ಸಿಡಿಲು ಬಡಿದು ಆಕಳು ಸಾವು ಮೂರಕ್ಕೆ ಗಾಯ

| Published : May 18 2024, 12:37 AM IST / Updated: May 18 2024, 12:38 AM IST

ಸಾರಾಂಶ

ಏಕಾಏಕಿ ಸಿಡಿಲು ಬಡಿದ ರಭಸಕ್ಕೆ ಬೆಂಕಿ ವ್ಯಾಪಿಸಿ ದನದ ಕೊಟ್ಟಿಗೆಯೊಂದು ಸುಟ್ಟು ಭಸ್ಮವಾಗಿದ್ದು, ಕೊಟ್ಟಿಗೆಯಲ್ಲಿದ್ದ ನಾಲ್ಕು ಆಕಳು ಪೈಕಿ 50,000 ರು ಮೌಲ್ಯದ ಒಂದು ಆಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಗುರುವಾರ ತಡ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಈ ಆಕಳು ಕರಿಯಪ್ಪ ಎಂಬುವರಿಗೆ ಸೇರಿವೆ. ತಾಲೂಕು ಸೇರಿದಂತೆ ರಂಗಸಮುದ್ರ, ಸುತ್ತಮುತ್ತಲ ಗ್ರಾಮಗಳಲ್ಲಿ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ರಾತ್ರಿ ಮಳೆ ಸುರಿಯುವ ವೇಳೆ ಸಿಡಿಲು ಬಡಿದಿದ್ದು, ಸಿಡಿಲಿನ ರಭಸಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ರಂಗಸಮುದ್ರ ಗ್ರಾಮದ ಜಮೀನಿನಲ್ಲಿ ನಿರ್ಮಿಸಿದ್ದ ಕೊಟ್ಟಿಗೆ ಸಂರ್ಪೂಣ ಸುಟ್ಟು ಹೋಗಿದೆ. ಕೊಟ್ಟಿಗೆಯಲ್ಲಿದ್ದ ನಾಲ್ಕು ಆಕಳು ಪೈಕಿ 50,000 ರು, ಮೌಲ್ಯದ ಒಂದು ಆಕಳು ಸಜೀವ ದಹನವಾಗಿದೆ. ಉಳಿದ ಮೂರು ಆಕಳಿಗೆ ಗಂಭೀರ ಗಾಯಗಳಾಗಿವೆ.ಸಿಡಿಲು ಹೊಡೆಯುತ್ತಿದ್ದಂತೆ ಹಸುಗಳ ರಕ್ಷಣೆಗೆ ತೆರಳಿದ್ದ ಮೊಮ್ಮಗ ಮಹಲಿಂಗಪ್ಪ ಹಾಗೂ ತಾತ ಕರಿಯಪ್ಪನಿಗೆ ಕೈ ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಇವರನ್ನು ಕೂಡಲೇ ತುರ್ತು ವಾಹನವೊಂದರಲ್ಲಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅರಸೀಕೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಸಿಕೊಂಡಿದ್ದು, ತಾಲೂಕು ಪಶು ಆರೋಗ್ಯ ಇಲಾಖೆಯ ಸಹಾಯಕ ನಿರ್ದೇಶಕ ಹೊಸಕೆರಪ್ಪ ಹಾಗೂ ಕಂದಾಯ ಇಲಾಖೆ ತನಿಖಾಧಿಕಾರಿ ಕಿರಣ್‌ಕುಮಾರ್‌, ಕಂದಾಯ ಇಲಾಖೆಯ ಗ್ರಾಮಲೆಕ್ಕಿಗ ಹಾಗೂ ಸಹಾಯಕ ಮಹಲಿಂಗಪ್ಪ ಭೇಟಿ ನೀಡಿದ್ದಾರೆ.