ಸಾರಾಂಶ
ಕಾನೂನು ಸಂಘರ್ಷಕ್ಕೆ ಒಳಗಾದ 16 ವರ್ಷದ ಮೂವರು ಬಾಲಾಪರಾಧಿಗಳು ಕದ್ದ 7 ಲಕ್ಷ ರು. ಮೌಲ್ಯದ 11 ಮೋಟಾರ್ ಬೈಕ್‌ಗಳನ್ನು ಕನಕಪುರ ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
-7 ಲಕ್ಷ ಮೌಲ್ಯದ 11 ಬೈಕ್ ವಶ
- ಬೆಂಗಳೂರು ನಗರ ವ್ಯಾಪ್ತಿಯಲ್ಲೂ ಬೈಕ್‌ಗಳ ಕಳವುಕನಕಪುರ: ಕಾನೂನು ಸಂಘರ್ಷಕ್ಕೆ ಒಳಗಾದ 16 ವರ್ಷದ ಮೂವರು ಬಾಲಾಪರಾಧಿಗಳು ಕದ್ದ 7 ಲಕ್ಷ ರು. ಮೌಲ್ಯದ 11 ಮೋಟಾರ್ ಬೈಕ್‌ಗಳನ್ನು ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆಬಂಧಿತ ಬಾಲಾಪರಾಧಿಗಳು ನಗರದ ಕರಡಿಗುಡ್ಡೆ ಶಂಕರ್ ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್ ಅನ್ನು ಹಾಡಹಗಲೇ ಕದ್ದು ಪರಾರಿಯಾಗಿದ್ದರು. ಇತ್ತೀಚೆಗೆ ಮೋಟಾರ್ ಬೈಕ್ ಕಳ್ಳತನ ಸುದ್ದಿ ಹೆಚ್ಚಾದ ಹಿನ್ನೆಲೆಯಲ್ಲಿ ಕಳ್ಳರನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿತ್ತು. ಮಹರಾಜರಕಟ್ಟೆ ಬೈಪಾಸ್ ರಸ್ತೆಯಲ್ಲಿ ಮೂವರು ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ತೆರಳುತ್ತಿದ್ದ ವೇಳೆ ಅವರನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ನಗರ ಠಾಣಾ ವ್ಯಾಪ್ತಿಯಲ್ಲಿ 4, ಗ್ರಾಮಾಂತರ ಠಾಣೆಯಲ್ಲಿ 3, ಬೆಂಗಳೂರು ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರಲ್ಲಿ ಒಂದು ಸೇರಿ ವಿವಿಧೆಡೆ 2 ವಾಹನಗಳನ್ನು ಕಳ್ಳತನ ಮಾಡಿರುವ ಪ್ರಕರಣದಲ್ಲಿ ಇವರು ಭಾಗಿಯಾಗಿರುವುದು ಕಂಡು ಬಂದಿದೆ. ಕಳ್ಳತನ ಮಾಡಿದ್ದ ಬೈಕ್‌ಗಳನ್ನು ಕನಕಪುರ ಬೈಪಾಸ್ ರಸ್ತೆ ಬಳಿಯ ಮುನೇಶ್ವರಸ್ವಾಮಿ ದೇವಾಲಯದ ಸಮೀಪ ಬಚ್ಚಿಟ್ಟಿದ್ದರು.ವಿಚಾರಣೆ ವೇಳೆ ಬೆಳಕಿಗೆ ಬಂದ 11 ವಾಹನಗಳನ್ನು ವಶಕ್ಕೆ ಪಡೆದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಾಪರಾಧಿಗಳನ್ನು ಬೆಂಗಳೂರು ಮಡಿವಾಳದ ಬಾಲ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಅವರನ್ನು ಪರಿವೀಕ್ಷಣಾಲಯ ವಶಕ್ಕೆ ನೀಡಲಾಗಿದೆ. ಸರ್ಕಲ್ ಇನ್‌ಸ್ಪೆಕ್ಟರ್ ಮಿಥುನ್‌ಶಿಲ್ಪಿ ಮತ್ತು ತಂಡ ಕಾರ್ಯಾಚರಣೆ ನಡೆಸಿದರು.