ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಮೂವರು ನಾಪತ್ತೆ

| Published : Jul 13 2025, 01:18 AM IST

ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಮೂವರು ನಾಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

Three missing in Tungabhadra river in Mantralaya

- ಪುಣ್ಯಸ್ನಾನಕ್ಕಾಗಿ ನದಿಗೆ ಈಜಲು ಹೋಗಿದ್ದ ಯುವಕರು

ರಾಯಚೂರು: ಮಂತ್ರಾಲಯ ಸಮೀಪದ ತುಂಗಭದ್ರ ನದಿಯಲ್ಲಿ ಈಜಲು ಹೋದ ಮೂರು ಜನ ಯುವಕರು ನಾಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ.

ಹಾಸನ ಜಿಲ್ಲೆಯ ಪ್ರಮೋದ್‌ (19), ಸಚಿನ್‌ (20) ಹಾಗೂ ಅಜಿತ್ (20) ನಾಪತ್ತೆಯಾಗಿರುವ ಮೂರು ಜನ ಯುವಕರು ಎಂದು ಹೇಳಲಾಗುತ್ತಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿದ್ದ ಮೂರು ಜನ ಯುವಕರು ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಯಲ್ಲಿ ಇಳಿದಾಗ ಕಣ್ಮರೆಯಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್ ಹಾಗೂ ಈಜುಗಾರರ ತಂಡವು ಜಂಟಿಯಾಗಿ ಶೋಧಕಾರ್ಯವನ್ನು ಕೈಗೊಂಡಿದ್ದಾರೆ.

--------------ಅವಳ ಜತೆಯಲ್ಲಿದ್ದವರ ಜತೆ ಊಟಕ್ಕೆ ಹೋದಾಗ ಇವಳು ಊಟದ ತಟ್ಟೆ ತೆಗೆದುಕೊಂಡು ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.