ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ವಿಜಯಪುರ ಜಿಲ್ಲೆ ಈಗಾಗಲೇ 13 ತಾಲೂಕುಗಳನ್ನು ಹೊಂದಿದೆ. ಹೊಸದಾಗಿ ಇಂಡಿ ಜಿಲ್ಲೆಯಾಗಲಿ ಎಂಬುದು ಆ ಭಾಗದ ಜನರ ಬಹುದಿನದ ಕೂಗಿದೆ. ಸರ್ಕಾರ ಈ ಕುರಿತು ಏನು ಹೇಳಲಿದೆ ಎಂದು ಪ್ರಶ್ನಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಅಧಿವೇಶನದಲ್ಲಿ ಗಮನ ಸೆಳೆದರು.ರಾಜಸ್ಥಾನ್ ರಾಜ್ಯ 50 ರಿಂದ 51 ಜಿಲ್ಲೆಗಳನ್ನು ಹೊಂದಿದೆ. ಜಿಲ್ಲೆ ಮಾಡುವ ಕಾಲ ಬಂದಾಗ ಬೆಳಗಾವಿಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಇಂಥವೂ ಅನೇಕ ಜಿಲ್ಲೆಗಳನ್ನು ಸರ್ಕಾರ ಮಾಡಿದರೆ ಆಡಳಿತ ದೃಷ್ಠಿಯಿಂದ ಬಹಳ ಅನುಕೂಲವಾಗುತ್ತದೆ. ಅವಿಭಾಜ್ಯ ಧಾರವಾಡ ಹಾವೇರಿ, ಗದಗ ಧಾರವಾಡ ಸೇರಿ 3 ಜಿಲ್ಲೆಗಳನ್ನಾಗಿ ಪರಿವರ್ತನೆ ಮಾಡಿದೆ. ಆ ರೀತಿ ನಮಗೂ ಅನುಕೂಲ ಮಾಡಿಕೊಡಬೇಕು. ನಮ್ಮ ಭಾಗದ ಜನರು ರಾಜ್ಯದ ಗಡಿ ಭಾಗದಲ್ಲಿ ಇದ್ದಾರೆ. ಅಪರಾಧ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತವೆ. ಬ್ರಿಟೀಷರ ಕಾಲದಲ್ಲಿ ಕಂದಾಯ ಉಪ ವಿಭಾಗವನ್ನು ಮಾಡಲಾಗಿದೆ. ಜಿಲ್ಲೆಯಾಗುವ ಎಲ್ಲ ವಿಧಾನಗಳು ಅಡಗಿವೆ. ಇವತ್ತಿಗೂ ಕೆಲವು ಕಡೆಗಳಲ್ಲಿ ಡಿಸಿ ಕಚೇರಿಗಳು ಚನ್ನಾಗಿಲ್ಲ. ಆದರೆ ನಮ್ಮ ಇಂಡಿಗೆ ಬಂದು ನೋಡಿದರೆ ಡಿಸಿ ಕಚೇರಿ ಇರುವ ಹಾಗೆ ಕಂದಾ ಉಪ ವಿಭಾಗಾಧಿಕಾರಿಗಳ ಕಚೇರಿಯ ಕಂದಾಯ ಭವನವನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯ ಮಟ್ಟದ ಲಿಂಬೆ ಅಭಿವೃದ್ಧಿ ಮಂಡಳಿ ಇದೆ. ರೈಲ್ವೆ ಟ್ರ್ಯಾಕ್ ಬ್ರಾಡ್‌ಗೇಜ್ ಇದೆ. ರಾಷ್ಟ್ರೀಯ ಹೆದ್ದಾರಿಗಳಿವೆ. ಗಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಆದ್ದರಿಂದ ಇಂಡಿ ಜಿಲ್ಲೆಯಾದರೆ ಎಲ್ಲ ರೀತಿಯಿಂದಲೂ ಅನುಕೂಲವಾಗಲಿದೆ ಎಂದು ತಿಳಿಸಿದರು.
371 ಜೆ ನಲ್ಲಿ ವಂಚನೆಇಂಡಿ, ಸಿಂದಗಿ ಭಾಗ ಆರ್ಟಿಕಲ್ 371 ಜೆ ದಿಂದ ವಂಚಿತವಾಗಿವೆ. ಪಕ್ಕದ ಅಫಜಲಪೂರ, ಆಳಂದ, ಜೇವರ್ಗಿಗೆ ಸಿಗುವ ಸೌಲಭ್ಯಗಳು ನಮಗೆ ಸಿಗುವುದಿಲ್ಲ. ಅತ್ಯಂತ ಹಿಂದುಳಿದ ಈ ಪ್ರದೇಶಕ್ಕೆ ಅವಕಾಶ ನೀಡಿದರೆ ಜನರು ಸರ್ಕಾರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಜಿಲ್ಲೆ ಮಾಡುವ ಸಂದರ್ಭ ಬಂದಾಗ, ಇಂದೇ ಮಾಡಿ ಎಂದು ನಾನು ಹೇಳುವುದಿಲ್ಲ. ತಾವು ಎಂದು ಮಾಡಲು ನಿರ್ಣಯ ಮಾಡುತ್ತಿರೊ ಅಂದು ಇಂಡಿಯನ್ನು ಪರಿಗಣಿಸಬೇಕು ಎಂದು ಸದನದಲ್ಲಿ ಒತ್ತಾಯ ಮಾಡಿದರು.ಸಾಹಿತಿಗಳ ಕೊಡುಗೆ ಅನನ್ಯ
ಕನ್ನಡ ನಾಡು ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿದೆ. ಅದರಲ್ಲಿ ವಿಜಯಪುರ ಭಾಗ, ಬೇಂದ್ರೆ ಅವರ ಕಾಲದಿಂದ ಹಲಸಂಗಿ ಗೆಳೆಯರ ಬಳಗ ಮಧುರಚನ್ನರು, ಸಿಂಪಿ ಲಿಂಗಣ್ಣನವರು, ಶ್ರೀರಂಗರು ಅನೇಕ ಇತಿಹಾಸಕಾರರು ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ವಿಜಯಪುರ ಭಾಗದಲ್ಲಿ ಅವರನ್ನು ಸ್ಮರಿಸುವ ಕಾರ್ಯ ಆಗಬೇಕಿದೆ. ಆದರೆ ಮೇಲ್ನೊಟಕ್ಕೆ ಕೆಲವೊಂದು ಸಮಿತಿಗಳನ್ನು ರಚಿಸಿ ಕಾರ್ಯಚಟುವಟಿಕೆ ಸಮಿತಿಯಿಂದ ನಡೆಯಬೇಕಿತ್ತೊ ಅದು ನಡೆದಿಲ್ಲ. ಕರ್ನಾಟಕ ವಿಭಿನ್ನವಾದ ರಾಜ್ಯವಿದ್ದರೂ, ಅದರಲ್ಲಿ ಸಾಹಿತ್ಯದ ಕೊಡುಗೆ ಇದೆ. ವಿಜಯಪುರ ಭಾಗದಲ್ಲಿ ಜನಪದ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ ಇತಿಹಾಸಕಾರರು, ಸಾಹಿತಿಗಳನ್ನು ಸ್ಮರಿಸುವ ಕಾರ್ಯ, ಸಂಸ್ಕೃತಿ ಭವನ, ಸಂಸ್ಕೃತಿಕ ಚಟುವಟಿಕೆಗಳನ್ನು ಅಲ್ಲಿ ನಡೆಯುವ ಕಾರ್ಯ ಮಾಡಬೇಕಾಗಿದೆ. ಹೀಗಾಗಿ ಇಂಡಿಯಲ್ಲಿ ಕನ್ನಡ ಭವನವನ್ನು ಹಾಗೂ ಸಾಹಿತ್ಯಕ್ಕಾಗಿ ಅನನ್ಯ ಸೇವೆ ಮಾಡುವಂಥ ಯುವ ಬರಹಗಾರರು, ಸಾಹಿತಿಗಳು ಇಲ್ಲಿದ್ದಾರೆ. ಅವರಿಗೆ ಅನುಕೂಲವಾಗು ಕಾರ್ಯಚಟುವಟಿಕೆಗಳು ಸಾಹಿತ್ಯ ಕ್ಷೇತ್ರದ ಮೂಲಕ ಇಂಡಿ ಭಾಗದಲ್ಲಿ ನಡೆಯಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸಭಾಧ್ಯಕ್ಷರ ಮೂಲಕ ಸಚಿವರ ಗಮನ ಸೆಳೆದರು.