ಸಾರಾಂಶ
ಜಾನುವಾರುಗಳ ಮೇವಿನ ಮಧ್ಯೆ ಇಟ್ಟಿದ್ದ ಸ್ಫೋಟಕ ಸಿಡಿದು ಮೂರು ಹಸುಗಳ ಬಾಯಿ ಛಿದ್ರಗೊಂಡ ಘಟನೆ ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕೌದಳ್ಳಿ ಗ್ರಾಮದ ಹೊರವಲಯದ ಕುರಟ್ಟಿಹೊಸೂರು ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಬಳಿಯ ಜಮೀನುಗಳ ಬಳಿ ಹಸುಗಳು ಮೇಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಹನೂರು
ಜಾನುವಾರುಗಳ ಮೇವಿನ ಮಧ್ಯೆ ಇಟ್ಟಿದ್ದ ಸ್ಫೋಟಕ ಸಿಡಿದು ಮೂರು ಹಸುಗಳ ಬಾಯಿ ಛಿದ್ರಗೊಂಡ ಘಟನೆ ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕೌದಳ್ಳಿ ಗ್ರಾಮದ ಹೊರವಲಯದ ಕುರಟ್ಟಿಹೊಸೂರು ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಬಳಿಯ ಜಮೀನುಗಳ ಬಳಿ ಹಸುಗಳು ಮೇಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸ್ಫೋಟಕದ ತೀವ್ರತೆಗೆ ಮೂರು ಹಸುಗಳ ಬಾಯಿ ಛಿದ್ರವಾಗಿದೆ. ಕೌದಳ್ಳಿ ಗ್ರಾಮದ ರೈತ ಮುರುಗ ಕೃಷ್ಣ್ಯಯ ರಾಮಪ್ಪ ಎಂಬವರ ಜಾನುವಾರುಗಳಾಗಿವೆ.ಮೂಕ ಪ್ರಾಣಿಗಳ ವೇದನೆ
ಮೇವಿನೊಳಗಡೆ ಅಡಗಿಸುತ್ತಿದ್ದ ಸ್ಫೋಟಕವನ್ನು ತಿಂದ ಮೂರು ಹಸುಗಳು ಬಾಯಿ ಛಿದ್ರಗೊಂಡು ರಕ್ತದ ಮಡುವಿನಲ್ಲಿ ಚಿತ್ರಗೊಂಡಿರುವ ಮುಖದ ಬಾಯಲ್ಲಿ ರಕ್ತ ಕಾರ್ಯಕೊಂಡು ಜಾನುವಾರುಗಳ ಮೂಕ ರೋಗನೆ ಹೇಳತೀರದಾಗಿದೆ. ಕಿಡಿಗೇಡಿಗಳ ಕೃತ್ಯದಿಂದ ಜಾನುವಾರುಗಳ ಬಾಯಿ ಸ್ಫೋಟದ ತೀವ್ರತೆಗೆ ಬಾಯಿಯ ಮೂಲಕ ಉಸಿರಾಡಲು ಸಹ ಜಾನುವಾರುಗಳು ಕಷ್ಟ ಪಡುತ್ತಿರುವುದನ್ನು ನೋಡಲು ಆಗದಂತ ಪರಿಸ್ಥಿತಿಯಲ್ಲಿ ಜಾನುವಾರುಗಳು ಇವೆ. ಹೀಗಾಗಿ ತಾಲೂಕಿನಲ್ಲಿ ಈಗಾಗಲೇ ಹಲವಾರು ಪ್ರಕರಣಗಳು ಇದೇ ಮಾದರಿಯಲ್ಲಿ ಕಂಡುಬಂದಿದ್ದು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.ಈಗಾಗಲೇ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ಮಾಹಿತಿ ಚಾಮರಾಜನಗರ ಎಸ್ಪಿ ಡಾ ಬಿ.ಟಿ ಕವಿತಾ ಕೂಡ ಆಗಮಿಸಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು.