ಹುಂಡಿ ಕಳುವಿಗೆ ಯತ್ನಿಸಿದ್ದ ಮೂವರ ಬಂಧನ

| Published : Jan 31 2025, 12:47 AM IST

ಹುಂಡಿ ಕಳುವಿಗೆ ಯತ್ನಿಸಿದ್ದ ಮೂವರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

Three arrested for attempting to steal a hundi

-ಜಗಳೂರುಠಾಣಾ ವ್ಯಾಪ್ತಿಯಲ್ಲಿ 112 ಹೊಯ್ಸಳ ಅಧಿಕಾರಿ ಸಿಬ್ಬಂದಿ ಕ್ಷಿಪ್ರ ಕಾರ್ಯಚರಣೆ

---

ಕನ್ನಡಪ್ರಭ ವಾರ್ತೆ ಜಗಳೂರು: ಅಣಬೂರು ಗ್ರಾಮದ ಆಂಜನೇಯಸ್ವಾಮಿ ದೇವಾಸ್ಥಾನದ ಹುಂಡಿ ಕಳುವು ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಜಗಳೂರು ಠಾಣಾ ವ್ಯಾಪ್ತಿಯಲ್ಲಿ 112 ಹೊಯ್ಸಳ ಅಧಿಕಾರಿ ಸಿಬ್ಬಂದಿ ಕ್ಷಿಪ್ರ ಕಾರ್ಯಚರಣೆಯಿಂದ ಬಂಧಿಸಿದ ಘಟನೆ ಜ.27ರಂದು ರಾತ್ರಿ ನಡೆದಿದೆ. ಅಣಬೂರು ಗ್ರಾಮದ ಆಂಜನೇಯಸ್ವಾಮಿ ದೇಗುಲದ ಹುಂಡಿ ಕಳ್ಳತನಕ್ಕೆ ಯತ್ನಿಸಿದ್ದ ವೇಳೆ ಕರ್ತವ್ಯದಲ್ಲಿದ್ದ ಅಧಿಕಾರಿಗಳು ತತ್ ಕ್ಷಣ ಕಾರ್ಯ ಪ್ರವೃತ್ತರಾಗಿ ಮೂವರು ಕಳ್ಳರನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಕೆಎ16 ಇಎ 4081ಬೈಕ್ ವಶಪಡಿಸಿಕೊಂಡಿದ್ದಾರೆ.

ಆರೋಪಿ ನಾಗರಾಜ್ (47 ವರ್ಷ) ಶೀವಪ್ಪ ಎಂ. (38 ವರ್ಷ), ನರಸಿಂಹಪ್ಪ (42 ವರ್ಷ) ಶಾಂತನಹಳ್ಳಿ ಕೂಡ್ಲೀಗಿ ತಾ. ವಿಜಯನಗರ ಜಿಲ್ಲೆ ಎಂದು ತಿಳಿದು ಬಂದಿದೆ. ಆರೋಪಿತರನ್ನು ಮತ್ತು ಫಿರ್ಯಾದಿ ಯು.ಬಿ ಶರಣಪ್ಪ ಅವರನ್ನು ಜಗಳೂರು ಠಾಣೆಯ ಪೋಲೀಸ್ ನಿರೀಕ್ಷ ರಾಷ್ಟ್ರಪತಿ ಹೆಚ್ ಎಸ್ ಅವರಲ್ಲಿ ಹಾಜರಪಡಿಸಿ ಮೂವರು ಆರೋಪಿತರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ತುರ್ತು ಸಹಾಯವಾಣಿ 112 ಗೆ ಕರೆ ಮಾಡುವಂತೆ ಪೋಲೀಸ್ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

----

30 ಜೆ.ಜಿ.ಎಲ್. 1) ಆರೋಪಿತರ ಬೈಕ್ ವಶ ಪಡಿಸಿಕೊಂಡಿರುವುದು