ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಉತ್ತರ ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿಜಯ ಮಹಾಂತೇಶ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕಲಬುರ್ಗಿ ವಲಯಮಟ್ಟದ ಪಂದ್ಯಾವಳಿಗಳು ಮಹಾಂತ ಗಂಗೋತ್ರಿ ಆವರಣದಲ್ಲಿ ಮಹಿಳಾ ಮತ್ತು ಪುರುಷರ ಥ್ರೋ ಬಾಲ್ ಹಾಗೂ ಮಹಿಳೆಯರ ಟೆನಿಕ್ವಾಯಿಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.ವಿವಿಧ ಮಹಾವಿದ್ಯಾಲಯದ 22 ತಂಡಗಳು ಭಾಗವಹಿಸಿದ್ದು, ವಿಶ್ವವಿದ್ಯಾಲಯದ ನಿಯಮಾನುಸಾರ ರೋಚಕ ಪಂದ್ಯಗಳು ನಡೆದವು. ರಾಜ್ಯದ ವಿವಿಧೆಡೆಯಿಂದ ನುರಿತ ತೀರ್ಪುಗಾರರು ಆಗಮಿಸಿ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟ ಮುಕ್ತಾಯದ ಅಧ್ಯಕ್ಷತೆ ಆರ್.ಪಿ.ಕರಡಿ ಆಯುರ್ವೇದ ಆಸ್ಪತ್ರೆಯ ಚೇರಮನ್ ಆರ್.ಆರ್.ಸೂಡಿ ಹಾಗೂ ಮುಖ್ಯ ಅಥಿತಿಗಳಾಗಿ ಎಸ್.ವಿ.ಎಂ ಪದವಿ ಪೂರ್ವ ಕಾಲೇಜಿನ ಚೇರಮನ್ ಎಂ.ಬಿ.ಹರವಿ, ಅತಿಥಿಗಳಾಗಿ ಡಾ.ಎಸ್.ಎಂ.ಕಡ್ಲಿಮಟ್ಟಿ ಹಾಗೂ ಡಾ.ಡಿ.ಎನ್.ಧರಿ ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಸಿ.ದಾಸ, ಉಪಪ್ರಾಂಶುಪಾಲ ಡಾ.ಪ್ರಕಾಶ ತಾರಿವಾಳ, ದೈಹಿಕ ನಿರ್ದೇಶಕ ಡಾ.ಜಗದೀಶ ಹೂಲಗೇರಿ, ಕಲಬುರ್ಗಿ ವಲಯದ ಕ್ರೀಡಾ ಸಂಯೋಜಕ ಹನಮಂತ ಪವಾರ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪಂದ್ಯಾವಳಿಗಳಲ್ಲಿ ಪಾಲ್ಗೊಂಡ ಎಲ್ಲ ಮಹಾವಿದ್ಯಾಲಯದ ಸ್ಪರ್ಧಾಳುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಾರ್ಯಕ್ರಮವನ್ನು ಕುಮಾರಿ ಸೋನಿಯಾ ಹತ್ತಳ್ಳಿ ಮತ್ತು ಕುಮಾರಿ ಐಶ್ವರ್ಯ ಪಾಟೀಲ ನಿರೂಪಿಸಿದರು. ಡಾ.ಕೆ.ಎಂ.ಸಿದ್ದಲಿಂಗಯ್ಯಮೂರ್ತಿ ವಂದಿಸಿದರು.
ಥ್ರೋ ಬಾಲ್‌ನಲ್ಲಿ ಮಹಿಳಾ ವಿಭಾಗ:ಆರ್.ಕೆ.ಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ವಿಜಯಪುರ(ಪ್ರಥಮ), ವಿಜಯ ಮಹಾಂತೇಶ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಇಳಕಲ್ಲ(ದ್ವಿತೀಯ), ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ವಿಜಯಪುರ(ತೃತೀಯ) ಹಾಗೂ ಎಸ್.ಜೆ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಕೊಪ್ಪಳ(ಚತುರ್ಥ).ಥ್ರೋ ಬಾಲ್‌ನಲ್ಲಿ ಪುರುಷ ವಿಭಾಗ:ಬಿಎಲ್‌ಡಿಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ವಿಜಯಪುರ(ಪ್ರಥ), ಎಸ್.ಜೆ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಕೊಪ್ಪಳ(ದ್ವಿತೀಯ), ನ್ಯೂ ಅಶ್ವಿನಿ ಕಾಲೇಜ ಆಫ್ ನರ್ಸಿಂಗ್ ವಿಜಯಪುರ(ತೃತೀಯ) ಹಾಗೂ ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ ವಿಜಯಪುರ(ಚತುರ್ಥ).ಮಹಿಳೆಯರ ಟೆನಿಕ್ವಾಯಿಟ್ ಪಂದ್ಯ
ವಿಜಯ ಮಹಾಂತೇಶ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಇಳಕಲ್ಲ(ಪ್ರಥಮ), ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ಆ ಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ವಿಜಯಪುರ(ದ್ವಿತೀಯ), ಎಸ್.ಜೆ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಕೊಪ್ಪಳ(ತೃತೀಯ) ಹಾಗೂ ಎಸ್.ಡಿ.ಎಂ. ಕಾಲೇಜ್ ಆಫ್ ನರ್ಸಿಂಗ್ ತೇರದಾಳ(ಚತುರ್ಥ) ಸ್ಥಾನ ಪಡೆದುಕೊಂಡಿದ್ದಾರೆ.