ದುಗ್ಗಳ ಸದಾನಂದ ನಾಪೋಕ್ಲು

ಇಲ್ಲಿನ ಜನರಲ್ ಕೆ..ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಶನಿವಾರದ ಪಂದ್ಯಗಳಲ್ಲಿ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.

ಪಾಡೆಯಂಡ ಮತ್ತು ಚೇಂದಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಎರಡೂ ತಂಡಗಳು ಯಾವುದೇ ಗೋಲು ಗಳಿಸಲಿಲ್ಲ. ಬಳಿಕ ಟೈ ಬ್ರೇಕರ್ ನಲ್ಲಿ ಪಾಡೆಯಂಡ 8-7 ರಿಂದ ಚೇಂದಂಡ ವಿರುದ್ಧ ಗೆಲುವು ಸಾಧಿಸಿತು. ಕುಪ್ಪಂಡ (ಕೈಕೇರಿ ) ಮತ್ತು ಕಂಬಿರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು 2-2 ಗೋಲು ಗಳಿಸಿ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್ ನಲ್ಲಿ ಕಂಬೀರಂಡ ಕುಪ್ಪಂಡ (ಕೈಕೇರಿ) ವಿರುದ್ಧ 5-3 ರಿಂದ ಜಯ ಸಾಧಿಸಿತು.

ಇಟ್ಟಿರ ಮತ್ತು ಮಚ್ಚಾರಂಡ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆಯಿತು. ಎರಡು ತಂಡಗಳು 1-1 ಗೋಲು ಗಳಿಸಿದವು. ನಂತರ ಟೈ ಬ್ರೇಕರ್ ನಲ್ಲಿ ಇಟ್ಟಿರ 4-2ರಿಂದ ಮಚ್ಚಾರಂಡ ವಿರುದ್ಧ ಗೆಲುವು ಸಾಧಿಸಿತು. ಪರದಂಡ ಮೇಕೇರಿರ ವಿರುದ್ಧ ಟೈ ಬ್ರೇಕರ್ ನಲ್ಲಿ 3-0 ಯಿಂದ ಜಯ ಗಳಿಸಿತು.

ನೆಲ್ಲಮಕ್ಕಡ ಕೊಲ್ಲಿರ ವಿರುದ್ಧ 4-0 ಇಂದ, ಅರಮನೆ ಮಾಡ ಮುಕ್ಕಾಟಿರ ( ಹರಿಹರ ) ವಿರುದ್ಧ 1-0 ಯಿಂದ, ಕೋಳೆರ ಸೋಮಯಂಡ ವಿರುದ್ಧ 2-1ರಿಂದ, ಮಂಡೆಪಂಡ ಚೇನಂಡ ವಿರುದ್ಧ 4-2 ರಿಂದ, ಚೆಪ್ಪುಡಿರ ಬೊಟ್ಟೋಳಂಡ ವಿರುದ್ಧ 5-0 ಯಿಂದ ಗೆಲುವು ಸಾಧಿಸಿದವು.ಮಹಿಳಾ ವಿಭಾಗ ಶನಿವಾರ ಆರಂಭ: ಮಹಿಳಾ ವಿಭಾಗದಲ್ಲಿ ಕೊಂಡಿರ ಕೋಡಿಮಣಿಯಂಡ ವಿರುದ್ಧ 2-0 ಯಿಂದ, ಚೆಪ್ಪುಡಿರ, ಬೊಟ್ಟೋಳಂಡ ವಿರುದ್ಧ 5-0ಯಿಂದ, ಚೆಯ್ಯಂಡ ಕಳ್ಳೆಂಗಡ ವಿರುದ್ಧ 3-2ರಿಂದ, ಪಾಡೆಯಂಡ ಚಾರಿಮಂಡ ವಿರುದ್ಧ 1-0ಯಿಂದ, ಚೆಚಪ್ಪುಡಿರ ಚೇಂದೀರ ವಿರುದ್ಧ 2-0 ಯಿಂದ, ಚಿಂಡಮಾಡ ಅಜ್ಜಿನಿ ಕಂಡ ವಿರುದ್ಧ 3-0ಯಿಂದ, ಕನ್ನಂಡ ಕುಟ್ಟಂಡ(ಕಾರ್ಮಾಡ್) ವಿರುದ್ಧ 1-0ಯಿಂದ, ಅದೆಂಗಡ ನಾಟ್ರೊಳಂಡ ವಿರುದ್ಧ 4-000 ಇಂದ, ಪೊನ್ನಚೆಟ್ಟಿರ ಕುಟ್ಟಂಡ ( ಅಮ್ಮತಿ) ವಿರುದ್ಧ 2-1ರಿಂದ , ಕಂಬೀರಂಡ ಕೊಂಡಿರ ವಿರುದ್ಧ 2-0ಯಿಂದ, ಪಾಡೆಯಂಡ ಬೈರಚಂಡ ವಿರುದ್ಧ 2-0 ಯಿಂದ , ಚೆಪ್ಪುಡಿರ ಚಿಂದ ಮಾಡ ವಿರುದ್ಧ 4-0ಯಿಂದ, ಕಲಿಯಂಡ ಮಂಡೆಪಂಡ ವಿರುದ್ಧ 1-0ಯಿಂದ, ಅದೇಂಗಡ ಕನ್ನಂಡ ವಿರುದ್ಧ 1-0ಯಿಂದ, ಬಲ್ಲಚಂಡ ಮುದ್ದಂಡ ವಿರುದ್ಧ 1-0ಯಿಂದ ಗೆಲುವು ಸಾಧಿಸಿದವು.


ಕುಟ್ಟಂಡ (ಮಾದಾಪುರ), ಚೆಯ್ಯಂಡ ಹಾಗೂ ಕೂತಂಡ ತಂಡಗಳು ವಾಕ್‌ ಓವರ್ ಪಡೆದವು.