ಮನೆಯಲ್ಲಿ ಕಳವು ಕೃತ್ಯ ನಡೆಸಿದ 24 ಗಂಟೆಯಲ್ಲೇ ಮೂವರು ಅಂತರ ಜಿಲ್ಲಾ ದರೋಡೆಕೋರರ ತಂಡವನ್ನು ಜಗಳೂರು ಪೊಲೀಸರು ಬಂಧಿಸಿ, ₹1.85 ಲಕ್ಷ ಮೌಲ್ಯದ 1500 ಗ್ರಾಂ ಬೆಳ್ಳಿ ಸಾಮಾನು, ಕೃತ್ಯಕ್ಕೆ ಬಳಸಿದ್ದ ₹1.15 ಲಕ್ಷ ಮೌಲ್ಯದ ಸ್ಕೂಟಿ ಹಾಗೂ 1 ಕಬ್ಬಿಣದ ರಾಡು ಸೇರಿದಂತೆ ₹3 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.
- 24 ಗಂಟೆಯಲ್ಲೇ ಆರೋಪಿಗಳ ಬಂಧಿಸಿದ ಜಗಳೂರು ಪೊಲೀಸರು - - -
ಕನ್ನಡಪ್ರಭ ವಾರ್ತೆ ದಾವಣಗೆರೆಮನೆಯಲ್ಲಿ ಕಳವು ಕೃತ್ಯ ನಡೆಸಿದ 24 ಗಂಟೆಯಲ್ಲೇ ಮೂವರು ಅಂತರ ಜಿಲ್ಲಾ ದರೋಡೆಕೋರರ ತಂಡವನ್ನು ಜಗಳೂರು ಪೊಲೀಸರು ಬಂಧಿಸಿ, ₹1.85 ಲಕ್ಷ ಮೌಲ್ಯದ 1500 ಗ್ರಾಂ ಬೆಳ್ಳಿ ಸಾಮಾನು, ಕೃತ್ಯಕ್ಕೆ ಬಳಸಿದ್ದ ₹1.15 ಲಕ್ಷ ಮೌಲ್ಯದ ಸ್ಕೂಟಿ ಹಾಗೂ 1 ಕಬ್ಬಿಣದ ರಾಡು ಸೇರಿದಂತೆ ₹3 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಮೆಹಬೂಬ್ ನಗರದ ಪಿಒಪಿ ಕೆಲಸಗಾರ ಹನೀಫ್ (24), ಕಾರು ಚಾಲಕ ಗೌಸ್ ಅಲಿಯಾಸ್ ಗೌಸ್ ಪಾಷಾ ಹಾಗೂ ಗ್ಯಾರೇಜ್ ಮೆಕ್ಯಾನಿಕ್ ಕೆಲಸಗಾರ ಸುಹೇಲ್ (22) ಬಂಧಿತ ಆರೋಪಿಗಳು.ಜಗಳೂರು ಪಟ್ಟಣದ ಉಜ್ಜಿನ ರಸ್ತೆಯ ಹೊರಕೆರೆ ವಾಸಿ ವೈ.ಕೆ. ಉಮಾಶಂಕರ್ ಆ.27ರಂದು ರಾತ್ರಿ 1.30ರ ವೇಳೆ ತಮ್ಮ ಮನೆಯಲ್ಲಿ ಕಳ್ಳವು ನಡೆದಿರುವ ಬಗ್ಗೆ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ಪರಮೇಶ್ವರ ಹೆಗಡೆ, ಗ್ರಾಮಾಂತರ ಡಿವೈಎಸ್‌ಪಿ ಬಿ.ಎಸ್.ಬಸವರಾಜ ಮಾರ್ಗದರ್ಶನದಲ್ಲಿ ಜಗಳೂರು ವೃತ್ತ ನಿರೀಕ್ಷಕ ಸಿದ್ರಾಮಯ್ಯ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿ ತಂಡಗಳನ್ನು ರಚಿಸಲಾಗಿತ್ತು. ತಂಡವು ಪ್ರಕರಣ ನಡೆದ 24 ಗಂಟೆಯಲ್ಲೇ ಸ್ವತ್ತಿನ ಸಮೇತ ಆರೋಪಿಗಳನ್ನು ಬಲೆಗೆ ಕೆಡವಿದೆ.
ಬಂಧಿತ ಮೂವರೂ ಈ ಹಿಂದೆ ಮುನಿರಾಬಾದ್‌ನಲ್ಲಿ ಹೆದ್ದಾರಿ ದರೋಡೆ, ಕುಷ್ಟಗಿ, ಗಂಗಾವತಿ ಪಟ್ಟಣ, ಗ್ರಾಮಾಂತರ, ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಯಲ್ಲಿ ಕಳವು ಕೃತ್ಯ ಸೇರಿದಂತೆ 7 ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬಯಲಾಗಿದೆ.ಕಾರ್ಯಾಚರಣೆಯಲ್ಲಿ ಪಿಎಸ್ಐ ಗಾದಿಲಿಂಗಪ್ಪ, ಶರಣಬಸಪ್ಪ, ಆಶಾ, ಸಿಬ್ಬಂದಿಯಾದ ಎಎಸ್ಐಗಳಾದ ವೆಂಕಟೇಶ, ನಟರಾಜ, ನಾಗಭೂಷಣ, ನಾಗರಾಜಯ್ಯ, ಮಾರಪ್ಪ, ಯಶವಂತ, ಚೈತ್ರಾ, ಕರಿಬಸವರಾಜ, ಜಿಲ್ಲಾ ಪೊಲೀಸ್ ಕಛೇರಿ ಪಿಎಸ್ಐ ಮಂಜುನಾಥ ಕಲ್ಲೇದೇವರ, ಎಎಸ್ಐ ರಾಜು ನಾಗ, ರಾಮಚಂದ್ರ.ಬಿ ಜಾಧವ್, ನಾಗರಾಜ ಕುಂಬಾರ, ಎಚ್‌ಸಿ ಅಖ್ತರ್, ಪಿಸಿ ವಿರೇಶ, ರಮೇಶ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.
- - --31ಕೆಡಿವಿಜಿ2.ಜೆಪಿಜಿ:
ಜಗಳೂರು ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ, ಬೆಳ್ಳಿ ಆಭರಣ, ಸ್ಕೂಟಿ, ಕಬ್ಬಿಣದ ರಾಡು ಜಪ್ತಿ ಮಾಡಿರುವುದು.