ನಮ್ಮ ತಾತ ಡಾ. ರಾಜ್ ಹಾಗೂ ನಮ್ಮ ಕುಟುಂಬದವರೆಲ್ಲರಿಗೂ ತಿಪಟೂರಿನ ಮೇಲೆ ವಿಶೇಷ ಪ್ರೀತಿ, ಗೌರವ ಎಂದು ಡಾ. ರಾಜ್ ಕುಟುಂಬದ ಯುವಕುಡಿ ನಟ ವಿನಯ್ ರಾಜಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ, ತಿಪಟೂರುನಮ್ಮ ತಾತ ಡಾ. ರಾಜ್ ಹಾಗೂ ನಮ್ಮ ಕುಟುಂಬದವರೆಲ್ಲರಿಗೂ ತಿಪಟೂರಿನ ಮೇಲೆ ವಿಶೇಷ ಪ್ರೀತಿ, ಗೌರವ ಎಂದು ಡಾ. ರಾಜ್ ಕುಟುಂಬದ ಯುವಕುಡಿ ನಟ ವಿನಯ್ ರಾಜಕುಮಾರ್ ಹೇಳಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಅದ್ದೂರಿ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಿಪಟೂರು ಎಂದರೆ ಫ್ರೆಂಡ್‌ಶೆಪ್‌ಗೆ ಹೆಸರುವಾಸಿಯಾಗಿದೆ. ನನ್ನ ತಾತನವರಾದ ಡಾ. ರಾಜ್‌ಕುಮಾರ್ ರವರ ಬೆರಳೆಣಿಕೆಯಷ್ಟು ಪ್ರಾಣ ಸ್ನೇಹಿತರಲ್ಲಿ ತಿಪಟೂರು ರಾಮಸ್ವಾಮಿಯವರೇ ಮೊದಲಿಗರು. ಹಾಗಾಗಿ ನಮ್ಮ ಕುಟುಂಬದವರು ಒಟ್ಟಿಗೆ ಈ ಮಾರ್ಗದಲ್ಲಿ ಬರಲಿ ಅಥವಾ ನಾವ್ಯಾರಾದರೂ ತಿಪಟೂರಿಗೆ ಬಂದಾಗಲೂ ನಾವು ಅವರನ್ನು ಭೇಟಿ ಮಾಡದೆ ಒಂದು ಬಾರಿಯೂ ಹೋಗುವುದಿಲ್ಲ. ನಾನು ಸೆಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ಓದಿದ್ದು, ಅಲ್ಲಿ ನಾನು ಸಾವಿರಾರು ಸ್ನೇಹಿತರನ್ನು ಸಂಪಾದನೆಯನ್ನು ಮಾಡಿದ್ದೇನೆ. ನೀವು ಕೂಡ ಸ್ನೇಹಿತರನ್ನು ಮಾಡಿಕೊಂಡು ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಿರಿ. ನನ್ನ ಇತ್ತೀಚಿನ ಸಿನಿಮಾವಾದಂತಹ ಗ್ರಾಮಾಯಣವು ಏಪ್ರಿಲ್ ಅಥವಾ ಮೇ ನಲ್ಲಿ ತೆರೆಕಾಣಲಿದೆ. ನೀವು ಕನ್ನಡ ಚಲನಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದ ಅವರು, ಚಲನಚಿತ್ರದ ಟೀಸರ್ ಅನ್ನು ರಿಲೀಸ್ ಮಾಡಿ ಹಾಗೂ ಆ ಚಿತ್ರದ ಒಂದು ಹಾಡಿನ ನೃತ್ಯವನ್ನು ವಿದ್ಯಾರ್ಥಿಗಳ ಜೊತೆ ಮಾಡಿ ಎಲ್ಲರನ್ನು ಸಂತೋಷಿಸಿ ಸಂಭ್ರಮಿಸಿದರು.ಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜು ಮಾತನಾಡಿ ಪುಟ್ಟಸ್ವಾಮಯ್ಯ ಮುತ್ತುರಾಜ್ ಡಾ.ರಾಜ್‌ಕುಮಾರ್ ರವರ ಮೊಮ್ಮಗ ರಾಘವೇಂದ್ರ ರಾಜಕುಮಾರ್ ರವರ ಮಗ ವಿನಯ್ ರಾಜಕುಮಾರ್, ಡಾ. ರಾಜ್‌ಕುಮಾರ್ ಕುಟುಂಬವು ಕೇವಲ ಒಂದು ಕುಟುಂಬವಲ್ಲ. ಅದು ಕನ್ನಡ ಚಿತ್ರರಂಗದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಡಾ.ರಾಜ್‌ಕುಮಾರ್ ಅವರು ತಮ್ಮ ಅಭಿನಯ ಮತ್ತು ಮೌಲ್ಯಗಳ ಮೂಲಕ ಕನ್ನಡ ಜನರ ಹೃದಯಗಳಲ್ಲಿ ಅಚ್ಚಳಿಯದ ಗುರುತು ಬಿಟ್ಟಿದ್ದಾರೆ. ಈ ಮಹಾನ್ ಪರಂಪರೆಯನ್ನು ಅವರ ಮಕ್ಕಳು, ಮೊಮ್ಮಕ್ಕಳು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದು ಆ ನಿಟ್ಟಿನಲ್ಲಿ ವಿನಯ್ ರಾಜ್‌ಕುಮಾರ್ ರವರು ಪರಂಪರೆ ಮತ್ತು ಆಧುನಿಕತೆಯನ್ನು ಸಂಯೋಜಿಸಿಕೊಂಡು ತಮ್ಮದೇ ಆದ ಗುರುತನ್ನು ನಿರ್ಮಿಸುತ್ತಿದ್ದಾರೆ ಎಂದು ತಿಳಿಸಿದರು.ಚಿತ್ರ ನಿರ್ದೇಶಕರಾದ ದೇವನೂರು ಚಂದ್ರು ಗ್ರಾಮಾಯಣ ಇವರು ಮಾತನಾಡಿ, ನನ್ನ ಕಾಲೇಜಿನ ದಿನಗಳಲ್ಲಿ ನನ್ನಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ನನ್ನ ಸ್ನೇಹಿತರು ನನಗೆ ಸಹಾಯವನ್ನು ಮಾಡಿ ಇಷ್ಟು ಎತ್ತರಕ್ಕೆ ಬರಲಿಕ್ಕೆ ಅವರೇ ಕಾರಣಕರ್ತರು ಅದರಿಂದ ನೀವುಗಳು ಕೂಡ ಜೀವನದಲ್ಲಿ ಒಳ್ಳೆಯ ಸ್ನೇಹಿತರನ್ನು ಗಳಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಹೇಳಿದರು.ಸಮಾರಂಭದಲ್ಲಿ ಕೆವಿಎಸ್ ಉಪಾಧ್ಯಕ್ಷರುಗಳಾದ ಬಾಗೇಪಲ್ಲಿ ನಟರಾಜು, ಬಿ.ಎಸ್.ಉಮೇಶ್, ಜಿ.ಪಿ.ದೀಪಕ್, ಟಿ.ಎಸ್.ಬಸವರಾಜು ಕಾರ್ಯದರ್ಶಿಗಳಾದ ಜಿ.ಎಸ್.ಉಮಾಶಂಕರ್, ಆರ್.ಎಂ.ಸಂಗಮೇಶ್, ಟಿ.ಯು.ಜಗದೀಶಮೂರ್ತಿ, ಹೆಚ್.ಜಿ.ಸುಧಾಕರ್, ಹಾಗೂ ರಾಷ್ಟ್ರೀಯ ಕ್ರೀಡಾಪಟು ಮತ್ತು ಖಜಾಂಚಿಗಳಾದ ಟಿ.ಎಸ್.ಶಿವಪ್ರಸಾದ್, ಪ್ರಾಂಶುಪಾಲರು ಡಾ.ಹೆಚ್.ಸಿ. ಸತೀಶ್‌ಕುಮಾರ್. ಹಾಗೂ ಕೆ.ಐ.ಟಿ. ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಎಸ್. ಜಯಂತ್, sಸಾಂಸ್ಕೃತಿಕ ಸಂಯೋಜಕಿ ಡಾ.ಚಂದ್ರಕಲಾ ಇತರರು ಇದ್ದರು.