ಮೂವರು ಯುವಕರು ಕಾವೇರಿ ನದಿ ಪಾಲು: ಒಬ್ಬನ ಮೃತದೇಹ ಪತ್ತೆ

| Published : Mar 08 2024, 01:48 AM IST

ಮೂವರು ಯುವಕರು ಕಾವೇರಿ ನದಿ ಪಾಲು: ಒಬ್ಬನ ಮೃತದೇಹ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕತೂರಿನ ನಿವಾಸಿ ಶ್ರೀನಿವಾಸ್ ಅಲಿಯಾಸ್ ಅಪ್ಪು (23) ಕಣಿವೆಯ ಸಚಿನ್ (25), ಮುಳುಸೋಗೆಯ ಜನತಾ ಕಾಲೋನಿಯ ನಿವಾಸಿ ವಿನೋದ್ (25) ಕೂಡಿಗೆಯಲ್ಲಿ ಗುರುವಾರ ಸಂಜೆ ಕಾವೇರಿ ನದಿಯಲ್ಲಿ ಮುಳುಗಿದ ಯುವಕರು. ಇದರಲ್ಲಿ ಶ್ರೀನಿವಾಸ್ ಮೃತದೇಹವನ್ನು ಹೊರ ತೆಗೆಯಲಾಗಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಸಮೀಪ ಕೂಡಿಗೆಯಲ್ಲಿ ಗುರುವಾರ ಸ್ನಾನಕ್ಕೆ ತೆರಳಿದ ಮೂವರು ಸ್ನೇಹಿತರು ಕಾವೇರಿ ನದಿಯಲ್ಲಿ ಮುಳುಗಿದ್ದು, ಈ ಪೈಕಿ ಒಬ್ಬನ ಮೃತದೇಹ ಪತ್ತೆಯಾಗಿದೆ.ಚಿಕ್ಕತೂರಿನ ನಿವಾಸಿ ಶ್ರೀನಿವಾಸ್ ಅಲಿಯಾಸ್ ಅಪ್ಪು (23) ಕಣಿವೆಯ ಸಚಿನ್ (25), ಮುಳುಸೋಗೆಯ ಜನತಾ ಕಾಲೋನಿಯ ನಿವಾಸಿ ವಿನೋದ್ (25) ಕಾವೇರಿ ನದಿಯಲ್ಲಿ ಮುಳುಗಿದ ಯುವಕರು. ಇದರಲ್ಲಿ ಶ್ರೀನಿವಾಸ್ ಮೃತದೇಹವನ್ನು ಹೊರ ತೆಗೆಯಲಾಗಿದೆ. ಐವರು ಜನ ಸ್ನೇಹಿತರು ಗುರುವಾರ ಸಂಜೆ 5 ಗಂಟೆಗೆ ಕಾರು ನಿಲ್ಲಿಸಿ, ನದಿಯ ಬಳಿ ಸ್ಥಾನಕ್ಕೆಂದು ಇಳಿದ ಸಂದರ್ಭ ಆಳವಾದ ಜಾಗದಲ್ಲಿ ಓರ್ವ ನೀರಿನಲ್ಲಿ ಮುಳುಗಿದ. ಆತನನ್ನು ರಕ್ಷಿಸಲು ಹೋದ ಮತ್ತೆ ಇಬ್ಬರೂ ಕೂಡ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇದೀಗ ಓರ್ವನ ಮೃತ ದೇಹ ದೊರಕಿದ್ದು ಇನ್ನುಳಿದವರಿಗೆ ಶೋಧ ಕಾರ್ಯ ಬರದಿಂದ ಸಾಗುತ್ತಿದೆ.ಸ್ಥಳಕ್ಕೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಡಿ ವೈ ಎಸ್ ಪಿ ಗಂಗಾಧರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ

ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್‍ನಲ್ಲಿ ನಡೆದಿದೆ. ರೇಂಜರ್ ಬ್ಲಾಕ್ ನಿವಾಸಿ ವಿನಾಯಕ ಎಂಬವರ ಪತ್ನಿ ಪೂಜಾಶ್ರೀ (32) ಮೃತರು. ಮೃತದೇಹದ ಬಳಿ ಮರಣ ಪತ್ರ ದೊರೆತಿದ್ದು, ಇದರಲ್ಲಿ ಜೀವನದ ಬಗ್ಗೆ ಜಿಗುಪ್ಸೆ ಹೊಂದಿರುವುದು ಮತ್ತು ಎರಡೂ ಮನೆಯವರೂ ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾರೆ.ಕೆಲಸಕ್ಕೆ ತೆರಳಿದ್ದ ಪತಿ ವಿನಾಯಕ ಅವರು ಮಧ್ಯಾಹ್ನ ಊಟಕ್ಕೆಂದು ಮನೆಗೆ ಆಗಮಿಸಿದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಮಹಜರು ನಡೆಸಿದ ನಂತರ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲಾಗಿದೆ. ಘಟನೆ ಬಗ್ಗೆ ಬೆಂಗಳೂರಿನಲ್ಲಿರುವ ಪೂಜಾಶ್ರೀ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಅವರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೂಜಾಶ್ರೀ ಅವರು 4 ವರ್ಷ ಪ್ರಾಯದ ಪುತ್ರಿ ಹಾಗೂ ಪತಿಯನ್ನು ಅಗಲಿದ್ದಾರೆ.