ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಕಾಲಘಟ್ಟ: ಜಯರಾಮ್

| Published : Mar 05 2025, 12:30 AM IST

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಕಾಲಘಟ್ಟ: ಜಯರಾಮ್
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಎಸ್.ಎಲ್.ಸಿ ಹಂತ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಕಾಲಘಟ್ಟ. ಹೀಗಾಗಿ ಪರೀಕ್ಷೆಯನ್ನು ಯಾವುದೇ ಭಯ, ಆತಂಕ ಇಲ್ಲದೆ ಎದುರಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಜಯರಾಮ್ ಹೇಳಿದರು.

ರಾಮನಗರ: ಎಸ್.ಎಸ್.ಎಲ್.ಸಿ ಹಂತ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಕಾಲಘಟ್ಟ. ಹೀಗಾಗಿ ಪರೀಕ್ಷೆಯನ್ನು ಯಾವುದೇ ಭಯ, ಆತಂಕ ಇಲ್ಲದೆ ಎದುರಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಜಯರಾಮ್ ಹೇಳಿದರು.

ನಗರದ ಬಾಲಗೇರಿಯ ಸಮುದಾಯ ಭವನದಲ್ಲಿ ಆದಿ ದ್ರಾವಿಡ ಸಂಘದ ವತಿಯಿಂದ ಆಯೋಜನೆಯಾಗಿದ್ದ ತರಬೇತಿ ಶಿಬಿರದಲ್ಲಿ ಅವರು, ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು, ಪಾಠದ ಅಭ್ಯಾಸ ಹೇಗಿರಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಜೀವನದ ದಿಕ್ಕನ್ನು ಬದಲಿಸುವ ಸಾಧ್ಯತೆಗಳು ಹೆಚ್ಚು. ಮುಂದಿನ ವಿದ್ಯಾಭ್ಯಾಸಕ್ಕೆ ಈ ಹಂತ ನಿರ್ಣಾಯಕ. ಸತತ ಅಭ್ಯಾಸದಿಂದ ಪರೀಕ್ಷಗಳನ್ನು ಸುಲಭವಾಗಿ ಎದುರಿಸಬಹುದು ಎಂದು ತಿಳಿಸಿದರು.

ಆದಿ ದ್ರಾವಿಡ ಸಂಘದ ಹಿರಿಯ ನಿರ್ದೇಶಕ ವಿ.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಬಗ್ಗೆ ಇರುವ ಆತಂಕವನ್ನು ನಿವಾರಿಸುವುದು ತಮ್ಮ ಸಂಘದ ಉದ್ದೇಶಗಳಲ್ಲಿ ಒಂದು, ಹೀಗಾಗಿ ಇದೊಂದು ಪ್ರಯತ್ನ ನಡೆದಿದೆ ಎಂದರು. ಸಂಘದ ಖಜಾಂಚಿ ವೆಂಕಟೇಶ, ಹಿರಿಯ ನಿರ್ದೇಶಕರಾದ ಸುಬ್ರಹ್ಮಣ್ಯಂ, ಮುತ್ತುರಾಜು, ಉಪಾಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಸಿ.ಪ್ರಭು ಮತ್ತಿತರರು ಉಪಸ್ಥಿತರಿದ್ದರು.