Sanehalli Shiva, Sanchar,
ಹೂವಿನಹಡಗಲಿ: ಇಲ್ಲಿನ ರಂಗಭಾರತಿ ಕಲಾ ಮಂದಿರದಲ್ಲಿ ಸಾಣೇಹಳ್ಳಿ ಶಿವ ಸಂಚಾರ ನಾಟಕ ಕಲಾ ತಂಡದಿಂದ ಜಂಗಮದೆಡೆಗೆ ಕಳ್ಳರ ಸಂತೆ, ಶಿವಯೋಗಿ ಸಿದ್ಧರಾಮೇಶ್ವರ ಮೂರು ನಾಟಕಗಳು ಅದ್ಭುತ ಪ್ರದರ್ಶನ ಕಂಡವು.
"ಜಂಗಮದೆಡೆಗೆ " ಇದು ಬಸವಣ್ಣನವರ ಬದುಕಿನ ಸುತ್ತ ನಡೆದ ಘಟನಾವಳಿಗಳ ಚಿತ್ರಣ, ಸಂಕ್ರಾಂತಿ, ತಲೆದಂಡ, ಮಹಾಚೈತ್ರ ನಾಟಕಗಳಿಗಿಂತ ಭಿನ್ನವಾಗಿ ಶೀರ್ಷಿಕೆಯೇ ಅದರ ಜಂಗಮದೆಡೆಗೆ ನಾಟಕ ಮೂಡಿಬಂದಿದೆ.ತಿರುಳಿಗೆ ಹಿಡಿದ ಕನ್ನಡಿಯಾಗಿದೆ. ಇಲ್ಲಿ ಬರುವ ಬಸವಣ್ಣ ಬಾಲ್ಯದಲ್ಲೇ ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಇಡುತ್ತಿರುವುದು, ಆರಂಭದ ದೃಶ್ಯದಿಂದಲೇ ವ್ಯಕ್ತವಾಗುವುದು. ಆತ ''''''''ಸ್ಥಾವರ''''''''ವಾಗದೆ ''''''''ಜಂಗಮ''''''''ದೆಡೆಗೆ ನಡೆಯುವುದು ನಾಟಕದ ಸತ್ವಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಬಸವಣ್ಣ ಮಾನವೀಯತೆಯ ಸಾಕಾರಮೂರ್ತಿ, ವಿವೇಕಿ, ಅರ್ಥಶಾಸ್ತ್ರಜ್ಞ, ರಾಜನೀತಿಜ್ಞ, ಧೈರ್ಯಶಾಲಿ, ಜಾತಿಯ ಭೂತದಿಂದ ಹೊರಬಂದ ವಿಶ್ವಪ್ರೇಮಿ. ನಾಟಕದಲ್ಲಿ ಪವಾಡಗಳಿಗೆ ಸ್ಥಾನವಿಲ್ಲ. ಬಸವಣ್ಣನವರ ಅಂತರಂಗ- ಬಹಿರಂಗದ ರೂಪಕಗಳಾಗಿ ಅಳಕು-ಬೆಳಕು ಪಾತ್ರಗಳ ಛಾಯಾ ಸೃಷ್ಟಿ ನಾಟಕಕ್ಕೆ ಮೆರಗು ತಂದಿತ್ತು.
ಅಂದಿನ ರಾಜಕೀಯ ಸಂಚು, ಪುರೋಹಿತ ಶಾಹಿಯ ಪಿತೂರಿ, ಬಿಜ್ಜಳನ ತಳಮಳ, ಗಂಗಾಂಬಿಕೆ, ನೀಲಾಂಬಿಕೆ, ಅಕ್ಕನಾಗಮ್ಮನವರ ಪ್ರೋತ್ಸಾಹ ಮತ್ತಿತರ ಅಂಶಗಳು ನಾಟಕದ ಜಂಗಮತ್ವಕ್ಕೆ ಪ್ರೇರಕವಾಗಿದ್ದವು. ಬಿಜ್ಜಳ, ಬಸವಣ್ಣನವರ ಮಾತಿನ ಸಂಘರ್ಷ ತಾರಕಕ್ಕೇರಿದ ಸಂದರ್ಭದಲ್ಲಿ ಬಸವಣ್ಣ ನೀವು ತುಂಬಿದ ಕೊಡದಂತಿರಬೇಕು ಎಂದು ಪಂಡಿತ ಹೇಳಿದಾಗ, ಖಾಲಿ ಕೊಡದ ಜೊತೆಗೆ ನನ್ನ ವ್ಯವಹಾರವಿಲ್ಲ ಎನ್ನುವ ಬಸವಣ್ಣನವರ ಉತ್ತರ ಪಂಡಿತನ ಮುಖಭಂಗಕ್ಕೆ ಕಾರಣವಾಗುವುದು. ಬಸವಣ್ಣ ಹೌದು ಪ್ರಭು; ಅರ್ಹತೆಯುಳ್ಳ ಯಾರಾದರೂ ತಮ್ಮ ಸ್ಥಾನಕ್ಕೆ ಬರಬಹುದು. ಬಸವಣ್ಣ: ನೀಲಾ ನಿನಗೆ ರಾಜರ ಹೊರಮುಖ ಮಾತ್ರ ಗೊತ್ತು. ಅಧಿಕಾರದ ಹಪಾಹಪಿಯುಳ್ಳವರಿಗೆ ಹಲವು ಮುಖಗಳು. ಇಂಥ ಸಂಭಾಷಣೆಗಳಿಂದಾಗಿ ನಾಟಕ ಪ್ರೇಕ್ಷಕರನ್ನು ಸೆರೆಹಿಡಿದು ಚಿಂತನೆಗೆ ತೊಡಗಿಸುವುದು.ಶಿವಯೋಗಿ ಸಿದ್ದರಾಮೇಶ್ವರ ನಾಟಕವು 12ನೇ ಶತಮಾನದ ವಚನಕಾರ, ಶಿವಯೋಗಿ, ಕರ್ಮಯೋಗಿ ಎಂದೇ ಪ್ರಸಿದ್ಧರಾದವರು ಸಿದ್ಧರಾಮೇಶ್ವರರು. ಇವರ ಜನ್ಮಸ್ಥಳ ಈಗಿನ ಮಹಾರಾಷ್ಟ್ರದಲ್ಲಿರುವ ಸೊಲ್ಲಾಪುರ, ತಂದೆ-ಮುದ್ದುಗೌಡ, ತಾಯಿ-ಸುಗ್ಗಲೆ. ಮನೆದೈವ-ಧೂಳಿಮಾಕಾಳ. ಗುರು ರೇವಣಸಿದ್ಧರ ಕರುಣೆಯ ಕಂದ. ಅವರ ಬದುಕುನ್ನು ಮೂರು ರೀತಿ ಗಮನಿಸಬಹುದು. ಮುಗ್ಧ ಬಾಲಕ ಸಿದ್ಧರಾಮ, ಕರ್ಮಯೋಗಿ ಸಿದ್ಧರಾಮ, ಶಿವಯೋಗಿ ಸಿದ್ಧರಾಮ. ಅವರ ಮೇಲೆ ಪ್ರಭಾವ ಬೀರಿದ ಕ್ಷೇತ್ರಗಳು ಶ್ರೀಶೈಲ, ಕಲ್ಯಾಣ. ಕಾರ್ಯಕ್ಷೇತ್ರ ಸೊಲ್ಲಾಪುರ, ಅಲ್ಲಿ ಏನೆಲ್ಲ ಜನಪರ ಕಾರ್ಯಗಳನ್ನು ಮಾಡಲು ನೆರವಾದವರು ರಾಣಿ ಚಾಮಲಾದೇವಿ. ಕರ್ಮ ಯೋಗದಲ್ಲೇ ಕಳೆದುಹೋಗಬಹುದಾಗಿದ್ದ ಸಿದ್ಧರಾಮೇಶ್ವರರನ್ನು ಎಚ್ಚರಿಸಿ ಶಿವಯೋಗಿಯನ್ನಾಗಿ ಮಾಡಲು ಕಾರಣರಾದವರು ಅನುಭಾವಿ ಅಲ್ಲಮ ಪ್ರಭುದೇವರು. ಕಲ್ಯಾಣದಲ್ಲಿ ಅವಿರಳ ಜ್ಞಾನಿ ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಪಡೆದು ಅವರನ್ನೇ ತಮ್ಮ ಆಧ್ಯಾತ್ಮಿಕ ಗುರುವನ್ನಾಗಿ ಸ್ವೀಕರಿಸುವರು.
ಕಲ್ಯಾಣದಿಂದ ಮತ್ತೆ ತಮ್ಮ ಕಾರ್ಯಕ್ಷೇತ್ರಕ್ಕೆ ಬಂದನಂತರ ಅವರ ಬದುಕಿನ ವಿಧಾನವೇ ಬದಲಾಗುವುದು. ಈ ನಾಟಕ ಸಿದ್ದರಾಮರ ಬದುಕಿನ ವಿವಿಧ ಆಯಾಮಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಬರುವ ಸಿದ್ಧರಾಮ, ಬೊಮ್ಮಯ್ಯ, ಸುಗ್ಗಲೆ, ಮುದ್ದಗೌಡ, ರೇವಣಸಿದ್ಧ, ಹಾವಿನಹಾಳ ಕಲ್ಲಯ್ಯ, ದನಗಾಹಿ ಪಾತ್ರಗಳು ನಾಟಕೀಯ ಅಂಶಗಳಿಗೆ ಮಾತ್ರ ಬಾರದೇ ತಾತ್ವಿಕ ನೆಲೆಯಲ್ಲೂ ನಾಟಕದ ಬೆಳವಣಿಗೆಗೆ ಪೂರಕವಾಗಿ ಬಂದಿವೆ.