ತುಂಬೆ ‘ವಾರ್ಷಿಕ ಆರೋಗ್ಯ ಪ್ರಶಸ್ತಿ-೨೦೨೫’: ನಾಮಿನೇಷನ್‌ ಆರಂಭ

| Published : Jul 22 2025, 12:00 AM IST

ತುಂಬೆ ‘ವಾರ್ಷಿಕ ಆರೋಗ್ಯ ಪ್ರಶಸ್ತಿ-೨೦೨೫’: ನಾಮಿನೇಷನ್‌ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಹೆಲ್ತ್ ಮ್ಯಾಗಝಿನ್ ಮತ್ತು ತುಂಬೆ ಮಾಧ್ಯಮದ ಸಹಯೋಗದಲ್ಲಿ ‘ವಾರ್ಷಿಕ ಆರೋಗ್ಯ ಪ್ರಶಸ್ತಿ-೨೦೨೫’ ಗೆ ನಾಮಿನೇಷನ್‌ಗಳು ಪ್ರಾರಂಭವಾಗಿವೆ. ನಾಮಿನೇಷನ್ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ ೨೦, ೨೦೨೫.

ಕನ್ನಡಪ್ರಭ ವಾರ್ತೆ ಮಂಗಳೂರುಹೆಲ್ತ್ ಮ್ಯಾಗಝಿನ್ ಮತ್ತು ತುಂಬೆ ಮಾಧ್ಯಮದ ಸಹಯೋಗದಲ್ಲಿ ‘ವಾರ್ಷಿಕ ಆರೋಗ್ಯ ಪ್ರಶಸ್ತಿ-೨೦೨೫’ ಗೆ ನಾಮಿನೇಷನ್‌ಗಳು ಪ್ರಾರಂಭವಾಗಿವೆ. ಯುಎಇಯಲ್ಲಿ ಆರೋಗ್ಯ ಕ್ಷೇತ್ರದ ಅತ್ಯುನ್ನತ ಗೌರವ ಪ್ರಶಸ್ತಿ ಇದಾಗಿದೆ.

೧೫ ಯುಎಇ ನಾಗರಿಕರು ಮತ್ತು ಇನ್ನೂ ೪೬ ವಿಭಿನ್ನ ವಿಭಾಗಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುತ್ತದೆ. ಈ ಸಮಾರಂಭ ಅಕ್ಟೋಬರ್ ೯ರಂದು ಬೆಳಗ್ಗೆ ೧೧ ಗಂಟೆಗೆ ದುಬೈನ ಗ್ರ್ಯಾಂಡ್ ಹಯಾತ್‌ ಹೋಟೆಲ್‌ನಲ್ಲಿ ನಡೆಯಲಿದೆ.ಇದೇ ಮೊದಲ ಬಾರಿಗೆ ೧೫ ಎಮಿರಾತಿ ಆರೋಗ್ಯ ವೃತ್ತಿಪರರು ವಿಶೇಷ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಸಾರ್ವಜನಿಕ ಆರೋಗ್ಯದ ಅಭಿಯಾನಗಳಿಂದ ಹಿಡಿದು ಶಸ್ತ್ರಚಿಕಿತ್ಸಾ ಸಾಧನೆ, ನವೀನತೆ, ಆರೈಕೆ, ಆರೋಗ್ಯ ಶಿಕ್ಷಣ ಮತ್ತು ಇನ್ನೂ ಹಲವಾರು ವಿಭಾಗಗಳಲ್ಲಿ ಸಾಧನೆ ಮಾಡಿದವರನ್ನು ಈ ಪ್ರಶಸ್ತಿ ಪಟ್ಟಿಯಲ್ಲಿ ಗುರುತಿಸಲಾಗುತ್ತಿದೆ.ನಾಮಿನೇಷನ್ ಮಾತ್ರವಲ್ಲ ಇದು ನಿಮ್ಮ ಕಥೆ ಹೇಳುವ ವೇದಿಕೆ. ವೈಯಕ್ತಿಕ ವೈದ್ಯರಿಂದ ಹಿಡಿದು ಆಸ್ಪತ್ರೆಗಳವರೆಗೂ, ಸ್ಟಾರ್ಟಪ್‌ಗಳಿಂದ ಹಿಡಿದು ವೈದ್ಯಕೀಯ ತಂಡಗಳವರೆಗೂ ಈ ವೇದಿಕೆ ಸಾಧನೆಗಳನ್ನು ಹಂಚಿಕೊಳ್ಳಲು ಒಂದು ಸುವರ್ಣಾವಕಾಶ ಇದೆ.ತುಂಬೆ ಮಾಧ್ಯಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ವಿಗ್ನೇಶ್ ಎಸ್. ಉನಡ್ಕತ್ ಮಾತನಾಡಿ, ಇದು ಈ ಪ್ರದೇಶದಲ್ಲಿನ ಅತೀದೊಡ್ಡ ಆರೋಗ್ಯ ಪ್ರಶಸ್ತಿ ವೇದಿಕೆ. ಇದರ ಪ್ರಮಾಣ, ವ್ಯಾಪ್ತಿ ಮತ್ತು ಪ್ರಭಾವದಲ್ಲಿ ಇದು ಸಾಟಿ ಇಲ್ಲದಂತದ್ದು. ಉತ್ತಮ ಆರೋಗ್ಯ ವೃತ್ತಿಪರರಿಗೆ ಮಾನ್ಯತೆ, ವಿಶ್ವಾಸಾರ್ಹತೆ ಮತ್ತು ಪ್ರಾದೇಶಿಕ ಗುರುತಿನ ವೇದಿಕೆ ಇದಾಗಿದೆ ಎಂದಿದ್ದಾರೆ.

ಈ ಪ್ರಶಸ್ತಿಗಾಗಿ ಪಾಲ್ಗೊಳ್ಳಲು: ವೆಬ್‌ಸೈಟ್‌- https://www.healthmagazine.ae/awards/ ಗೆ ಭೇಟಿ ನೀಡಿ ನಿಮಗೆ ಹೊಂದಿಕೊಳ್ಳುವ ವಿಭಾಗವನ್ನು ಆಯ್ಕೆ ಮಾಡಬೇಕು. ನಿಮ್ಮ ಸಾಧನೆ, ಪ್ರಭಾವ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನೀವು ಹೇಗೆ ಮುಂದುವರೆದಿದ್ದೀರಿ ಎಂಬ ಮಾಹಿತಿಯೊಂದಿಗೆ ನಾಮಿನೇಷನ್ ಸಲ್ಲಿಸಬೇಕು. ಎಲ್ಲ ನಾಮಿನೇಷನ್‌ಗಳನ್ನು ಅನುಭವಿ ತಜ್ಞರ ಸಮಿತಿಯು ಪರಿಶೀಲಿಸಿ ಅಕ್ಟೋಬರ್ ೯ರಂದು ವಿಜೇತರನ್ನು ಘೋಷಿಸಲಾಗುವುದು.

ನಾಮಿನೇಷನ್ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ ೨೦, ೨೦೨೫