ತುಂಬೆ: ಮೂರು ದಿನಗಳ ತುಂಬೆ ಫೆಸ್ಟ್ ಆಹಾರ ಮೇಳಕ್ಕೆ ಚಾಲನೆ

| Published : Apr 15 2025, 12:56 AM IST

ತುಂಬೆ: ಮೂರು ದಿನಗಳ ತುಂಬೆ ಫೆಸ್ಟ್ ಆಹಾರ ಮೇಳಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ತುಂಬೆ ಫಾದರ್ ಮುಲ್ಲರ್ಸ್‌ ಆಸ್ಪತ್ರೆ ಬಳಿ ಬಿ.ಎ. ಸಮೂಹ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾದ ಮೂರು ದಿನಗಳ ‘ತುಂಬೆ ಫೆಸ್ಟ್’ ಆಹಾರ ಮತ್ತು ಸಾಂಸ್ಕೃತಿಕ ಮೇಳಕ್ಕೆ ಶುಕ್ರವಾರ ಸಂಜೆ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಇಲ್ಲಿನ ತುಂಬೆ ಫಾದರ್ ಮುಲ್ಲರ್ಸ್‌ ಆಸ್ಪತ್ರೆ ಬಳಿ ಬಿ.ಎ. ಸಮೂಹ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾದ ಮೂರು ದಿನಗಳ ‘ತುಂಬೆ ಫೆಸ್ಟ್’ ಆಹಾರ ಮತ್ತು ಸಾಂಸ್ಕೃತಿಕ ಮೇಳಕ್ಕೆ ಶುಕ್ರವಾರ ಸಂಜೆ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನೀಡಿದರು.ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಮುನ್ನಡೆದಾಗ ಆರೋಗ್ಯ ಮತ್ತು ವ್ಯಾವಹಾರಿಕ ಚಟುವಟಿಕೆಗಳು ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಮೊಡಂಕಾಪು ಇನ್ಫೆಂಟ್ ಚರ್ಚ್‌ ಧರ್ಮಗುರು ವಲೇರಿಯನ್ ಡಿಸೋಜ, ಮಿತ್ತಬೈಲು ಜುಮ್ಮಾ ಮಸೀದಿ ಧರ್ಮಗುರು ಇರ್ಷಾದ್‌ ದಾರಿಮಿ ಶುಭ ಹಾರೈಸಿದರು.ಬಿ.ಎ.ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಅಬ್ದುಲ್ ಸಲಾಂ, ಸಂಘಟಕ ಬಿ.ಎಂ.ಆಶ್ರಫ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಕೇಶವ, ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪ್ರಮುಖರಾದ ಗೋಪಾಲಕೃಷ್ಣ ಸುವರ್ಣ, ಪ್ರವೀಣ ತುಂಬೆ, ಕಾಲೇಜಿನ ಪ್ರಾಂಶುಪಾಲ ವಿ.ಎಸ್.ಭಟ್, ಐಟಿಐ ಪ್ರಾಂಶುಪಾಲ ಪ್ರವೀಣ ಕುಮಾರ್, ವ್ಯವಸ್ಥಾಪಕ ಕಬೀರ್ ಮತ್ತಿತರರು ಇದ್ದರು. ವೆಲಿಟಾ ಲೋಬೋ ಸ್ವಾಗತಿಸಿ, ವಂದಿಸಿದರು............‘ಕಾವ್ಯಾಂ ವ್ಹಾಳೊʼ ಕೊಂಕಣಿ ಕವಿಗೋಷ್ಠಿ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊʼ ಶೀರ್ಷಿಕೆಯಡಿ ಮಾಸಿಕ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.ರಾಜ್ಯದಲ್ಲಿ ಪ್ರಥಮ ಬಾರಿ ಕೊಂಕಣಿ ಭಾಷೆಯಲ್ಲಿ ಪ್ರಬಂಧ ಮಂಡಿಸಿ ಪಿಎಚ್‌ಡಿ ಮಾಡಿದ ಡಾ. ಪ್ರೇಮ್ ಮೊರಾಸ್ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಗಾಯಕಿ ರಿಶಲ್ ಮೆಲ್ಬಾ ಕ್ರಾಸ್ತಾ ಅವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಯಾಗಿ ಕೊಡಿಯಾಲ್ ಖಬರ್ ಡಾಟ್‌ ಕಾಮ್‌ ಸಂಪಾದಕ ವೆಂಕಟೇಶ್ ಬಾಳಿಗ ಭಾಗವಹಿಸಿದ್ದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಆಲ್ವಿನ್ ಡೆಸಾ ಅವರು ಕವಿತೆಗಳ ಬಗ್ಗೆ ಉಪನ್ಯಾಸ ನೀಡಿದರು.

ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಸ್ವಾಗತಿಸಿದರು. ಕವಿ ಜೊಸ್ಸಿ ಪಿಂಟೊ ಕಿನ್ನಿಗೋಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ವಾಚಿಸಿದ ಕವಿತೆಗಳನ್ನು ಎಲ್ಸನ್ ಡಿಸೋಜ ಹಿರ್ಗಾನ ವಿಮರ್ಶಿಸಿದರು. ಅನಿಲ್ ಜೆ. ಕುವೆಲ್ಲೊ, ರಮಾನಾಥ ಮೇಸ್ತ ಶಿರೂರು, ವಿನೋದ್ ಪಿಂಟೊ ತಾಕೊಡೆ, ಸತ್ಯವತಿ ಕಾಮತ್ ಮಂಗಳೂರು, ಮೇರಿ ಸಲೋಮಿ ಡಿಸೋಜ ಮೊಗರ್ನಾಡ್, ವೆಂಕಟೇಶ್ ನಾಯಕ್ ಮಂಗಳೂರು, ನವೀನ್ ಪಿರೇರಾ ಸುರತ್ಕಲ್, ರಿಚ್ಚಿ ಪಿರೇರಾ ದೆರೆಬೈಲ್‌, ಮರ್ಲಿನ್ ಮಸ್ಕರೇನ್ಹಸ್, ಪ್ರೀತಾ ಮಿರಾಂದಾ ಮುಂತಾದವರು ಕವಿತೆಗಳನ್ನು ವಾಚಿಸಿದರು.ಅಕಾಡೆಮಿ ಸದಸ್ಯ ರೊನಾಲ್ಡ್ ಕ್ರಾಸ್ತಾ ನಿರೂಪಿಸಿ ವಂದಿಸಿದರು. ಸದಸ್ಯರಾದ ನವೀನ್ ಲೋಬೊ, ಸಮರ್ಥ್ ಭಟ್, ಅಕ್ಷತಾ ನಾಯಕ್ ಇದ್ದರು.