ಅಗ್ನಿ ಅಪ‍ಘಡ: ಮೂವರಿಗೆ ಗಾಯ, ಆಟೋ, 3 ಸ್ಕೂಟರ್ ಭಸ್ಮ

| Published : Feb 04 2025, 12:30 AM IST

ಸಾರಾಂಶ

ಗ್ಯಾಸ್ ಸಿಲಿಂಡರ್ ಆಟೋದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿದ ಪರಿಣಾಮ ಮೂವರು ಗಾಯಗೊಂಡು, ಆಟೋ ರಿಕ್ಷಾ, 2 ದ್ವಿಚಕ್ರ ವಾಹನ ಸಂಪೂರ್ಣ, ಮತ್ತೊಂದು ದ್ವಿಚಕ್ರ ವಾಹನ ಸ್ವಲ್ಪ ಪ್ರಮಾಣದಲ್ಲಿ ಸುಟ್ಟು ಕರಕಲಾದ ಘಟನೆ ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಮುಂಭಾಗದ ರಸ್ತೆ ಬದಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

- ದಾವಣಗೆರೆ ಜಿಲ್ಲಾ ನ್ಯಾಯಾಲಯ ಎದುರಿನ ರಸ್ತೆ ಬದಿ ಘಟನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ಯಾಸ್ ಸಿಲಿಂಡರ್ ಆಟೋದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿದ ಪರಿಣಾಮ ಮೂವರು ಗಾಯಗೊಂಡು, ಆಟೋ ರಿಕ್ಷಾ, 2 ದ್ವಿಚಕ್ರ ವಾಹನ ಸಂಪೂರ್ಣ, ಮತ್ತೊಂದು ದ್ವಿಚಕ್ರ ವಾಹನ ಸ್ವಲ್ಪ ಪ್ರಮಾಣದಲ್ಲಿ ಸುಟ್ಟು ಕರಕಲಾದ ಘಟನೆ ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಮುಂಭಾಗದ ರಸ್ತೆ ಬದಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ರಿಕ್ಷಾವನ್ನು ಮೂವರು ಮೆಕ್ಯಾನಿಕ್‌ಗಳು ರಸ್ತೆ ಬದಿಯಲ್ಲಿ ನಿಲ್ಲಿಸಿ, ದುರಸ್ತಿ ಮಾಡುತ್ತಿದ್ದರು. ಈ ವೇಳೆ ಶಾರ್ಟ್‌ ಸರ್ಕ್ಯೂಟ್ ಸಂಭವಿಸಿ, ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಮೆಕ್ಯಾನಿಕ್‌ಗಳು ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಕೈ-ಕಾಲುಗಳಿಗೆ ಬೆಂಕಿ ತಗುಲಿ, ಸುಟ್ಟ ಗಾಯಗಳಾದವು. ಆಟೋ ರಿಕ್ಷಾದ ಗ್ಯಾಸ್‌ನಿಂದಾಗಿ ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವಿಫಲವಾಯಿತು.

ಬೆಂಕಿ ಕೆನ್ನಾಲಿಗೆ ಕಾವು ಅಕ್ಕಪಕ್ಕ ನಿಲ್ಲಿಸಿದ್ದ ಮೂರು ಸ್ಕೂಟರ್‌ಗಳಿಗೂ ಹರಡಿತು. ದ್ವಿಚಕ್ರ ವಾಹನದ ಫೈಬರ್ ಬಾಡಿ ಬೆಂಕಿ ಕಾವಿಗೆ ಕರಗಿಹೋಯಿತು. ಆಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ವಾಹನಗಳು ಸುಟ್ಟು ಕರಕಲಾಗಿದ್ದವು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಿ, ಚಿಕಿತ್ಸೆ ಕೊಡಿಸಲಾಯಿತು.

- - - -3ಕೆಡಿವಿಜಿ8, 9, 10, 11, 12.ಜೆಪಿಜಿ:

ದಾವಣಗೆರೆ ಕೋರ್ಟ್‌ ಎದುರು ರಸ್ತೆ ಬದಿ ಆಟೋ ದುರಸ್ತಿ ವೇಳೆ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿದ ಪರಿಣಾಮ ಆಟೋ, 3 ದ್ವಿಚಕ್ರ ವಾಹನಗಳು ದಹನವಾದವು.