ಯುಎಇಯಲ್ಲಿ ತುಂಬೆ ಗ್ರೂಪ್ ತನ್ನ 28ನೇ ವರ್ಷದ ಸಂಭ್ರಮವನ್ನು ಶಾರ್ಜಾದ ತುಂಬೆ ಗ್ರೂಪ್ ವಿಲ್ಲಾದಲ್ಲಿ ಆಚರಿಸಿಕೊಂಡಿತು.
ಮಂಗಳೂರು: ಯುಎಇಯಲ್ಲಿ ತುಂಬೆ ಗ್ರೂಪ್ ತನ್ನ 28ನೇ ವರ್ಷದ ಸಂಭ್ರಮವನ್ನು ಶಾರ್ಜಾದ ತುಂಬೆ ಗ್ರೂಪ್ ವಿಲ್ಲಾದಲ್ಲಿ ಆಚರಿಸಿಕೊಂಡಿತು. ಡಾ. ತುಂಬೆ ಮೊಯ್ದೀನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್ ಸಂಸ್ಥೆಯ ಬೆಳವಣಿಗೆಯನ್ನು ದೃಶ್ಯಾವಳಿ ಪ್ರದರ್ಶನ ಮೂಲಕ ವಿವರಿಸಲಾಯಿತು. ಡಾ. ತುಂಬೆ ಮೊಯ್ದೀನ್ ಅವರು ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿ ತುಂಬೆ ಗ್ರೂಪ್ ನಿರ್ಮಿಸಿದ ಜಾಗತಿಕ ಮಾನದಂಡಗಳನ್ನು ಸ್ಮರಿಸಿ, ಯುಎಇ ನಾಯಕತ್ವ ಹಾಗೂ ಕರ್ನಾಟಕ ಸಮುದಾಯದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಪ್ರಮುಖ ಅಂಗವಾಗಿ ಜೀವಮಾನ ಸಾಧನಾ ಪ್ರಶಸ್ತಿಯನ್ನು ಇಎಂಸಿಒ ಚೇರ್ಮನ್ ಮೊಹಮ್ಮದ್ ಮೀರಾನ್ ಹಾಗೂ ಬ್ಯಾರೀಸ್ ಕಲ್ಚರಲ್ ಫೋರಂನ ಡಾ.ಬಿ.ಕೆ. ಯೂಸುಫ್ ಅವರಿಗೆ ಪ್ರದಾನ ಮಾಡಲಾಯಿತು.ಸಮಾರಂಭದಲ್ಲಿ ಗಣ್ಯ ಅತಿಥಿಯಾಗಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಭಾರತದ ಕೌನ್ಸುಲ್ ಜನರಲ್ ದುಬೈ ಸತೀಶ್ ಕುಮಾರ್ ಶಿವನ್ ಭಾಗವಹಿಸಿದ್ದರು. ಮುಖಂಡರಾದ ಡಾ. ಕಾಪು ಮುಹಮ್ಮದ್, ಪ್ರವೀಣ್ ಶೆಟ್ಟಿ, ಮೊಹಮ್ಮದ್ ಅಲಿ ಉಚ್ಚಿಲ್, ಶಶಿಧರ ನಾಗಾರಾಜಪ್ಪ ಮತ್ತು ಹಿದಾಯತ್ ಅಡ್ಡೂರು ಅವರು ಏಕತೆ, ಸೇವೆ ಮತ್ತು ಸಾಮೂಹಿಕ ಪ್ರಗತಿಯ ಮಹತ್ವವನ್ನು ವಿವರಿಸಿದರು.