ಸಾರಾಂಶ
ಕೊರಟಗೆರೆ: ತಾಲೂಕಿನ ಪಾತಗಾನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ತಡರಾತ್ರಿ ಮೂರು ಚಿರತೆಗಳು ಸಾಕು ನಾಯಿಯನ್ನ ತಿಂದು ಹೋಗಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಕೊರಟಗೆರೆ: ತಾಲೂಕಿನ ಪಾತಗಾನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ತಡರಾತ್ರಿ ಮೂರು ಚಿರತೆಗಳು ಸಾಕು ನಾಯಿಯನ್ನ ತಿಂದು ಹೋಗಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.ಕೋಳಾಲ ಹೋಬಳಿಯ ಪಾತಗಾನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ನಂಜುಂಡಪ್ಪ ಅವರ ತೋಟದ ಮನೆಯ ಬಳಿ ತಡರಾತ್ರಿ ಮೂರು ಚಿರತೆಗಳು ಪ್ರತ್ಯಕ್ಷಗೊಂಡು ಸಾಕು ನಾಯಿಯನ್ನ ತಿಂದು ಪಾರಾರಿಯಾಗಿವೆ. ಬೆಳಿಗ್ಗೆ ಸಿಸಿ ಕ್ಯಾಮರವನ್ನ ಪರೀಕ್ಷಿಸಿದಾಗ ಮೂರು ಚಿರತೆ ಕಾಣಿಸಿಕೊಂಡಿವೆ. ಸಾರ್ವನಿಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದರು. ತಕ್ಷಣ ಬೋನುಗಳನ್ನ ಇಟ್ಟು ಚಿರತೆಗಳನ್ನ ಸೆರೆ ಹಿಡಿಯುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.