ಹುಲಿ ಉಗುರು: ಅರಣ್ಯಾಧಿಕಾರಿ ವಿರುದ್ಧ ದೂರು

| Published : Oct 27 2023, 12:30 AM IST / Updated: Oct 27 2023, 12:31 AM IST

ಸಾರಾಂಶ

ಹುಲಿ ಉಗುರು: ಅರಣ್ಯಾಧಿಕಾರಿ ವಿರುದ್ಧ ದೂರು
ಚಿಕ್ಕಮಗಳೂರು: ಹುಲಿ ಉಗುರು ಪ್ರಕರಣವೊಂದು ಅರಣ್ಯಾಧಿಕಾರಿಗಳ ಕೊರಳಿಗೆ ಸುತ್ತಿಕೊಂಡಿದೆ. ಜಿಲ್ಲೆಯ ಕಳಸದ ಉಪ ವಲಯ ಅರಣ್ಯಾಧಿಕಾರಿ ದರ್ಶನ್‌ ವಿರುದ್ಧ ಅರೆನೂರು ಗ್ರಾಮದ ಸುಪ್ರೀತ್‌ ಹಾಗೂ ಅಬ್ದುಲ್‌ ಎಂಬುವವರು ದೂರು ನೀಡಿದ್ದಾರೆ. ಆಲ್ದೂರಿನ ವಲಯ ಅರಣ್ಯಾಧಿಕಾರಿ ಹರೀಶ್‌ ಅವರಿಗೆ ಗುರುವಾರ ದೂರನ್ನು ಸಲ್ಲಿಸಲಾಗಿದೆ. ಡಿಆರ್‌ಎಫ್‌ಒ ದರ್ಶನ್‌ ಅವರು ಹುಲಿ ಉಗುರು ಧರಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕೆಂದು ದೂರನ್ನು ನೀಡಿದ್ದಾರೆ. ಈ ಸಂಬಂಧ ಗುರುವಾರವೇ ಮೂಡಿಗೆರೆಯ ಎಸಿಎಫ್‌ ಎದುರು ವಿಚಾರಣೆಗೆ ಹಾಜರಾಗುವಂತೆ ದರ್ಶನ್‌ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ, ಅವರು ಹಾಜರಾಗಿರಲಿಲ್ಲ, ಶುಕ್ರವಾರ ಹಾಜರಾಗಲೇಬೇಕೆಂದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.