2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವಾಣಿಜ್ಯ ವಿಭಾಗದ ಆಕಾಶ ಭದ್ರಶೆಟ್ಟಿ, ವಿಜ್ಞಾನ ವಿಭಾಗದ ಆರತಿ ಆನ್ವೇರಿ ಹಾಗೂ ಪ್ರಸನ್ನಕುಮಾರ ಪಾಟೀಲ ತಲಾ 591 ಅಂಕಗಳನ್ನು ಪಡೆದು, ಶೇ. 98.50 ಪ್ರತಿಶತದೊಂದಿಗೆ ಹಾವೇರಿ ಜಿಲ್ಲೆಯ ಟಾಪರ್ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ.

ಹಾವೇರಿ: 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವಾಣಿಜ್ಯ ವಿಭಾಗದ ಆಕಾಶ ಭದ್ರಶೆಟ್ಟಿ, ವಿಜ್ಞಾನ ವಿಭಾಗದ ಆರತಿ ಆನ್ವೇರಿ ಹಾಗೂ ಪ್ರಸನ್ನಕುಮಾರ ಪಾಟೀಲ ತಲಾ 591 ಅಂಕಗಳನ್ನು ಪಡೆದು, ಶೇ. 98.50 ಪ್ರತಿಶತದೊಂದಿಗೆ ಹಾವೇರಿ ಜಿಲ್ಲೆಯ ಟಾಪರ್ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ.

ಕಲಾ ವಿಭಾಗದಲ್ಲಿ ಹಾನಗಲ್ ತಾಲೂಕು ಬೊಮ್ಮನಹಳ್ಳಿ ಸರಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ಶೃತಿ ಈರಪ್ಪ ಮೂಡೂರು 590 ಅಂಕಗಳೊಂದಿಗೆ ಶೇ.98.33, ರಾಣಿಬೆನ್ನೂರಿನ ಸಂಜೀವಿನಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಶಿವಕುಮಾರ ಗುಡ್ಡಪ್ಪ ಕುಮ್ಮೂರ 587 ಅಂಕಗಳೊಂದಿಗೆ ಶೇ.97.83, ಬ್ಯಾಡಗಿಯ ಮಹಾಂತೇಶ್ವರ ಪ.ಪೂ. ಕಾಲೇಜಿನ ಲಕ್ಷ್ಮಿ ಜಗದೀಶ ವಾಲ್ಮೀಕಿ 586 ಅಂಕಗಳೊಂದಿಗೆ ಶೇ. 97.66ರಷ್ಟು ಫಲಿತಾಂಶ ಪಡೆದು ಕಲಾ ವಿಭಾಗದಲ್ಲಿ ಟಾಪರ್ಸ್‌ ಆಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಹಾವೇರಿ ಆಕ್ಸಫರ್ಡ ಪಿಯು ಕಾಲೇಜಿನ ವಿದ್ಯಾರ್ಥಿ ಆಕಾಶ ಭದ್ರಶೆಟ್ಟಿ 591 ಅಂಕಗಳೊಂದಿಗೆ ಶೇ. 98.50, ಹಾನಗಲ್ ಮೊರಾರ್ಜಿ ದೇಸಾಯಿ ಬಾಲಕಿಯರ ಪ.ಪೂ. ಕಾಲೇಜಿನ ಜಯಲಕ್ಷ್ಮಿ ಬಡಿಗೇರ ಹಾಗೂ ಸವಣೂರಿನ ಸರಕಾರಿ ಮಜೀದ್ ಪಪೂ ಕಾಲೇಜಿನ ವಿದ್ಯಾರ್ಥಿ ನಿತ್ಯರಾಜ ಹಂಚಾಟೆ ತಲಾ 590 ಅಂಕಗಳೊಂದಿಗೆ ಶೇ. 98.33 ಹಾಗೂ ಹಾವೇರಿ ಆಕ್ಸಫರ್ಡ್‌ ಕಾಲೇಜಿನ ಜ್ಯೋತಿ ಜಗದೀಶ ಹೊನಗೇಕರ 589 ಅಂಕಗಳೊಂದಿಗೆ ಶೇ.98.16ರಷ್ಟು ಫಲಿತಾಂಶ ಪಡೆದು ವಾಣಿಜ್ಯ ವಿಭಾಗದ ಟಾಪರ್ಸ್‌ ಆಗಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಮೋಟೆಬೆನ್ನೂರು ಫೇಸ್ ಪಪೂ ಕಾಲೇಜಿನ ವಿದ್ಯಾರ್ಥಿನಿಯರಾದ ಆರತಿ ಮಂಜುನಾಥ ಆನ್ವೇರಿ ಹಾಗೂ ಪ್ರಸನ್ನಕುಮಾರ ಶಾಂತನಗೌಡ ಪಾಟೀಲ ತಲಾ 591 ಅಂಕಗಳೊಂದಿಗೆ ಶೇ.98.50, ರಾಣಿಬೆನ್ನೂರಿನ ದೇವಿಕಾ ಪಪೂ ಕಾಲೇಜಿನ ವೆಂಕಟೇಶ ಬಸವರಾಜ ಅಕ್ಕೂರ 589 ಅಂಕಗಳೊಂದಿಗೆ ಶೇ.98.16, ಸವಣೂರ ಮೊರಾರ್ಜಿ ದೇಸಾಯಿ ವಸತಿಯುತ ಪಪೂ ಕಾಲೇಜಿನ ಚಿನ್ಮಯಿ ಕುಮಾರಸ್ವಾಮಿ ಹಿರೇಮಠ, ರಾಣಿಬೆನ್ನೂರಿನ ದೇವಿಕಾ ಪಪೂ ಕಾಲೇಜಿನ ನಾಯಲಖಾನ್, ನೇಹಾ ಬಸವರಾಜ ಹಳ್ಳಿಯವರ, ಶಿಗ್ಗಾಂವಿಯ ದಿಶಾ ಇಂಟರ್‌ನ್ಯಾಷನಲ್ ಪಿಯು ಕಾಲೇಜಿನ ಶೈನಾಜ್‌ಖಾನಂ ಖಾಜಿಖಾನ್ ಹಾಗೂ ರಾಣಿಬೆನ್ನೂರಿನ ಕನ್ನೂರು ಪಪೂ ಕಾಲೇಜಿನ ಶಂಭುಲಿಂಗ ಸುಂಕದ ತಲಾ 588 ಅಂಕಗಳೊಂದಿಗೆ ಶೇ.98 ಪ್ರತಿಶತದೊಂದಿಗೆ ವಿಜ್ಞಾನ ವಿಭಾಗದಲ್ಲಿ ಟಾಪರ್ಸ್‌ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ ಎಂದು ಡಿಡಿಪಿಯು ಅಶೋಕ ಶಾಸ್ತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.