ಸಾರಾಂಶ
ಚಿರತೆ ಉಗುರು 7, ಉಡದ ಚರ್ಮ 1, ಕಿಂಗ್ ಫಿಶರ್ ಪಕ್ಷಿ ಕೊಕ್ಕು, 1 ನಾಡ ಬಂದೂಕು, 1 ಗಂಧದ ಉತ್ಪನ್ನ, 0.500 ಗ್ರಾಂ ಪಕ್ಷಿ ಬಲೆ ವಶ.
ಜೋಯಿಡಾ:
ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಐವರನ್ನು ಬಂಧಿಸಿದೆ. ಗುಂದ ವನ್ಯಜೀವಿ ವಲಯದ ಶಿವಪುರದಲ್ಲಿ ಅರಣ್ಯ ಇಲಾಖೆಯ ಗುಂದ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ ನೇತೃತ್ವದಲ್ಲಿ ದಾಳಿ ನಡೆಸಿ ನಾರಾಯಣ ತಿಮ್ಮಣ್ಣ ಮಹಾಲೆ, ರಘುನಾಥ ಮಹಾಲೆ, ಸುಧಾಕರ ವಾಡ್ಡೋ ಮಹಾಲೆ, ಮಾರುತಿ ಕೃಷ್ಣಮೂರ್ತಿ ಲಕ್ಕೊಳ್ಳಿ ಶಶಾಂಕ, ನಾರಾಯಣ ಮಹಾಲೆ ಅವರನ್ನು ಬಂಧಿಸಿ ಇವರಿಂದ ಚಿರತೆ ಉಗುರು 7, ಉಡದ ಚರ್ಮ 1, ಕಿಂಗ್ ಫಿಶರ್ ಪಕ್ಷಿ ಕೊಕ್ಕು, 1 ನಾಡ ಬಂದೂಕು, 1 ಗಂಧದ ಉತ್ಪನ್ನ, 0.500 ಗ್ರಾಂ ಪಕ್ಷಿ ಬಲೆ, ಮದ್ದು ಹಾಗೂ ಹುಸಿ ಬಾಂಬ್ ಮತ್ತು ಕಡವೆ ಮಾಂಸ ವಶಪಡಿಸಿಕೊಳ್ಳಲಾಗಿದೆ. ಅಪರಾಧಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.