ಸತ್ಸಂಗದಿಂದ ಸಂಸ್ಕಾರ, ಮನಸಿಗೆ ಶಾಂತಿ ಸಾಧ್ಯ: ಯೋಗಾನಂದ ಶ್ರೀ ಆಶೀರ್ವಚನ

| Published : Oct 22 2025, 01:03 AM IST

ಸತ್ಸಂಗದಿಂದ ಸಂಸ್ಕಾರ, ಮನಸಿಗೆ ಶಾಂತಿ ಸಾಧ್ಯ: ಯೋಗಾನಂದ ಶ್ರೀ ಆಶೀರ್ವಚನ
Share this Article
  • FB
  • TW
  • Linkdin
  • Email

ಸಾರಾಂಶ

ಮನುಕುಲ ಒತ್ತಡಕ್ಕೆ ಸಿಲುಕುತ್ತಿದೆ, ಒತ್ತಡರಹಿತ ಬದುಕಿನ ಅವಶ್ಯಕತೆ ಇದೆ. ಸತ್ಸಂಗದಲ್ಲಿ ಪಾಲ್ಗೊಳ್ಳುವ ಮೂಲಕ ಸಂಸ್ಕಾರ ಮತ್ತು ಶಾಂತಿ ಸಾಧ್ಯ ಎಂದು ಯೋಗಾನಂದ ಶ್ರೀ ನುಡಿದಿದ್ದಾರೆ.

- ಯಲವಟ್ಟಿಯಲ್ಲಿ ಶ್ರೀ ಗುರು ಸಿದ್ದಾಶ್ರಮದಲ್ಲಿ ಅಮಾವಾಸ್ಯೆ ಸತ್ಸಂಗ

- - -

ಹರಿಹರ: ಮನುಕುಲ ಒತ್ತಡಕ್ಕೆ ಸಿಲುಕುತ್ತಿದೆ, ಒತ್ತಡರಹಿತ ಬದುಕಿನ ಅವಶ್ಯಕತೆ ಇದೆ. ಸತ್ಸಂಗದಲ್ಲಿ ಪಾಲ್ಗೊಳ್ಳುವ ಮೂಲಕ ಸಂಸ್ಕಾರ ಮತ್ತು ಶಾಂತಿ ಸಾಧ್ಯ ಎಂದು ಯೋಗಾನಂದ ಶ್ರೀ ನುಡಿದರು.

ತಾಲೂಕಿನ ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ದಾಶ್ರಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸತ್ಸಂಗ ಒಂದು ಸಜ್ಜನರ ಸಮೂಹ, ಭಾಗವಹಿಸುವ ಭಕ್ತರು ಕಾಯಕ ಯೋಗಿಗಳು. ತಮ್ಮ ದಿನನಿತ್ಯದ ಕಾಯಕದಲ್ಲಿ ತೊಡಿಗಿಕೊಂಡು. ಆತ್ಮಶುದ್ದಿಗೆ ಆಧ್ಯಾತ್ಮ ನೆಮ್ಮದಿ ನೀಡುತ್ತದೆ ಎಂದು ಕಂಡುಕೊಂಡವರು. ಕತ್ತಲಿನಿಂದ ಬೆಳಕಿನೆಡೆಗೆ, ಭಾವಶುದ್ಧಿಗಾಗಿ ಅರಸಿ ಭಕ್ತಿಯನ್ನು ಹೊಂದುವುದೇ ಅಧ್ಯಾತ್ಮ. ಗುರು- ಹಿರಿಯರಲ್ಲಿ ಭಕ್ತಿ, ಪರೋಪಕಾರ ಗುಣಗಳು ಸತ್ಸಂಗದಿಂದ ಇಮ್ಮಡಿಗೊಳ್ಳಲಿ ಎಂದು ಅಶೀರ್ವಚನ ನೀಡಿದರು.

ಅಧ್ಯಾತ್ಮ ಚಿಂತಕ ಡಿ. ಸಿದ್ದೇಶ್ ಮಾತನಾಡಿ, ಕಾಯಕದ ಜೊತೆ ಜೊತೆಗೆ ಸಂಸ್ಕಾರ ಮತ್ತು ಸಾಮರಸ್ಯದ ಮಿಳಿತವಾಗಬೇಕಿದೆ. ಅದು ಸತ್ಸಂಗ ಮತ್ತು ಗುರುವಿನ ಸಾಮಿಪ್ಯದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಪ್ರಗತಿಪರ ರೈತ ಕುಂದೂರು ಮಂಜಪ್ಪ ಮಾತನಾಡಿದರು. ಸತ್ಸಂಗ ನಿಮಿತ್ತ ಕತೃ ಗದ್ದಿಗೆಗೆ ಅಭಿಷೇಕ ಮತ್ತು ವಿಶೇಷ ಪೂಜೆ, ಯೋಗಾನಂದ ಶ್ರೀ ಅವರ ಕಿರೀಟ ಪೂಜೆ ನಡೆಯಿತು. ಶಂಖ ನಾದ, ಜೈಕಾರಗಳು ಮೊಳಗಿದವು.

ಬೆಳ್ಳೂಡಿ ಬಸವರಾಜಪ್ಪ ಮತ್ತು ಕುಟುಂಬದವರಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕುಂಬಳೂರಿನ ಕುಬೇರಪ್ಪ ವಚನ ಗಾಯನ ಮಾಡಿದರು. ಜಿಗಳಿ, ಯಲವಟ್ಟಿ ಭಜನಾ ಮಂಡಳಿಯಿಂದ ಭಜನಾ ಪದಗಳು ಎಲ್ಲರ ಗಮನ ಸೆಳೆದವು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಲಿಂಗನಗೌಡ, ಭೂ ನ್ಯಾಯ ಮಂಡಳಿ ಸದಸ್ಯ ವಾಸುದೇವ, ಸುಬೇದಾರ್ ಶಿವಕುಮಾರ್, ಪಿಎಸಿಎಸ್ ನಿರ್ವಾಹಕ ಶೇಖರ್, ಜಿಗಳಿ ಪ್ರಕಾಶ್, ವಿ. ನಾಗೇಂದ್ರಪ್ಪ, ಮಲ್ಲಾಡದ ಕೃಷ್ಣಪ್ಪ, ಮಾಳಗಿ ಮಲ್ಲೇಶ್, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

- - -

-21HRR.01:

ಅಮಾವಾಸ್ಯೆ ಸತ್ಸಂಗದಲ್ಲಿ ಯೋಗಾನಂದ ಶ್ರೀ ಮಾತನಾಡಿದರು.