ಅನಸೂಯಾ ಜಯಂತಿಗೆ ಕಡೂರಿನಿಂದ ಸಾವಿರಾರು ಮಹಿಳೆಯರು: ಬೆಳ್ಳಿಪ್ರಕಾಶ್

| Published : Dec 13 2024, 12:45 AM IST

ಅನಸೂಯಾ ಜಯಂತಿಗೆ ಕಡೂರಿನಿಂದ ಸಾವಿರಾರು ಮಹಿಳೆಯರು: ಬೆಳ್ಳಿಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುದತ್ತಪೀಠದಲ್ಲಿನ ಅನುಸೂಯಾ ಜಯಂತಿಗೆ ಕಡೂರು ಕ್ಷೇತ್ರದಿಂದ ಎರಡೂವರೆ ಸಾವಿರಕ್ಕೂ ಹೆಚ್ಚು ಮಹಿಳೆಯರು ತೆರಳಿದರು ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ದತ್ತಪೀಠದಲ್ಲಿನ ಅನುಸೂಯಾ ಜಯಂತಿಗೆ ಕಡೂರು ಕ್ಷೇತ್ರದಿಂದ ಎರಡೂವರೆ ಸಾವಿರಕ್ಕೂ ಹೆಚ್ಚು ಮಹಿಳೆಯರು ತೆರಳಿದರು ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು. ಗುರುವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪೀಠಕ್ಕೆ ತೆರಳಿದ ಮಹಿಳೆಯರನ್ನು ಬೀಳ್ಕೂಟ್ಟು ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮೀಣ ಪ್ರದೇಶ ಹಾಗು ಕಡೂರು-ಬೀರೂರು ಭಾಗದ ಮಹಿಳೆಯರು ದತ್ತಪೀಠಕ್ಕೆ ಈ ಬಾರಿ ಕೊರೆಯುವ ಚಳಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಇಚ್ಛೆಯಿಂದ ತೆರಳುತ್ತಿದ್ದಾರೆ. ಬಸ್ಸು, ಖಾಸಗಿ ವಾಹನಗಳು, ಮಿನಿ ಬಸ್‍ಗಳ ವ್ಯವಸ್ಥೆ ಕಲ್ಪಿಸಿದ್ದು, ವರ್ಷದಿಂದ ವರ್ಷಕ್ಕೆ ಜಯಂತಿ ಉತ್ಸವ ಕಾರ್ಯಕ್ರಮಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿ ಸಂಘಟನೆ ಬಲಗೊಳ್ಳುತ್ತಿದೆ. ಶನಿವಾರ ದತ್ತಪೀಠದಲ್ಲಿ ನಡೆಯಲಿರುವ ದತ್ತಜಯಂತಿಗೆ ಕಡೂರಿನಿಂದ 5 ಸಾವಿರಕ್ಕೂ ಹೆಚ್ಚಿನ ಭಕ್ತರು ದತ್ತ ಮಾಲಾಧಾರಿಗಳಾಗಿ ತೆರಳಲಿದ್ದಾರೆ ಎಂದರು. ದತ್ತಮಾಲಾ ಜಿಲ್ಲಾ ಪ್ರಮುಖ್ ಕಡೂರು ಎ.ಮಣಿ ಮಾತನಾಡಿ,ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಅನುಸೂಯಾ ಜಯಂತಿಗೆ ತೆರಳಿದ್ದು, ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಿದ್ದಾರೆ. ಕರ್ನಾಟಕದಲ್ಲಿ ದತ್ತಪೀಠ ಮುಂದಿನ ದಿನಗಳಲ್ಲಿ ಅಯೋಧ್ಯೆಯಾಗಿ ಮಾರ್ಪಾಡಾಗಲಿದೆ. ಸರ್ಕಾರ ಶಾಶ್ವತ ಪೂಜೆಗೆ ಅವಕಾಶ ನೀಡಿ, ಅರ್ಚಕರನ್ನು ನೇಮಕ ಮಾಡಿ ಗೌರವಧನ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ದೇವಾನಂದ್, ಮುಖಂಡ ಮಲ್ಲಿಕಾರ್ಜುನ್(ಮಲ್ಲು), ಜಿಪಂ ಮಾಜಿ ಸದಸ್ಯ ರಾದ ಕಾವೇರಿ ಲಕ್ಕಪ್ಪ, ವನಮಾಲ ದೇವರಾಜ್, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸಿದ್ದಪ್ಪ, ಶಾಮಿಯಾನ ಚಂದ್ರು, ರಾಜಾನಾಯ್ಕ, ಕುರುಬಗೆರೆ ಮಹೇಶ್, ಬಳ್ಳೇಕೆರೆ ಶಶಿ, ಹುಲ್ಲೇಹಳ್ಳಿ ಲಕ್ಷ್ಮಣ್ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು. 12ಕೆಕೆಡಿಯು1..

ಕಡೂರು ಪಟ್ಟಣದ ಬಿಜೆಪಿ ಕಚೇರಿಯಿಂದ ಮಹಿಳಾ ಕಾರ್ಯಕರ್ತೆಯರು ಅನಸೂಯ ಜಯಂತಿಗೆ ತೆರಳಿದರು. ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಹಿಳೆಯರನ್ನು ಬೀಳ್ಕೊಟ್ಟರು. ಮಲ್ಲಿಕಾರ್ಜುನ್,ಬಿ.ಪಿ. ದೇವಾನಂದ್,ಎ.ಮಣಿ ಮತ್ತಿತರರು ಇದ್ದರು.