ತುರುವೇಕೆರೆ ಪಪಂಗೆ ಸ್ವಪ್ನಾ ನಟೇಶ್ ಅಧ್ಯಕ್ಷೆ

| Published : Feb 06 2025, 11:48 PM IST

ಸಾರಾಂಶ

ಇಲ್ಲಿಯ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ 8ನೇ ವಾರ್ಡಿನ ಜೆಡಿಎಸ್ ಸದಸ್ಯೆ ಸ್ವಪ್ನಾ ನಟೇಶ್ ಅವಿರೋಧವಾಗಿ ಆಯ್ಕೆಯಾದರು

ಕನ್ನಡಪ್ರಭ ವಾರ್ತೆ, ತುರುವೇಕೆರೆ

ಇಲ್ಲಿಯ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ 8ನೇ ವಾರ್ಡಿನ ಜೆಡಿಎಸ್ ಸದಸ್ಯೆ ಸ್ವಪ್ನಾ ನಟೇಶ್ ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷರಾಗಿದ್ದ ಬಿಜೆಪಿಯ ಆಶಾರಾಣಿ ರಾಜಶೇಖರ್ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. 14 ಸದಸ್ಯರ ಬಲವಿರುವ ಈ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯೇ ಹೆಚ್ಚಿದೆ. ಆದಾಗ್ಯೂ ಸಹ ಜೆಡಿಎಸ್ ನ ಸದಸ್ಯೆ ಸ್ವಪ್ನಾ ನಟೇಶ್ ಗೆ ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಬೆಂಬಲ ನೀಡಿದುದು ಆಶ್ಚರ್ಯ ತರಿಸಿದೆ.

ಸ್ವಪ್ನಾ ನಟೇಶ್ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್ ಎನ್. ಎ. ಕುಂಇ ಅಹಮದ್ ರವರು ಸ್ವಪ್ನಾ ನಟೇಶ್ ರವರು ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷೆ ಭಾಗ್ಯ ಮಹೇಶ್, ಸದಸ್ಯರಾದ ಎನ್. ಆರ್.ಸುರೇಶ್, ಮಧು, ಪ್ರಭಾಕರ್, ಆಂಜನ್ ಕುಮಾರ್, ಯಜಮಾನ್ ಮಹೇಶ್, ಚಿದಾನಂದ್, ರವಿಕುಮಾರ್, ನದೀಂ, ಮೇಘನಾ ಸುನಿಲ್, ಜಯ್ಯಮ್ಮ, ಆಶಾರಾಣಿ ರಾಜಶೇಖರ್, ಶೀಲಾ ಶಿವಪ್ಪನಾಯಕ, ನಾಮಿನಿ ಸದಸ್ಯರಾದ ರುದ್ರೇಶ್ ಕುಮಾರ್, ಶ್ರೀನಿವಾಸ್ ಮೂರ್ತಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಾಥ್ ಪ್ರಭು ಭಾಗವಹಿಸಿದ್ದರು.

ನೂತನ ಅಧ್ಯಕ್ಷೆರನ್ನು ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಬಿಎಂಎಸ್ ಉಮೇಶ್, ನಾಗಲಾಪುರ ಮಂಜುನಾಥ್, ಟಿ.ಎನ್,ಶಿವರಾಜ್, ಗುತ್ತಿಗೆದಾರರಾದ ತ್ಯಾಗರಾಜ್, ಗುಡ್ಡೇನಹಳ್ಳಿ ಪ್ರಸನ್ನಕುಮಾರ್, ನಂಜುಂಡಪ್ಪ, ಶಂಕರೇಗೌಡ, ಉಮೇಶ್, ಪುಟ್ಟೇಗೌಡ , ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ನೇತ್ರಾವತಿ ಸೇರಿದಂತೆ ಹಲವಾರು ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಅಭಿನಂದಿಸಿದರು.