ಸಾರಾಂಶ
ಟ್ರಾಕ್ಟರ್ ಮಾಲೀಕರಿಗೆ ದಂಡದ ಬರೆ: ಜೆಡಿಎಸ್ ಪಕ್ಷದ ಯುವ ಮುಖಂಡ ಚೇತನ್
ಕನ್ನಡ ಪ್ರಭ ವಾರ್ತೆ, ಕಡೂರುಹಿರಿಯ ಅಧಿಕಾರಿಗಳು ಆದೇಶ ನೀಡಿದ್ದರೂ ಪೊಲೀಸರು ಅದನ್ನು ಗಾಳಿಗೆ ತೂರುವ ಮೂಲಕ ಜಲ್ಲಿ ಕೃಷ್ಣರ್ ಗೆ ಬರುವ ಟ್ಯಾಕ್ಟರ್ ಗಳನ್ನು ಹಿಡಿದು ಸಾವಿರಾರು ರು. ದಂಡ ಕಟ್ಟಿಸುತ್ತಿದ್ದಾರೆಂದು ಎಂದು ಜೆಡಿಎಸ್ ಪಕ್ಷದ ಯುವ ಮುಖಂಡ ಚೇತನ್ ಕೆಂಪರಾಜ್ ಆರೋಪಿಸಿದರು.ಗುರುವಾರ ಪಟ್ಟಣದ ಸುರುಚಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಸಿಬ್ಬಂದಿ ತಮ್ಮ ಕರ್ತವ್ಯ ಮರೆತು ಜಲ್ಲಿ ಕ್ರಷರ್ ಗೆ ಬಂದು ಎಂ. ಸ್ಯಾಂಡ್, ಜಲ್ಲಿ ತುಂಬಿಕೊಂಡು ಬರುವ ಟ್ರಾಕ್ಟರ್ ಗಳನ್ನು ಉದ್ದೇಶಪೂರ್ವಕವಾಗಿ ಹಿಡಿದು 15 ರಿಂದ 20 ಸಾವಿರ ರು. ತನಕ ದಂಡ ವಿಧಿಸುವಂತೆ ಮಾಡುತ್ತಿರುವುದರಿಂದ ಬಾಡಿಗೆ ಮಾಡಿ ಜೀವನ ಸವೆಸುತ್ತಿರುವ ಟ್ರಾಕ್ಟರ್ ಮಾಲೀಕರಿಗೆ ದಂಡದ ಬರೆ ಬೀಳುತ್ತಿದೆ ಎಂದು ದೂರಿದರು.ಪೊಲೀಸರಿಗೆ ಜೆಲ್ಲಿ ಟ್ರಾಕ್ಟರ್ ಹಿಡಿಯುವ ಅಧಿಕಾರವಿಲ್ಲ ಆದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜವಾಬ್ದಾರಿಯಾಗಿದೆ. ಕ್ರಷರ್ ನಿಂದ ಬರುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿತ್ತು. ಆದರಂತೆ ಯೆಲ್ಲೋ ಬೋರ್ಡ್ ಇರುವ ಲಾರಿ ಗಳಿಗೆ ಜಿಪಿಎಸ್ ಅಡವಡಿಸಲಾಗುತ್ತಿದೆ. ಆದರೆ ಬಡ ರೈತರ ಟ್ರಾಕ್ಟರ್ ಗಳಿಗೆ ಜಿಪಿಎಸ್ ಇಲ್ಲದ ಕಾರಣ ಅಂತಹ ಟ್ರಾಕ್ಟರ್ ಗಳನ್ನು ಬೆಳಿಗ್ಗೆ 6 ರಿಂದ ರಾತ್ರಿ 12 ರವರೆಗೆ ಉದ್ದೇಶಪೂರ್ವಕವಾಗಿ ಸಿವಿಲ್ ಡ್ರೆಸ್ ನಲ್ಲಿ ಪೊಲೀಸ್ ಸಿಬ್ಬಂದಿ ಜೆಲ್ಲಿ ಅಥವಾ ಎಂ.ಸ್ಯಾಂಡ್ ತರುವ ಟ್ರಾಕ್ಟರ್ ಗಳನ್ನು ತಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 10-15 ಸಾವಿರ ತನಕ ದಂಡ ಕಟ್ಟಿಸುತ್ತಿದ್ದಾರೆ ಎಂದರು. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿ ಡಿಜಿಪಿ ಪ್ರವೀಣ್ ಸೂದ್ ಪೊಲೀಸರು ವಾಹನಗಳ ದಾಖಲೆಗಳಿಗಾಗಿ ವಾಹನಗಳನ್ನು ಹಿಡಿಯದಂತೆ ಆದೇಶ ಮಾಡಿದರು ಕೂಡ ಕಡೂರಿನಲ್ಲಿ ಪೊಲೀಸರು ನಿರಂತರವಾಗಿ ಬಾಡಿಗೆ ಹೊಡೆಯುವ ರೈತರ ಟ್ರಾಕ್ಟರ್ ಗಳನ್ನು ಹಿಡಿದು ಹೆಚ್ಚಿನ ದಂಡ ವಿಧಿಸುವಂತೆ ಮಾಡುವ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಪದೇ ಪದೇ ರೈತರಿಗೆ ದಂಡ ವಿಧಿಸುವ ಬದಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕ್ರಮ ಕೈಗೊಂಡು ಪಕ್ಷಾತೀತವಾಗಿ ಎಲ್ಲರ ವಾಹನಗಳು, ಕ್ರಷರ್ ಗಳಿದ್ದು ಜಿಪಿಎಸ್ ಅಳವಡಿಕೆ ಮಾಡಿಸಲಿ ಎಂದು ಆಗ್ರಹಿಸಿದರು. ಮೂರು ತಿಂಗಳಿಂದ ಅನಗತ್ಯವಾಗಿ ಟ್ರ್ಯಾಕ್ಟರ್ ಗಳನ್ನು ಹಿಡಿದು 20 ಸಾವಿರದತನಕ ದಂಡ ಕಟ್ಟುವಂತೆ ಮಾಡುತ್ತಿರುವುದರಿಂದ ರೈತರು ಟ್ರ್ಯಾಕ್ಟರ್ ಗಳು ಸಾಲ ಕಟ್ಟುವುದು ಹೇಗೆ ಮತ್ತು ಕುಟುಂಬ ನಡೆಸುವುದು ಹೇಗೆ ಎಂದು ಚೇತನ್ ಪ್ರಶ್ನಿಸಿದರು.
ಪೊಲೀಸರು ಒಂದು ದಿನಕ್ಕೆ ಹತ್ತು ಟ್ಯಾಕ್ಟರ್ ಗಳನ್ನು ಹಿಡಿಯುತ್ತಿದ್ದಾರೆ. ಒಂದು ವಾರದಲ್ಲಿ ಸರಿಪಡಿಸದಿದ್ದಲ್ಲಿ ನಾವು ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರ ಸಂಘದಿಂದ ಪೊಲೀಸ್ ಠಾಣೆ ಮುಂದೆ ನೂರಾರು ಟ್ರ್ಯಾಕ್ಟರ್ ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸ ಲಾಗುವುದು ಎಂದು ಎಚ್ಚರಿಸಿದ ಅವರು ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.-- ಕೋಟ್--ಪರವಾನಗಿ ಇಲ್ಲದ ಅನಧಿಕೃತ ವಾಹನಗಳನ್ನು ತಡೆದು ದಂಡ ಹಾಕಲಾಗುತ್ತದೆ. ಜನವರಿಯಿಂದ ಇಲ್ಲಿಯವರೆಗೆ ಕಡೂರು ತಾಲೂಕಿನಲ್ಲಿ ಅಂದಾಜು ₹3 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಟ್ರಾಕ್ಟರ್ ಗಳು ವೈಟ್ ಬೋರ್ಡ್ಗ ಳಿದ್ದು ಜಿಪಿಎಸ್ ಅಳವಡಿಸಿಕೊಳ್ಳುವುದಿಲ್ಲ. ಕ್ರಷರ್ ಗಳಲ್ಲಿ ಪರವಾನಗಿ ನೀಡದಿರುವ ಕಾರಣ ಪೊಲೀಸ್ ಇಲಾಖೆ ಅನಧಿಕೃತ ಎಂ.ಸ್ಯಾಂಡ್ ತುಂಬಿಕೊಂಡು ಹೋಗುವವರ ವಿರುದ್ಧ ದೂರು ದಾಖಲಿಸಿ ನಮ್ಮ ಕಚೇರಿಗೆ ಕಳುಹಿಸುತ್ತಾರೆ. ಲೋಡ್ನನಲ್ಲಿರುವುದನ್ನು ಟನ್ ರೀತಿ ಲೆಕ್ಕ ಹಾಕಿ ದಂಡ ವಿಧಿಸಲಾಗುತ್ತದೆ ಎಂದರು. -ವಿಂದ್ಯಾ, ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
6ಕೆಕೆಡಿಯು1. ಚೇತನ್ ಕೆಂಪರಾಜ್.