ಸಾರಾಂಶ
ಗ್ರಾಮೀಣ ಮಟ್ಟದಲ್ಲಿ ಯುವಕರು ಸೇರಿ ಕ್ರಿಕೆಟ್ ಆಯೋಜಿಸಿರುವುದು ಕ್ರೀಟಾ ಪ್ರೇಮವನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಅಭ್ಯಾಸ ಮಾಡಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸಾಧನೆ ಮಾಡಬಹುದು. ಮುಂದಿನ ದಿನಗಳಲ್ಲಿ ನಗರದ ಕ್ರೀಡಾಂಗಣದಲ್ಲಿ ಗ್ರಾಮೀಣ ಪ್ರತಿಭೆಯ ಕ್ರಿಡಾಪಟುಗಳನ್ನು ಕರೆತಂದು ಕ್ರೀಡೆ ಆಯೋಜಿಸುವ ಮೂಲಕ ಪ್ರೋತ್ಸಾಹ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹುಲಿವಾನ ಗ್ರಾಮದಲ್ಲಿ ಮೂರು ದಿನ ನಡೆಯುವ ಕ್ರಿಕೆಟ್ ಪಂದ್ಯಾವಳಿಗೆ ಶಾಸಕರಾದ ಪಿ.ರವಿಕುಮಾರ್, ಕೆ.ಎಂ.ಉದಯ್, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಸ್ಟಾರ್ ಚಂದ್ರು ಚಾಲನೆ ನೀಡಿದರು.ಯಂಗ್ ಚಾಲೆಂಜರ್ ಯುವಕರ ಬಳಗ, ಗ್ರಾಪಂ, ಹಾಲು ಉತ್ಪಾದಕರ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಸಂಘ, ಮಹಿಳಾ ಸ್ವಸಹಾಯ ಸಂಘ ಸೇರಿದಂತೆ ಗ್ರಾಮಸ್ಥರ ಸಹಕಾರದಿಂದ ಆಯೋಜಿಸಿದ್ದ ಹುಲಿವಾನ ಪ್ರೀಮಿಯರ್ ಲೀಗ್’ ಮತ್ತು ಕೆರಗೋಡು ಹೋಬಳಿ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆರಂಭವಾಯಿತು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಯುವಕರು ಸೇರಿ ಕ್ರಿಕೆಟ್ ಆಯೋಜಿಸಿರುವುದು ಕ್ರೀಟಾ ಪ್ರೇಮವನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಅಭ್ಯಾಸ ಮಾಡಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸಾಧನೆ ಮಾಡಬಹುದು ಎಂದರು.ಮುಂದಿನ ದಿನಗಳಲ್ಲಿ ನಗರದ ಕ್ರೀಡಾಂಗಣದಲ್ಲಿ ಗ್ರಾಮೀಣ ಪ್ರತಿಭೆಯ ಕ್ರಿಡಾಪಟುಗಳನ್ನು ಕರೆತಂದು ಕ್ರೀಡೆ ಆಯೋಜಿಸುವ ಮೂಲಕ ಪ್ರೋತ್ಸಾಹ ನೀಡಲಾಗುವುದು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾಗಿರುತ್ತದೆ. ಕ್ರೀಡಾ ಸ್ಫೂರ್ತಿಯಿಂದ ಕ್ರೀಡಾ ಪಟುಗಳು ಭಾಗವಹಿಸಿ ಎಂದರು.
ಶಾಸಕ ಉದಯ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರಿಡಾ ಪಟುಗಳು ಗುರುತಿಸುವ ಕೆಲಸವನ್ನು ಈ ಪಂದ್ಯಾವಳಿ ಮಾಡುವಂತಾಗಬೇಕು. ಪಂದ್ಯಾವಳಿಗಳು ಗ್ರಾಮೀಣ ಭಾಗದಲಿ ಹೆಚ್ಚು ನಡೆಯಬೇಕು ಎಂದರು.ಕಾಂಗ್ರೆಸ್ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಸ್ಟಾರ್ ಚಂದ್ರು ಮಾತನಾಡಿ, ವಿಶ್ವದ ಅತ್ಯಂತ ಪ್ರಚಲಿತ ಕ್ರೀಡೆಗಳಲ್ಲಿ ಕ್ರಿಕೆಟ್ ಒಂದಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಕೆಬ್ಬಹಳ್ಳಿ ರಾಜು, ವಿಜಯ್‌ಕುಮಾರ್, ತಾಪಂ ಮಾಜಿ ಸದಸ್ಯ ಪ್ರಶಾಂತ್‌ಬಾಬು, ಮುಖಂಡರಾದ ಆನಂದ್, ವಿಜಯ್ ಕುಮಾರ್, ಸಿದ್ದರಾಮು, ಲಿಂಗರಾಜು, ಕಾಂತರಾಜು, ರಾಜೇಗೌಡ ಭಾಗವಹಿಸಿದ್ದರು.