ಪರ್ಮಿಟ್‌ ಇಲ್ಲದೆ ಓಡಾಟ ತಹಸೀಲ್ದಾರ್‌ರಿಂದ ಟಿಪ್ಪರ್‌ ವಶ

| Published : Aug 30 2025, 01:00 AM IST

ಪರ್ಮಿಟ್‌ ಇಲ್ಲದೆ ಓಡಾಟ ತಹಸೀಲ್ದಾರ್‌ರಿಂದ ಟಿಪ್ಪರ್‌ ವಶ
Share this Article
  • FB
  • TW
  • Linkdin
  • Email

ಸಾರಾಂಶ

ತಹಸೀಲ್ದಾರ್‌ ತನ್ಮಯ್‌ ಎಂ.ಎಸ್ ಟಿಪ್ಪರ್‌ ಹಿಡಿದು ತಪಾಸಣೆ ನಡೆಸಿದಾಗ ಪರ್ಮಿಟ್‌ ಹಾಗೂ ಹೆಚ್ಚುವರಿ ಭಾರವಿದ್ದ ಆರು ಟಿಪ್ಪರ್‌ ಗಳನ್ನು ಹಿರೀಕಾಟಿ ಗೇಟ್‌ ಸುತ್ತ ಮುತ್ತ ಶುಕ್ರವಾರ ಮಧ್ಯಾಹ್ನ ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಹಸೀಲ್ದಾರ್‌ ತನ್ಮಯ್‌ ಎಂ.ಎಸ್ ಟಿಪ್ಪರ್‌ ಹಿಡಿದು ತಪಾಸಣೆ ನಡೆಸಿದಾಗ ಪರ್ಮಿಟ್‌ ಹಾಗೂ ಹೆಚ್ಚುವರಿ ಭಾರವಿದ್ದ ಆರು ಟಿಪ್ಪರ್‌ ಗಳನ್ನು ಹಿರೀಕಾಟಿ ಗೇಟ್‌ ಸುತ್ತ ಮುತ್ತ ಶುಕ್ರವಾರ ಮಧ್ಯಾಹ್ನ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಹಿರೀಕಾಟಿ ಗ್ರಾಮದ ಎಸ್‌ಎಲ್‌ವಿ ಕ್ರಸರ್‌ ಮಾಲೀಕ ಆರ್.ಯಶವಂತಕುಮಾರ್‌ಗೆ ಸೇರಿದ ಐದು ಟಿಪ್ಪರ್‌ ಗಳಲ್ಲಿ ನಾಲ್ಕು ಟಿಪ್ಪರ್‌ ಗಳಿಗೆ ಪರ್ಮಿಟ್‌ ಇಲ್ಲ. ಜೊತೆಗೆ ಹೆಚ್ಚು ಭಾರವಿರುವುದು ಪತ್ತೆಯಾಗಿದೆ. ಆರು ಟಿಪ್ಪರ್‌ ಗಳನ್ನು ನಾಲ್ಕು ಟಿಪ್ಪರ್‌ ಗಳನ್ನು ಬೇಗೂರು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಇನ್ನೆರಡು ಟಿಪ್ಪರ್‌ಗಳಲ್ಲಿ ಒಂದು ಟಿಪ್ಪರ್‌ ಸ್ಟಾಟ್‌ ಆಗದ ಕಾರಣ ಹಾಗೂ ಮತ್ತೊಂದು ಟಿಪ್ಪರ್‌ ಕೀ ಇಲ್ಲದ ಕಾರಣ ಕಂದಾಯ ಸಿಬ್ಬಂದಿ ಕಾವಲು ಹಾಕಲಾಗಿದೆ. ಕದ್ದು ಕಲ್ಲು ಸಾಗಿಸುತ್ತಿದ್ದ ಹಾಗೂ ಹೆಚ್ಚುವರಿ ಭಾರವಿದ್ದ ಟಿಪ್ಪರ್‌ ಗಳ ಮೇಲೆ ಕ್ರಮಕ್ಕೆ ತಹಸೀಲ್ದಾರ್‌ ತನ್ಮಯ್‌ ಎಂ.ಎಸ್‌. ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದಿದ್ದಾರೆ.ಇತ್ತೀಚಿಗೆ ೨ ಟಿಪ್ಪರ್‌ಗೆ ದಂಡ ಕಟ್ಟಿದ್ರು:

ಇತ್ತೀಚಿಗೆ ಎಸ್‌ಎಲ್‌ವಿ ಕ್ರಸರ್‌ ಮಾಲೀಕ ಹಿರೀಕಾಟಿ ಆರ್.ಯಶವಂತಕುಮಾರ್‌ಗೆ ಸೇರಿದ ಎರಡು ಟಿಪ್ಪರ್‌ ನಲ್ಲಿ ಪರ್ಮಿಟ್‌ ಇಲ್ಲದೆ ಅಕ್ರಮವಾಗಿ ಕಲ್ಲು ಸಾಗಿಸುವಾಗ ಸಿಕ್ಕಿ ಬಿದ್ದು ಲಕ್ಷಾಂತರ ದಂಡ ಕಟ್ಟಿದ್ದರು. ಅಲ್ಲದೆ ಕ್ರಸರ್‌ ನಲ್ಲಿ ಬಾಲ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದಾರೆ ಎಂದು ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರ್ಮಿಟ್‌ ಇಲ್ಲದೆ ಕಲ್ಲನ್ನು ಅಕ್ರಮವಾಗಿ ಕದ್ದು ಸಾಗಾಣಿಕೆ ಮಾಡುತ್ತಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಅಕ್ರಮವಾಗಿ ಕಲ್ಲು ಸಾಗಿಸುವ ಟಿಪ್ಪರ್‌ ಗಳ ಮಾಲೀಕರ ಮೇಲೆ ಜಿಲ್ಲಾಡಳಿತ ಕ್ರಮ ಜರುಗಿಸುವುದೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ತಪಾಸಣೆ ಸಮಯದಲ್ಲಿ ತಹಸೀಲ್ದಾರ್‌ರೊಂದಿಗೆ ರಾಜಸ್ವ ನಿರೀಕ್ಷಕ ಗಂಗಾಧರ್‌, ಗ್ರಾಮ ಆಡಳಿತ ಅಧಿಕಾರಿ ಸಿ.ಮಹದೇವಪ್ಪ ಹಾಗೂ ಸಿಬ್ಬಂದಿ ಇದ್ದರು.