ಸಾರಾಂಶ
ಟಿಪ್ಪರಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿತ್ತು. ಸಾಗಾಟ ಮಾಡುವವರು ತರಾತುರಿಯಲ್ಲಿ ಬೇರೊಂದು ಟಿಪ್ಪರನ್ನು ಕೂಜಲೇ ಸ್ಥಳಕ್ಕೆ ಕರೆಸಿ ಮರಳು ತೆರವುಗೊಳಿಸಿ ಕ್ರೇನ್ ಮೂಲಕ ಟಿಪ್ಪರನ್ನು ಮೇಲಕ್ಕೆತ್ತಿದ್ದಾರೆ.
ಮೂಲ್ಕಿ: ಮೂಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೇ ಮೇಲ್ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ರಸ್ತೆ ಬದಿಯ ಬೃಹತ್ ಹೊಂಡಕ್ಕೆ ಜಾರಿರುವ ಘಟನೆ ನಡೆದಿದೆ.
ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್‌ಗೆ ಕುಬೆವೂರು ರೈಲ್ವೇ ಮೇಲ್ಸೇತುವೆ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಅಡ್ಡ ಬಂದಿದ್ದಾರೆ. ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಮಾರು 20 ಅಡಿ ಆಳದ ಹೊಂಡಕ್ಕೆ ಇಳಿದಿದೆ. ಮರವೊಂದು ಅಡ್ಡವಿದ್ದ ಕಾರಣ ಟಿಪ್ಪರ್ ಅದಕ್ಕೆ ನಿಂತ ಕಾರಣ ಅಪಾಯ ತಪ್ಪಿದೆ. ಅಪಘಾತದಿಂದ ಕೆಲವು ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಟಿಪ್ಪರಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿತ್ತು. ಸಾಗಾಟ ಮಾಡುವವರು ತರಾತುರಿಯಲ್ಲಿ ಬೇರೊಂದು ಟಿಪ್ಪರನ್ನು ಕೂಜಲೇ ಸ್ಥಳಕ್ಕೆ ಕರೆಸಿ ಮರಳು ತೆರವುಗೊಳಿಸಿ ಕ್ರೇನ್ ಮೂಲಕ ಟಿಪ್ಪರನ್ನು ಮೇಲಕ್ಕೆತ್ತಿದ್ದಾರೆ.