ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ: ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಶ್ರೀಗಳು ಸಮಾಜದ ಏಳಿಗೆಗಾಗಿ ೨ಎ ಮೀಸಲಾತಿ ಜಾರಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಈ ಹೋರಾಟದಲ್ಲಿ ತಾಳಿಕೋಟೆ ತಾಲೂಕಿನಿಂದ ೧ ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಡಾ.ವ್ಹಿ.ಎಸ್.ಕಾರ್ಚಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ:
ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಶ್ರೀಗಳು ಸಮಾಜದ ಏಳಿಗೆಗಾಗಿ ೨ಎ ಮೀಸಲಾತಿ ಜಾರಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಈ ಹೋರಾಟದಲ್ಲಿ ತಾಳಿಕೋಟೆ ತಾಲೂಕಿನಿಂದ ೧ ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಡಾ.ವ್ಹಿ.ಎಸ್.ಕಾರ್ಚಿ ತಿಳಿಸಿದರು.ಪಟ್ಟಣದ ಶ್ರೀವಿಠ್ಠಲ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಯಮೃತ್ಯುಂಜಯ ಶ್ರೀಗಳು ಕಳೆದ ೭-೮ ವರ್ಷಗಳಿಂದ ಪಂಚಮಸಾಲಿ ಸಮಾಜದ ಭವಿಷ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಪಂಚಮಸಾಲಿ ಸಮಾಜಕ್ಕೆ ೨ಡಿ ಮೀಸಲಾತಿ ಸೃಷ್ಟಿಸಿ ಕೈತೊಳೆದುಕೊಂಡರು. ಅದರಿಂದ ಉಪಯೋಗವಿಲ್ಲ ಎಂಬುದನ್ನು ಅರಿತು ೨ಎ ಮೀಸಲಾತಿ ನೀಡಬೇಕು ಎಂದು ಹೋರಾಟ ಹಮ್ಮಿಕೊಳ್ಳಲಾಗಿದೆ. ಚಳಿಗಾಲ ಅಧಿವೇಶನದ ವೇಳೆ ದಿ.೧೦ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತಿರ್ಮಾನಿಸಲಾಗಿದೆ ಎಂದು ಹೇಳಿದರು.ಸಮಾಜದ ಮುಖಂಡ ಮಡುಸಾಹುಕಾರ ಬಿರಾದಾರ ಮಾತನಾಡಿ ಪಂಚಮಸಾಲಿ ಸಮಾಜದವರು ಶಾಂತಿ ಪ್ರಿಯರಾಗಿದ್ದರಿಂದ ಸರ್ಕಾರಗಳು ಮೂಗಿಗೆ ತುಪ್ಪ ಸವರಿ ನುಣಚಿಕೊಳ್ಳುತ್ತಿವೆ. ಈ ಬಾರಿಯ ಹೋರಾಟವನ್ನು ಕೊನೆಯ ಹೋರಾಟ ಮಾಡಬೇಕೆಂದು ಸ್ವಾಮೀಜಿಗಳು ಶಪಥ ಮಾಡಿದ್ದಾರೆ. ಸಮಾಜದ ಹೆಚ್ಚು ಜನರು ಈ ಬೆಳಗಾವಿಯಲ್ಲಿ ದಿ.೧೦ ರಂದು ನಡೆಯಲಿರುವ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.ಸಮಾಜದ ಮುಖಂಡ ಆರ್.ಎಲ್.ಕೊಪ್ಪದ ಮಾತನಾಡಿ, ಬೆಳಗಾವಿಯಲ್ಲಿ ನಡೆಯಲಿರುವ ಹೋರಾಟದಲ್ಲಿ ಸ್ವಾಮಿಜಿಯನ್ನು ಬಿಟ್ಟು ಯಾರೂ ಹೋಗುವಹಾಗೆ ಇಲ್ಲ ಎಂತಹ ಸಂದರ್ಭ ಬಂದರೂ ಎದುರಿಸಿ ನಿಲ್ಲುವಂತಹ ಧೈರ್ಯ ಮಾಡಬೇಕು. ಪಂಚಮಸಾಲಿ ೨ಮೀಸಲಾತಿ ಹೋರಾಟ ಇದೇ ಕೊನೆಯದ್ದಾಗಲಿದೆ. ನಮಗೆ ನ್ಯಾಯ ಸಿಕ್ಕೆ ಸಿಗುತ್ತದೆ ಎಂಬ ವಿಸ್ವಾಸವಿದೆ ಎಂದರು.ಮುಖಂಡರಾದ ಕಾಶಿನಾಥ ಮುರಾಳ, ಡಿ.ವ್ಹಿ.ಪಾಟೀಲ, ನಾಗಪ್ಪ ಚಿನಗುಡಿ, ಡಿ.ಕೆ.ಪಾಟೀಲ, ಪ್ರಭು ಬಿಳೇಭಾವಿ, ಚಂದ್ರು ಆಲ್ಯಾಳ, ಅಪ್ಪು ಆನೇಸೂರ, ಅಶೋಕ ಚಿನಗುಡಿ, ಜಗದೀಶ ಬಿಳೇಭಾವಿ, ರಾಮನಗೌಡ ಬಾಗೇವಾಡಿ, ಅಶೋಕ ಜಾಲವಾದಿ, ನಿಂಗು ಕುಂಟೋಜಿ, ಬಸು ಕಶೆಟ್ಟಿ, ಬಸನಗೌಡ ಪಾಟೀಲ, ಮಲ್ಲು ಕಸಬೇಗೌಡರ, ಲಂಕೇಶ ಪಾಟೀಲ, ಕಾಶೀನಾಥ ಅರಳಿಚಂಡಿ, ಪ್ರಭು ಪಾಟೀಲ ಮೊದಲಾದವರು ಇದ್ದರು.