ಸಾರಾಂಶ
ತೊರೆಶೆಟ್ಟಹಳ್ಳಿಯ ಟಿ.ಕೆ.ಸತೀಶ್, ಮುಟ್ಟನಹಳ್ಳಿಯ ಕೆ.ಪಿ. ದಿವ್ಯ ಹಾಗೂ ಹೊಸಕೆರೆ ಗ್ರಾಮದ ಎಚ್.ಕೆ. ಪುಟ್ಟಲಿಂಗಯ್ಯ ಅವರಿಗೆ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ರಾಧಾ ಎಚ್. ಜಿ. ಪ್ರತಿಭಾ ಅವರು ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ರೈತ ದಿನಾಚರಣೆ ಅಂಗವಾಗಿ ಪಟ್ಟಣದ ಕೃಷಿ ಇಲಾಖೆ ವತಿಯಿಂದ ಮೂವರು ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.ಕೃಷಿ ಇಲಾಖೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ತಾಲೂಕಿನ ತೊರೆಶೆಟ್ಟಹಳ್ಳಿಯ ಟಿ.ಕೆ.ಸತೀಶ್, ಮುಟ್ಟನಹಳ್ಳಿಯ ಕೆ.ಪಿ. ದಿವ್ಯ ಹಾಗೂ ಹೊಸಕೆರೆ ಗ್ರಾಮದ ಎಚ್.ಕೆ. ಪುಟ್ಟಲಿಂಗಯ್ಯ ಅವರಿಗೆ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ರಾಧಾ ಎಚ್. ಜಿ. ಪ್ರತಿಭಾ ಅವರು ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದರು.
ಬಳಿಕ ಮಾತನಾಡಿದ ಪ್ರತಿಭಾ, ರೈತ ದಿನಾಚರಣೆ ಮಹತ್ವ ಮತ್ತು ಇಲಾಖೆಯಿಂದ ದೊರಕುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಮಂಡ್ಯ ವಿ.ಸಿ. ಫಾರ್ಮ್ ವಲಯ ಕೃಷಿ ಸಂಶೋಧಕ ಡಾ.ತಿಮ್ಮೇಗೌಡ ರಾಗಿ, ಭತ್ತ ಮತ್ತು ಕಬ್ಬಿನ ಬೆಳೆ ಉತ್ಪಾದನೆ ಹೆಚ್ಚಳ ಹಾಗೂ ರೇಷ್ಮೆ ಇಲಾಖೆ ಕಾಯಕ ನಿರ್ದೇಶಕ ಸುರೇಶ್ ಇಲಾಖೆ ಯೋಜನೆಗಳ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಹಿರಿಯ ರಾಜಯೋಗಿ ಬಿ.ಕೆ.ಪ್ರಾಣೇಶ್, ತಾಲೂಕು ಕೃಷಿಕ ಸಮಾಜದ ಸದಸ್ಯ ಕೆ.ಕೃಷ್ಣ, ಸಹಾಯಕ ಕೃಷಿ ಅಧಿಕಾರಿ ಎಸ್. ದಯಾನಂದ, ಕೃಷಿ ಅಧಿಕಾರಿಗಳಾದ ಎನ್. ರೂಪಶ್ರೀ, ಕೆ.ಎನ್. ಕರುಣ, ಕೃಷ್ಣೇಗೌಡ, ಆತ್ಮ ಯೋಜನೆಯ ತಾಂತ್ರಿಕ ಅಧಿಕಾರಿ ಗವಾಸ್ಕರ್ ಭಾಗವಹಿಸಿದ್ದರು.