡಿದರು.
ಪುಣ್ಯಪ್ರಾಪ್ತಿಗೆ ಪ್ರದಕ್ಷಿಣೆ:ಪ್ರದಕ್ಷಿಣೆ ನಡೆಯುವುದು ಅಪ್ಪಟ ಧಾಮಿ೯ಕ ನಂಬಿಕೆಯಿಂದ. ನಂದಿಗಿರಿ ಸಾಕ್ಷಾತ್ ಕೈಲಾಸಗಿರಿಯಿದ್ದಂತೆ. ಈ ಬೆಟ್ಟವನ್ನು ಸುತ್ತಿದರೆ ಶಿವನ ವಾಸಸ್ಥಾನವಾದ ಕೈಲಾಸವನ್ನೇ ಸುತ್ತಿದಷ್ಟು ಪುಣ್ಯಬರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಚಿಕ್ಕಮಕ್ಕಳಿಂದ ಹಿಡಿದು, ವಯೋವೖದ್ಧರವರೆಗೆ ಎಲ್ಲ ವಯೋಮಾನದ ಪುರುಷ-ಮಹಿಳೆಯರು ಭಾಗವಹಿಸುತ್ತಾರೆ. ಹಿರಿಯ ಜೀವಗಳಿಗೆ ಪುಣ್ಯಪ್ರಾಪ್ತಿಯ ಸಂಕಲ್ಪವಿದ್ದರೆ, ಕಿರಿಯರು-ಯುವಕರಿಗೆ ಜಂಜಾಟದಿಂದ ಹೊರಬಂದು ಆಹ್ಲಾದಕರ ಪ್ರಕೖತಿಯ ನಡುವೆ ಒಂದಿಷ್ಟು ರಿಲೀಫ್ ಆಗುವ ಉದ್ದೇಶ. ಜೊತೆಗೆ ಧಾಮಿ೯ಕ ಕಾರ‍್ಯಕ್ರಮವೊಂದರಲ್ಲಿ ಭಾಗವಹಿಸುವ ಸಾಥ೯ಕ್ಯ ಭಾವನೆ ಇರುತ್ತದೆ.
ಇತಿಹಾಸದತ್ತ ಇಣಕು ನೋಟ:
ಇದು 86ನೇ ವಷ೯ದ ಗಿರಿ ಪ್ರದಕ್ಷಿಣಾ ಕಾರ‍್ಯಕ್ರಮ. 1938ರಲ್ಲಿ ಮೊದಲ ಬಾರಿಗೆ ದೊಡ್ಡಬಳ್ಳಾಪುರದ ಅದ್ದೇಕೊಪ್ಪದ ಸುಬ್ಬರಾಯಪ್ಪ ಮತ್ತು ಗೆಳೆಯರು ಈ ಆಚರಣೆಯನ್ನು ಜಾರಿಗೆ ತಂದರು. ಸ್ವಾತಂತ್ರ‍್ಯಪೂವ೯ದಲ್ಲಿಯೇ ನೂರಾರು ಜನ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದರು. 40ರ ದಶಕದಲ್ಲಿ ಬ್ರಿಟೀಷ್ ಆಡಳಿತಶಾಹಿ ಇದಕ್ಕೆ ನಿಬ೯ಂಧ ಹೇರಿತ್ತಾದರೂ ತದನಂತರ ಅಪ್ಪಟ ಧಾಮಿ೯ಕತೆಯ ಸೋಗಿನಲ್ಲಿ ನಿಬ೯ಂಧ ಮುಕ್ತವಾಗಿತ್ತು. ಕೆಲ ಸಂದಿಗ್ಧ ಪರಿಸ್ಥಿತಿಯಲ್ಲಿ ಮೈಸೂರು ಮಹಾರಾಜರಿಂದಲೇ ಖುದ್ಧು ಅನುಮತಿ ಪಡೆದು ಉತ್ಸವ ನಡೆದಿತ್ತು ಎನ್ನುತ್ತದೆ ಇತಿಹಾಸ. ಹಲವು ವಷ೯ಗಳ ಕಾಲ ಸ್ಥಗಿತಗೊಂಡಿದ್ದ ಕಾರ‍್ಯಕ್ರಮ 90ರ ದಶಕದಲ್ಲಿ ಮತ್ತೆ ಆರಂಭವಾಗಿ ನಿರಂತರ ನಡೆಯುತ್ತಿದೆ.
ಈ ಬಾರಿ ಗಿರಿಪ್ರದಕ್ಷಿಣಾ ಕಾರ‍್ಯಕ್ರಮದಲ್ಲಿ ವಿವಿಧ ಭಜನಾ ಮಂಡಲಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಕಾರ‍್ಯಕ್ರಮಕ್ಕೆ ಬಂದ ಎಲ್ಲರಿಗೂ ಬೆಟ್ಟದ ಕ್ರಾಸ್ ಬಳಿ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ನಂತರ ಕಣಿವೆ ಬಸವಣ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಸುಲ್ತಾನ್‌ಪೇಟೆ ಮೂಲಕ ಭೋಗನಂದೀಶ್ವರ ದೇಗುಲಕ್ಕೆ ತೆರಳಿ ಪ್ರದಕ್ಷಿಣೆ ಮುಕ್ತಾಯವಾಯಿತು. ಕಾರ‍್ಯಕ್ರಮದ ಅಂಗವಾಗಿ ಭೋಗನಂದೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಏಪ೯ಡಿಸಲಾಗಿತ್ತು.
ನಂದಿಗಿರಿ ಪ್ರದಕ್ಷಿಣಾ ಸೇವಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ರಾಜಕೀಯ ಮುಖಂಡರು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.10ಕೆಡಿಬಿಪಿ4-
ದೊಡ್ಡಬಳ್ಳಾಪುರದ ನಂದಿಗಿರಿ ಪ್ರದಕ್ಷಿಣಾ ಸೇವಾ ಸಮಿತಿ ನೇತೖತ್ವದಲ್ಲಿ 86ನೇ ನಂದಿಗಿರಿ ಪ್ರದಕ್ಷಿಣೆ ಕಾರ‍್ಯಕ್ರಮ ಸೋಮವಾರ ಸಂಭ್ರಮದಿಂದ ನಡೆಯಿತು.( ಈ ಫೋಟೋ ಪ್ಯಾನಲ್‌ನಲ್ಲಿ ಬಳಸಬಹುದು ಸರ್)
10ಕೆಡಿಬಿಪಿ5-ದೊಡ್ಡಬಳ್ಳಾಪುರದ ನಂದಿಗಿರಿ ಪ್ರದಕ್ಷಿಣಾ ಸಮಿತಿ ನೇತೃತ್ವದಲ್ಲಿ 86ನೇ ವರ್ಷದ ಗಿರಿ ಪ್ರದಕ್ಷಿಣೆ ಕಾರ್ಯಕ್ರಮದಲ್ಲಿ ಸಮಿತಿ ಪದಾಧಿಕಾರಿಗಳು ಸೇರಿದಂತೆ ರಾಜಕೀಯ ಮುಖಂಡರು, ಮಹಿಳೆಯುರು, ಯುವಕರು ಮತ್ತು ಅಪಾರ ಭಕ್ತ ವೃಂದ ಭಾಗವಹಿಸಿದ್ದರು.