ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಇದೇ ಸೆ.22ರಿಂದ ಅ.7ರವರೆಗೆ ನಡೆಯುತ್ತಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಅಗತ್ಯವಾದ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ವಿಚಾರವಾಗಿ ಎಲ್ಲೆಡೆ ಜಾಗೃತಿ ಅಭಿಯಾನಗಳು, ಆಯಾ ಸಮುದಾಯಗಳ ಮುಖಾಂತರ ಮನವಿಗಳು ಭರಪೂರ ಸಾಗಿವೆ.
ರಾಜ್ಯದ ಎಲ್ಲಾ ವರ್ಗಗಳ ಅಥವಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಿಸುವುದು. ಸಮೀಕ್ಷೆಯಲ್ಲಿ ಅನುಸರಿಸಿದ ವಿವಿಧ ಮಾನದಂಡಗಳ ಆಧಾರದ ಮೇಲೆ ಸಂಗ್ರಹಿಸಿದ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಎಲ್ಲಾ ಜನಾಂಗದಲ್ಲಿರುವ ದುರ್ಬಲ ಅಥವಾ ಹಿಂದುಳಿದವರನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ ಕಾರ್ಯಕ್ರಮ ರೂಪಿಸಲು ಕೈಗೊಂಡಿರುವ ಸಮೀಕ್ಷೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ 2024 ನೇ ಜಿಲ್ಲಾ ಸಾಂಖ್ಯಿಕ ಇಲಾಖೆಯ ಪ್ರಕಾರ ಅಂದಾಜು 4 ಲಕ್ಷ 75 ಸಾವಿರ ಕುಟುಂಬಗಳ ಮನೆಮನೆಗೆ ಗಣಿತಿದಾರರು ಭೇಟಿ ನೀಡಿ ಅಂಕಿ-ಅಂಶಗಳನ್ನು ಸಂಗ್ರಹಿಸಲಿದ್ದಾರೆ.ಒಂದು ಮನೆ ಗಣತಿ 45 ನಿಮಿಷ?:
ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮುಖಾಂತರ ಗಣತಿ ಕಾರ್ಯವು ನಡೆಯುತ್ತಿದ್ದು, ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಸುಮಾರು 60 ಪ್ರಶ್ನೆಗಳಿರುವ ಕಾರಣಕ್ಕೆ ಒಂದು ಮನೆ ಗಣತಿಗೆ ಅಂದಾಜು 45 ನಿಮಿಷ ಮೀಸಲಿಡುವ ಸಾಧ್ಯತೆಗಳಿವೆ. ಗಣತಿಯಲ್ಲಿ ವ್ಯಾಪಾರ, ಉದ್ಯೋಗ, ವಿದ್ಯಾರ್ಹತೆ, ಕೌಶಲ್ಯ, ತರಬೇತಿ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು, ಧರ್ಮ, ಜಾತಿ, ಉಪಜಾತಿ, ಕುಲಕಸುಬು ಮುಂತಾದ ಮಾಹಿತಿಗಳ ಬಗ್ಗೆ ಪ್ರಶ್ನೆಗಳಿದ್ದು, ಪಡಿತರ ಚೀಟಿ ಅಥವಾ ಆಧಾರ್ ಸಂಖ್ಯೆಯನ್ನು ದೃಢೀಕರಣ ಪತ್ರವಾಗಿ ಬಳಸಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತದೆ. ಈ ವೇಳೆ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿಕಲಚೇತನರಾಗಿದ್ದಲ್ಲಿ ಯುಡಿಐಡಿ ಕಾರ್ಡ್ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಿದೆ.ಇದು ಕಡ್ಡಾಯ-ಪಿಡಿಎಫ್ ಪಡೆಯಿರಿ:
ಪ್ರತಿ ಕುಟುಂಬದ ಸದಸ್ಯರ ಆಧಾರ್ ಕಾಡ್‌ಗಳು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಸಮೀಕ್ಷೆ ವೇಳೆ ಇ-ಕೆವೈಸಿ ಪ್ರಕ್ರಿಯೆಗಾಗಿ ಒಟಿಪಿ ಸಂಖ್ಯೆ ಆ ಸದಸ್ಯರ ಆಧಾರ್ ಸಂಖ್ಯೆಗೆ ಜೋಡಣೆ ಆಗಿರುವ ಮೊಬೈಲ್ ನಂಬರ್‌ಗೆ ಬರುತ್ತದೆ. ಒಂದು ವೇಳೆ ಆ ಸದಸ್ಯರು ಮನೆಯಲ್ಲಿ ಇಲ್ಲದಿದ್ದರೆ ಕುಟುಂಬದ ಪರವಾಗಿ ಉತ್ತರ ನೀಡುತ್ತಿರುವ ಸದಸ್ಯರು ಪೋನ್ ಮೂಲಕ ಒಟಿಪಿ ಸಂಖ್ಯೆ ಪಡೆದು ಮಾಹಿತಿ ನೀಡಬೇಕಾಗುತ್ತದೆ. ಸಮೀಕ್ಷೆ ಪೂರ್ಣಗೊಂಡ ನಂತರ ಸ್ವಯಂ ದೃಢೀಕರಣ ಪತ್ರ ಭರ್ತಿ ಮಾಡಿ ಅಧಿಕಾರಿಗೆ ನೀಡಬೇಕು.ಶೇ.76 ಯುಎಚ್‌ಐಡಿ:
ಸಮೀಕ್ಷೆ ಪೂರ್ವದಲ್ಲಿ ವಿದ್ಯುತ್ ಸಂಪರ್ಕ ಹೊಂದಿದ ಮನೆಗಳಿಗೆ ಯುಎಚ್‌ಐಡಿ ಸ್ಟಿಕ್ಕರಿಂಗ್ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4 ಲಕ್ಷ 83 ಸಾವಿರ 397 ಸ್ಟಿಕ್ಕರಿಂಗ್ ಮಾಡಬೇಕಾಗಿದ್ದು ಇದರಲ್ಲಿ2,67,934 ಆರ್‌ಆರ್ ಸೇರಿದ ಮನೆಗಳಲ್ಲಿ 3,55,776 ಶೇ.76 ರಷ್ಟು ಸ್ಟಿಕ್ಕರಿಂಗ್ ಮಾಡಿದ್ದು, 1,40, 463 ಆರ್ ಆರ್ ಇಲ್ಲದ ಮನೆಗಳನ್ನು ಗುರುತಿಸಲಾಗಿದೆ.
3,568 ಸಿಬ್ಬಂದಿ ನಿಯುಕ್ತಿಜಿಲ್ಲೆಯಲ್ಲಿ ಸಮೀಕ್ಷೆ ನಡೆಸುವುದಕ್ಕಾಗಿ 3,178 ಗಣತಿದಾರರು, 340 ಮೇಲ್ಚಿಚಾರಕರು ಮತ್ತು 68 ಮಾಸ್ಟರ್ ಟ್ರೈನರ್ಸ್ ಸೇರಿ ಒಟ್ಟು 3,568 ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದ್ದು ಗಣತಿ ಮೇಲ್ಚಿಚಾರಣೆಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ.
ಜಿಲ್ಲೆಯ ದೇವದುರ್ಗ ತಾಲೂಕಿಗೆ 425 ಗಣಿತಿದಾರರು, 45 ಮೇಲ್ವಿಚಾರಕರು, 9 ಮಾಸ್ಟರ್ ಟ್ರೈನರ್ಸ, ಲಿಂಗಸುಗೂರಿನಲ್ಲಿ 470 ಗಣಿತಿದಾರರು, 50 ಮೇಲ್ವಿಚಾರಕರು, 10 ಮಾಸ್ಟರ್ ಟ್ರೈನರ್ಸ್, ಮಾನ್ವಿಯಲ್ಲಿ 310 ಗಣಿತಿದಾರರು, 35 ಮೇಲ್ವಿಚಾರಕರು, 07 ಮಾಸ್ಟರ್ ಟ್ರೈನರ್ಸ್, ಮಸ್ಕಿಯಲ್ಲಿ 310 ಗಣಿತಿದಾರರು, 35 ಮೇಲ್ವಿಚಾರಕರು, 7 ಮಾಸ್ಟರ್ ಟ್ರೈನರ್ಸ್, ರಾಯಚೂರಿನಲ್ಲಿ 860 ಗಣಿತಿದಾರರು, 90 ಮೇಲ್ವಿಚಾರಕರು, 18 ಮಾಸ್ಟರ್ ಟ್ರೈನರ್ಸ್, ಸಿಂಧನೂರಿನಲ್ಲಿ 563 ಗಣಿತಿದಾರರು, 60 ಮೇಲ್ವಿಚಾರಕರು, 12 ಮಾಸ್ಟರ್ ಟ್ರೈನರ್ಸ್, ಸಿರವಾರದಲ್ಲಿ 240 ಗಣಿತಿದಾರರು, 25 ಮೇಲ್ವಿಚಾರಕರು, 5 ಮಾಸ್ಟರ್ ಟ್ರೈನರ್ಸ್‌ಗೆ ತರಬೇತಿ ನೀಡಲಾಗಿದೆ.ಹೀಗೆ ನಡೆಯಲಿದೆ ಗಣತಿ ಕಾರ್ಯ
ಗಣತಿ ಕಾರ್ಯಕ್ಕಾಗಿ ಇಡಿಎಸ್ಎಸ್ ವತಿಯಿಂದ ಸಾಷ್ಟವೇರ್ ಮತ್ತು ಮೊಬೈಲ್ ಆ್ಯಪ್ ತಯಾರಿಸಲಾಗಿದ್ದು, ಈ ಸಂಸ್ಥೆಯ ಮಾರ್ಗದರ್ಶನದೊಂದಿಗೆ ಕರ್ನಾಟಕ ರಾಜ್ಯದಾದ್ಯಂತ ಇಂಧನ ಇಲಾಖೆಯ ಮೀಟರ್ ರೀಡರ್‌ಗಳಿಂದ ಮನೆಮನೆಗೆ ತೆರಳಿ ಜಿಯೋ ಟ್ಯಾಗಿಂಗ್ ಮೂಲಕ ಯುಎಚ್ಐಡಿ ಜನರೇಟ್ ಮಾಡಿ ಮತ್ತು ಸ್ಟಿಕರಿಂಗ್ ಅಂಟಿಸಿ ಈ ನಂಬರ್ ನಮೂದಿಸಲಾಗುತ್ತದೆ. ಬಿಟ್ಟು ಹೋದ ಮನೆಗಳಿಗೆ ಗಣಿತಿದಾರರು ಯುಎಚ್ಐಡಿ ಜನರೇಟ್ ಮಾಡಲಿದ್ದಾರೆ. ಈ ಆಧಾರ ಮೇಲೆ ಕುಟುಂಬ ಸಂಖ್ಯೆಗಳನ್ನು ಗುರುತಿಸಿ ಪ್ರತಿ ಗಣಿತಿದಾರರಿಗೆ 150 ಮನೆಗಳ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಇಂತಹ 10 ಬ್ಲಾಕ್‌ಗಳಿಗೆ ಒಬ್ಬ ಗಣಿತಿ ಮೇಲ್ವಿಚಾರಕರನ್ನು ನೇಮಿಸಲಾಗುತ್ತಿದೆ. ತರಬೇತಿಗಾಗಿ 8 ರಾಜ್ಯಮಟ್ಟದ, 68 ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್, ಪ್ರತಿ ತಾಲೂಕಿಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ, ತಾಂತ್ರಿಕ ಸಿಬ್ಬಂದಿ ನಿಯೋಜಿಸಲಾಗಿದೆ.