ರೈಲಲ್ಲಿ ಟಿಕೆಟ್‌ ರಹಿತ ಪ್ರಯಾಣ 9 ತಿಂಗಳಲ್ಲಿ ₹46 ಕೋಟಿ ದಂಡ: ನೈಋತ್ಯ ರೈಲ್ವೆ ಇತಿಹಾಸದಲ್ಲೇ ದಾಖಲೆ ಮೊತ್ತ!

| Published : Jan 18 2024, 02:02 AM IST / Updated: Jan 18 2024, 05:30 PM IST

South Wastern Railway
ರೈಲಲ್ಲಿ ಟಿಕೆಟ್‌ ರಹಿತ ಪ್ರಯಾಣ 9 ತಿಂಗಳಲ್ಲಿ ₹46 ಕೋಟಿ ದಂಡ: ನೈಋತ್ಯ ರೈಲ್ವೆ ಇತಿಹಾಸದಲ್ಲೇ ದಾಖಲೆ ಮೊತ್ತ!
Share this Article
  • FB
  • TW
  • Linkdin
  • Email

ಸಾರಾಂಶ

ನೈಋತ್ಯ ರೈಲ್ವೆಯು ಕಳೆದ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಟಿಕೆಟ್ ರಹಿತವಾಗಿ ಪ್ರಯಾಣಿಸಿದ 6,27,014 ಪ್ರಕರಣ ದಾಖಲಿಸಿಕೊಂಡು ₹46.31 ಕೋಟಿ ದಂಡ ಸಂಗ್ರಹಿಸಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ನೈಋತ್ಯ ರೈಲ್ವೆಯು ಕಳೆದ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಟಿಕೆಟ್ ರಹಿತವಾಗಿ ಪ್ರಯಾಣಿಸಿದ 6,27,014 ಪ್ರಕರಣ ದಾಖಲಿಸಿಕೊಂಡು ₹46.31 ಕೋಟಿ ದಂಡ ಸಂಗ್ರಹಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಶೇ.9.95ರಷ್ಟು ಹೆಚ್ಚಳವಾಗಿದ್ದು, ಇದು ನೈಋತ್ಯ ರೈಲ್ವೆ ಪ್ರಾರಂಭವಾದಾಗಿನಿಂದ ಅತೀ ಹೆಚ್ಚು ದಂಡ ವಸೂಲಿ ಆಗಿದೆ. ಡಿಸೆಂಬರ್ ತಿಂಗಳಲ್ಲಿ 72,041 ಪ್ರಕರಣ ದಾಖಲಿಸಿ ₹5.13 ಕೋಟಿ ದಂಡ ಸಂಗ್ರಹಿಸಲಾಗಿದೆ.

ಬೆಂಗಳೂರು ವಿಭಾಗದಲ್ಲೇ ಅತಿ ಹೆಚ್ಚು 3,68,205 ಪ್ರಕರಣ ದಾಖಲಿಸಿ, ₹28.26 ಕೋಟಿ ದಂಡ ಸಂಗ್ರಹಿಸಲಾಗಿದೆ. ಹುಬ್ಬಳ್ಳಿ ವಿಭಾಗ 96,790 ಪ್ರಕರಣ ದಾಖಲಿಸಿ ₹6.36 ಕೋಟಿ, ಮೈಸೂರು ವಿಭಾಗ 1,00,538 ಪ್ರಕರಣ ದಾಖಲಿಸಿ ₹5.91 ಕೋಟಿ ದಂಡ ಸಂಗ್ರಹಿಸಿದೆ. 

ನೈಋತ್ಯ ರೈಲ್ವೆಯ ಫ್ಲೈಯಿಂಗ್ ಸ್ಕ್ವಾಡ್ (ಕೇಂದ್ರ ಕಚೇರಿ) ವಿಭಾಗ 61,481 ಪ್ರಕರಣ ದಾಖಲಿಸಿ ₹5.77 ಕೋಟಿ ದಂಡ ಸಂಗ್ರಹಿಸಿದೆ.

ಟಿಕೆಟ್ ರಹಿತ ಮತ್ತು ಅನಿಯಮಿತ ಪ್ರಯಾಣ ತಡೆಯಲು ಎಕ್ಸ್ಪ್ರೆಸ್, ವಿಶೇಷ ರೈಲು ಸೇರಿದಂತೆ ಪ್ರಯಾಣಿಕರ ರೈಲುಗಳಲ್ಲಿ ಟಿಕೆಟ್ ತಪಾಸಣಾ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ. 

ರೈಲ್ವೆ ಕಾಯ್ದೆ ಪ್ರಕಾರ, ಯಾವುದೇ ಪ್ರಯಾಣಿಕರು ಪಾಸ್, ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಕಂಡುಬಂದಲ್ಲಿ ₹250 ದಂಡ ಕಟ್ಟಬೇಕಾಗುತ್ತದೆ. (ಪ್ರಯಾಣಿಕರು ಪ್ರಯಾಣಿಸಿದ ದೂರ, ರೈಲು ಪ್ರಾರಂಭವಾದ ನಿಲ್ದಾಣದಿಂದ ಸಾಮಾನ್ಯ ಶುಲ್ಕ ಮತ್ತು ಹೆಚ್ಚುವರಿ ಶುಲ್ಕ ₹250) ವಿಧಿಸಲಾಗುತ್ತದೆ. 

ಟಿಕೆಟ್ ತಪಾಸಣೆಯಲ್ಲಿ ಹೆಚ್ಚಿನ ಪ್ರಕರಣ ದಾಖಲಿಸಿದ ಸಿಬ್ಬಂದಿಯನ್ನು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಶ್ಲಾಘಿಸಿದ್ದಾರೆ.ಬಿಎಂಟಿಸಿಯಿಂದ ₹7.37 ಲಕ್ಷ ವಸೂಲಿ

ಕನ್ನಡಪ್ರಭ ವಾರ್ತೆ ಬೆಂಗಳೂರುಬಿಎಂಟಿಸಿ ಜಾಗೃತ ದಳ ಡಿಸೆಂಬರ್‌ ತಿಂಗಳಲ್ಲಿ 16,785 ಟ್ರಿಪ್‌ಗಳ ತಪಾಸಣೆ ನಡೆಸಿ 3,502 ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ₹7.02 ಲಕ್ಷ ದಂಡ ವಸೂಲಿ ಮಾಡಿದೆ. 

ಜತೆಗೆ ನಿರ್ವಾಹಕರ ವಿರುದ್ಧ 1,085 ಪ್ರಕರಣಗಳನ್ನು ದಾಖಲಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಮೀಸಲಿರಿಸಲಾಗಿದ್ದ ಆಸನಗಳಲ್ಲಿ ಕುಳಿತಿದ್ದ 347 ಪುರುಷ ಪ್ರಯಾಣಿಕರಿಂದ ₹34,700 ದಂಡ ವಸೂಲಿ ಮಾಡಲಾಗಿದೆ. 

ಒಟ್ಟಾರೆ ಡಿಸೆಂಬರ್‌ ತಿಂಗಳಲ್ಲಿ 3,849 ಪ್ರಯಾಣಿಕರಿಂದ ₹7.37 ಲಕ್ಷ ದಂಡ ವಸೂಲಿ ಮಾಡಿರುವುದಾಗಿ ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.